ಉತ್ತರ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಿದ ಗೋದ್ರೇಜ್ ಜರ್ಸಿ
ಬೀದರ್ : ಜು.೨೪:ಕಲ್ಬುರ್ಗಿಯಲ್ಲಿ ಜರ್ಸಿ ಪಾರ್ಲರ್‌ಗಳನ್ನು ಪ್ರಾರಂಭಿಸಿದ ಬೆನ್ನಲ್ಲಿಯೇ ಗೋದ್ರೇಜ್ ಜರ್ಸಿ ಸಂಸ್ಥೆ ಇದೀಗ ಹೊಸತಾಗಿ ಕರ್ನಾಟಕz ಬೀದರನಲ್ಲಿ ಮೂರುಪಾಲರ್‌ಗಳನ್ನು ಪ್ರಾರಂಭ ಮಾಡಿದೆ. ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳ ಅತ್ಯುತ್ತಮ ಶ್ರೇಣಿಯನ್ನು ಗ್ರಾಹಕರಿಗೆ ಒದಗಿಸುವಸಲುವಾಗಿ ಈ ಜರ್ಸಿ ಪಾಲರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ಹಾಲಿನಿಂದ ಹಿಡಿದು ಮೊಸರಿನವರೆಗೆ, ಹಾಲನ್ನು ಬಳಸಿ ತಯಾರಿಸಿದ ಪಾನೀಯಗಳಿಂದ ಹಿಡಿದು ಐಸ್ಕ್ರೀಂವರೆಗೆ, ಜೊತೆಗೆ ತುಪ್ಪ, ಪೇಡಾ, ಪನ್ನಿರ್ ಮತ್ತು ಇತರೆ ಜರ್ಸಿ ಉತ್ಪನ್ನಗಳನ್ನು ಗ್ರಾಹಕರು ಈ ಪಾಲರ್‌ಗಳ ಮೂಲಕ ಈಗ ಒಂದೇ ಅಂಗಡಿಯಲ್ಲಿ ಖರೀದಿಸಬಹುದಾಗಿದೆ. ಗೋದ್ರೇಜ್ ಜಿರ್ಸಿ ಸಂಸ್ಥೆಯು ಮುಂದಿನ ತಿಂಗಳುಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಹೆಚ್ಚಿನ ಪಾರ್ಲರ್‌ಗಳನ್ನು ತೆರೆಯಲು ಮತ್ತು ಆ ಮೂಲಕ ತಮ್ಮ ವ್ಯಾಪ್ತಿವಿಸ್ತರಿಸಿಕೊಳ್ಳಲು ನಿರ್ಧಾರ ಮಾಡಿದೆ.
ಉತ್ತರ ಕರ್ನಾಟಕದಲ್ಲಿ ತಮ್ಮವ್ಯಾಪ್ತಿ ವಿಸ್ತರಿಸುವ ಕುರಿತಾಗಿ ಮಾತನಾಡಿದ ಗೋದ್ರೇಜ್ ಸಂಸ್ಥೆಯ ಸಿಇಒ ಭೂಪೇಂದ್ರ ಸೂರಿ ಅವರು, “ಜರ್ಸಿಪಾರ್ಲರ್ ಗಳನ್ನು ಪ್ರಾರಂಭಿಸುವ ಮೂಲಕ ನಾವು ಗ್ರಾಹಕರಿಗೆ ಕೇವಲ ಡೈರಿ ಉತ್ಪನ್ನಗಳನ್ನು ಮಾತ್ರ ಒದಗಿಸುತ್ತಿಲ್ಲ. ಅದರ ಜೊತೆಗೆ ಗ್ರಾಹಕರಿಗೆ ಗುಣಮಟ್ಟ ಮತ್ತು ಶುದ್ಧತೆಯ ಪರಿಪೂರ್ಣ ಅನುಭವ ಒದಗಿಸುವ ಕಂಪನಿಯ ಬದ್ಧತೆಯನ್ನೂ ಈ ಮೂಲಕ ಕಾಣಬಹುದು. ನಮ್ಮ ಸಂಸ್ಥೆಯ ಪ್ರೀಮಿಯಂ ಉತ್ಪನ್ನಗಳನ್ನು ಗ್ರಾಹಕರ ಹತ್ತಿರಕ್ಕೆ ತೆಗೆದುಕೊಂಡು ಹೋಗಿ ಒದಗಿಸುವುದರಿಂದ ಅವರು ಪ್ರತಿ ಸಿಪ್‌ನಲ್ಲಿ ಮತ್ತು ಪ್ರೀತಿ ಬೈಟ್ ನಲ್ಲಿ ಗೋದ್ರೇಜ್ ಜರ್ಸಿ ರುಚಿಯನ್ನು ಆಸ್ವಾದಿಸುವುದನ್ನು ಹತ್ತಿರದಿಂದ ನೋಡಲು ನಮಗೆ ಈಪಾಲರ್‌ಗಳು ಅನುವುಮಾಡಿಕೊಡುತ್ತದೆ. ಗ್ರಾಹಕರು ನಮ್ಮ ಈ ಪ್ರಯಾಣದ ಕೇಂದ್ರಭಾಗದಲ್ಲಿ ಇದ್ದಾರೆ. ಹಾಗಾಗಿ ಜರ್ಸಿ ಪಾಲರ್‌ಗಳ ಮೂಲಕ ನಾವು ಅವರಿಗೆ ಪ್ರೀಮಿಯಂ ಡೈರಿ ಉತ್ಪನ್ನಗಳನ್ನು ಒದಗಿಸಿ ಅವರಿಗೆ ಅನುಕೂಲಕರವಾಗಿ ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು. .
ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯ ಹೆಚ್ಚಿಸುವ ಪಾನೀಯಗಳಿಗೆ ಆದ್ಯತೆ ನೀಡುವುದರಿಂದ ನಮ್ಮ (ಸೇಬು, ಮಾವು, ನಿಂಬೆಮತ್ತುಕಿತ್ತಳೆ) ರಿಚಾರ್ಜ್ ಎಂಬ ಎನರ್ಜಿ ಡ್ರಿಂಕ್ ಮೇಲೆ ಗ್ರಾಹಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಅದರ ಜೊತೆಗೆ ಕಳೆದ ವರ್ಷ ನಾವು ರೂ.೧೦ ರ ಬೆಲೆಯಲ್ಲಿ ದೊರಕುವ ಮಿಲ್ಕ್ಶಾಟ್ ಗಳನ್ನು ನೀಡಲು ಪ್ರಾರಂಭಿಸಿದ್ದೇವೆ ಮತ್ತು ಈ ಉತ್ಪನ್ನವು ಮಕ್ಕಳ ಊಟದ ಬಾಕ್ಸ್ನ ಭಾಗವಾಗುತ್ತಿರುವ ಟ್ರೆಂಡ್ ಗಮನಿಸಿದ್ದೇವೆ ಎಂದು ಹೇಳಿದರು.
ಜರ್ಸಿ ಪಾಲರ್‌ಗಳು ಉತ್ತಮ ಸೇವೆ ನೀಡುವ ಕಡೆಗೆ ಮತ್ತು ವಿತರಣಾ ಜಾಲಗಳ ಮೇಲೆ ಉತ್ತಮ ನಿಯಂತ್ರಣ ಹೊಂದುವ ಕಡೆಗೆ ಗಮನಹರಿಸಲಿದೆ. ರೀಟೇಲ್ ವ್ಯಾಪಾರಿಗಳ ಸಂವಹನಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಥವಾ ದಾಖಲಿಸುವ ಮೂಲಕ ಜರ್ಸಿ ಪಾಲರ್‌ಗಳು ರೀಟೇಲ್ ವ್ಯಾಪಾರ ಮತ್ತು ಗ್ರಾಹಕರ ಮಟ್ಟದಲ್ಲಿ ಸುಸ್ಥಿರ ಪರಿಮಾಣಗಳು ಲಭ್ಯವಿರುವಂತೆ ನೋಡಿಕೊಳ್ಳುತ್ತದೆ. ಆಮೂಲಕ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಗೆ ಒತ್ತು ನೀಡುವ ಕಂಪನಿಯ ಬದ್ಧತೆಯನ್ನು ಪಾಲಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬರುವ ತಿಂಗಳುಗಳಲ್ಲಿ ಕಂಪನಿಯು ಉತ್ತರಕರ್ನಾಟಕದಲ್ಲಿನ ಹೊಸ ಮಾರುಕಟ್ಟೆಗಳಿಗೆ ಪ್ರವೇಶ ಮಾಡಲು ತಯಾರಿ ನಡೆಸುತ್ತಿದೆ. ಈ ಕ್ರಮವು ಭಾರತೀಯ ಗ್ರಾಹಕರಿಗೆ ಪ್ರೀಮಿಯಂ ಡೈರಿ ಉತ್ಪನ್ನ ಮತ್ತು ಅನುಭವಗಳನ್ನು ಒದಗಿಸುವ ಗೋದ್ರೇಜ್ ಸಂಸ್ಥೆಯ ಅಚಲ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.