ಗ್ಯಾಸ್ ರೀಫಿಲಿಂಗ್ ಅಕ್ರಮ ದಂಧೆಗೆ ಕಠಿಣ ಕ್ರಮ
ಕೋಲಾರ,ಜು,೨೪:ಜಿಲ್ಲೆಯಲ್ಲಿ ಗ್ಯಾಸ್ ರೀಫಿಲಿಂಗ್ ದಂಧೆಯು ಅಕ್ರಮವಾಗಿ ಜರುಗುತ್ತಿದ್ದು, ಕಾನೂನು ಬಾಹಿರವಾಗಿ ಈ ಕೃತ್ಯ ಮಾಡುವವರಿಗೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಕ್ರಮ ರೀಫಿಲಿಂಗ್ ದಂದೆ ಕುರಿತು ಗ್ಯಾಸ್ ಏಜೆನ್ಸಿರವರೊಂದಿಗೆ ಅಧಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಅಡುಗೆ ಅನಿಲ ದಂಧೆ ನಡೆಯಬಾರದು ಅಂತಹ ಪ್ರಕರಣ ಕಂಡುಬಂದರೆ ಯಾವುದೇ ಒತ್ತಾಯಕ್ಕೆ ಮಣಿಯದೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಹಾಗೂ ಏಜೆನ್ಸಿಯವರ ಲೈಸೆನ್ಸ್ ರದ್ದು ಮಾಡಲಾಗುವುದು ಮತ್ತು ಮಾಲೀಕರ ವಿರುದ್ಧ ವೈಯಕ್ತಿಕವಾಗಿ ಪ್ರಕರಣ ದಾಖಲು ಹಾಗೂ ಶಿಕ್ಷೆಗೆ ಗುರಿ ಮಾಡಲಾಗುವುದು ಎಂದರು. ಇಂತಹ ಕೃತ್ಯಗಳು ಸಮಾಜಕ್ಕೆ ಅಘಾತಕಾರಿ ಬೆಳೆವಣಿಗೆಯಾಗಿದ್ದು, ಸಾರ್ವಜನಿಕರು ಈ ಬಗ್ಗೆ ಮಾಹಿತಿ ತಿಳಿದೊಡನೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕೆಂದರು.
ಖಾಸಗಿ ಏಜೆನ್ಸಿಯವರ ಕುರಿತು ಅವರ ಬಗ್ಗೆ ಸರ್ವೇ ಮಾಡಿ ಮಾಹಿತಿ ಪಡೆದು ಕ್ರಮಕೈಗೊಳ್ಳುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕಿ ಲತಾ ಅವರಿಗೆ ತಿಳಿಸಿದರು. ಆಹಾರ ಇಲಾಖೆ ಹಾಗೂ ಆಯಿಲ್ ಕಂಪನಿಗಳು ಸಹಕಾರದೊಂದಿಗೆ ಈ ಕೆಲಸವನ್ನು ನಿರ್ವಹಿಸಬೇಕು ಮತ್ತು ಖಾಸಗಿ ಏಜೆನ್ಸಿಯವರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಗೃಹಬಳಕೆ ಸಿಲಿಂಡರ್ ಹಾಗೂ ಆಹಾರ ಇಲಾಖೆ ಎ.ಪಿ.ಎಲ್., ಬಿ.ಪಿ.ಎಲ್ ಹಾಗೂ ಅಂತ್ಯೋದಯ ಫಲಾನುಭವಿಗಳ ತುಲನೆ ಮಾಡಿದಾಗ ಗೃಹ ಬಳಕೆ ಅನಿಲ ದುರ್ಬಳಕೆ ಪ್ರಕರಣ ಕಂಡುಬರುತ್ತಿದೆ. ಈ ಕೆಲಸವನ್ನು ಇಂದಿನಿಂದಲೇ ಆರಂಭಿssಸಬೇಕೆಂದರು. ಅನಧಿಕೃತ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಕಂಡುಹಿಡಿಯಲು ಜಾಗೃತದಳಗಳು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ಆಹಾರ ಇಲಾಖೆಯ ಉಪ ನಿರ್ದೇಶಕಿ ಲತಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೪,೫೬,೦೯೫ ಗ್ಯಾಸ್ ಸಂಪರ್ಕಗಳಿವೆ. ತಾಲ್ಲೂಕುವಾರು ಬಂಗಾರಪೇಟೆಯಲ್ಲಿ ೩ ಏಜೆನ್ಸಿಗಳಿದ್ದು, ಒಟ್ಟು ೫೪೮೫೧, ಕೋಲಾರದಲ್ಲಿ ೮ ಏಜೆನ್ಸಿಗಳಿದ್ದು, ಒಟ್ಟು ೧,೩೪,೪೫೦, ಮಾಲೂರುನಲ್ಲಿ ೮ ಏಜೆನ್ಸಿಗಳಿದ್ದು, ಒಟ್ಟು ೮೨,೩೦೬, ಮುಳಬಾಗಿಲುನಲ್ಲಿ ೬ ಏಜೆನ್ಸಿಗಳಿದ್ದು, ಒಟ್ಟು ೬೩,೪೫೯, ಶ್ರೀನಿವಾಸಪುರದಲ್ಲಿ ೫ ಏಜೆನ್ಸಿಗಳಿದ್ದು, ೪೮೦೧೬ ಹಾಗೂ ಕೆ.ಜಿ.ಎಫ್‌ನಲ್ಲಿ ೫ ಏಜೆನ್ಸಿಗಳಿದ್ದು, ೭೩,೦೧೩ ಗ್ಯಾಸ್ ಸಂಪರ್ಕವನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ಕೋಲಾರದಲ್ಲಿ ಂgಟಿi, ಉo ಉಚಿs, ಖಿoಣಚಿಟ ಉಚಿs, ಸೇರಿದಂತೆ ೨೬೦ ಸಿಲಿಂಡರ್‌ಗಳು ಮಾಲೂರಲ್ಲಿ ಘಿಖಿ ಖಚಿಣes-ಖಿoಣಚಿಟ ಇಟಿeಡಿgies ಸೇರಿದಂತೆ ೩೦೦ ಸಿಲಿಂಡರುಗಳು ಕೆ.ಜಿ.ಎಫ್‌ನಲ್ಲಿ ಊome ಊP, ಊP ಅommeಡಿಛಿiಚಿಟ, ಃPಅ ಚಿಟಿಜ ಎಥಿoಣhi ಸೇರಿದಂತೆ ೧೩೬ ಹಾಗೂ ಕೋಲಾರದಲ್ಲಿ Iಟಿಜಚಿಟಿe, ಊP, ಃPಅ ಎಥಿoಣhi ಸೇರಿದಂತೆ ೨೩ ಪ್ರಕರಣಗಳನ್ನು ಅಂದರೆ ಜಿಲ್ಲೆಯಲ್ಲಿ ಒಟ್ಟು ೭೧೯ ಪ್ರಕರಣಗಳನ್ನು ಆಯಾಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆಯೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳು ೪೧ ಏಜೆನ್ಸಿ ಮಾಲೀಕರು, ಇಂಡಿಯನ್ ಆಯಿಲ್, ಎಚ್.ಪಿ, ಬಿ.ಪಿ ಗ್ಯಾಸ್ ಕಂಪನಿಯ ಅಧಿಕಾರಿಗಳು ಸೇರಿದಂತೆ ಮತ್ತು ಆಹಾರ ಇಲಾಖೆಯವರು ಉಪಸ್ಥಿತರಿದ್ದರು.