ಕೋಲಾರ ಜಿಲ್ಲೆ ನಿರ್ಲಕ್ಷಿಸಿದ ಕೇಂದ್ರ ವಿತ್ತ ಸಚಿವರ ಬಜೆಟ್
ಕೋಲಾg,ಜು.೨೪:ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲ ಸೀತಾರಾಮನ್ ರವರು ಮಂಡಿಸಿರುವ ಬಜೆಟ್ ಕೋಲಾರ ಜಿಲ್ಲೆಗೆ ಯಾವುದೇ ರೀತಿ ಅನುದಾನವಿಲ್ಲದ ಬಜೆಟ್ ಒಟ್ಟಾರೆಯಾಗಿ ಹೇಳುವುದಾದರೆ ಕೋಲಾರ ಜಿಲ್ಲೆ ಮತ್ತು ಕರ್ನಾಟಕ ರಾಜ್ಯವನ್ನು ನಿರ್ಲಕ್ಷಿಸಿ ಮಂಡಿಸಿರುವ ಬಜೆಟ್ ಎಂದು ರೈತನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವ ಮಂಜಲಿ ರಾಮುಶಿವಣ್ಣ ಟೀಕಿಸಿದ್ದಾರೆ.
ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮುಂದೆಯಾದರೂ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಳಿಗೆ ಹಾಗೂ ಕೋಲಾರ ಬೆಂಗಳೂರು ನೇರ ರೈಲು ಸಂಪರ್ಕ ಕಲ್ಪಿಸಬೇಕು. ಇದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಬಹು ದಿನಗಳ ಬೇಡಿಕೆ ಆದಷ್ಟು ಬೇಗ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಿ ಖಾಲಿ ಇರುವ ಹುದ್ದೆಗಳನ್ನು ಕೇಂದ್ರ ಸರ್ಕಾರ ತುಂಬಿಕೊಳ್ಳಬೇಕು ಅಭಿವೃದ್ಧಿಗೆ ಹಣವನ್ನು ನೀಡಲು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಬಿಸಿ ಊಟ ನೌಕರರಿಗೆ ೮೦೦ ರಿಂದ ೯೦೦ ನೀಡುತ್ತಿದ್ದಾರೆ. ಇಷಕ್ಕೆ ಜೀವನ ನಡೆಸುವುದಕ್ಕೆ ಆಗುತ್ತೆ ಕೂಡಲೇ ಕನಿಷ ವೇತನ ೧೦,೫೦೦ ಕೇಂದ್ರ ಸರ್ಕಾರ ಮಂಜೂರು ಮಾಡಬೇಕು ಬಿಸಿಯೂಟ ನೌಕರರ ಪರವಾಗಿ ಬಜೆಟ್ ಮಂಡನೆ ಮಾಡಬೇಕಾಗಿತ್ತು ಅದು ಸಹ ಮಾಡಿಲ್ಲ ಅಲ್ಲಿ ಬಜೆಟ್ ಬಡ ಮಹಿಳೆಯರ ಪರವಾಗಿ ಇಲ್ಲದ ಬಜೆಟ್ ಆಗಿದೆ ಎಂದು ರುಒತ್ತಾಯಿಸಿದ್ದಾರೆ.