ಸಿಲಿಕಾನ್ ಸಿಟಿ ಮೆಟ್ರೋಗೆ “ಶ್ರೀಬಸವೇಶ್ವರ” ಹೆಸರಿಡಲು ಆಗ್ರಹ
ಕಲಬುರಗಿ,ಜು.೨೪- ಸಿಲಿಕಾನ್ ಸಿಟಿ ಬೆಂಗಳೂರು ಮೆಟ್ರೋ ಸೇವೆಗಳಿಗೆ ವಿಶ್ವಗುರು “ಶ್ರೀ ಬಸವೇಶ್ವರ ಮೆಟ್ರೋ” ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಜಿಲ್ಲಾ ವೀರಶೈವ ಸಮಾಜದ ಪ್ರಮುಖರು, ಜಿಲ್ಲಾಡಳಿತದ ಮುಖಾಂತರÀ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.
ಪಾಟೀಲ್ ಕೊಡಲಹಂಗರಗಾ ನೆತೃತ್ವದಲ್ಲಿ ಸಮಾಜದ ನಿಯೋಗ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಇದಕ್ಕು ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣಕುಮಾರ ಪಾಟೀಲರು, ಜಾತಿ ವರ್ಗ ರಹಿತ ಸಮಾಜ ಸುಧಾರಣೆಗೆ ಜಗಜ್ಯೋತಿ ಬಸವೇಶ್ವರರು ನೀಡಿರುವ ಕೊಡುಗೆ ಅಪಾರವಾದದ್ದು, ೧೨ನೇ
ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಸಮಾನತೆಯ ಹರಿಕಾರ, ವರ್ಗ,
ಭೇದವಿಲ್ಲದೇ, ವರ್ಣ, ಅಂತಸ್ತುಗಳ ಲಿಂಗ ತಾರತಮ್ಯವಿಲ್ಲದೇ ಸರ್ವರಿಗೂ ಸಮಾನತೆಯನ್ನು ಸಾರಿದ ಮಹಾನ್
ಮಾನವತಾವಾದಿ ಬಸವಣ್ಣನವರ ಹೆಸರನ್ನು ಬೆಂಗಳೂರಿನ ಮೆಟ್ರೋಗೆ ನಾಮಕರಣ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಅಲ್ಲದೇ ಈಗಾಗಲೇ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೋಳೀ ರಾಯಣ್ಣ ಎಂದು ನಾಮಕರಣ ಮಾಡಲಾಗಿದೆ. ಸಿಲಿಕಾನ್ ಸಿಟಿ ಮೆಟ್ರೋಗೆ ಶ್ರೀಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ದೇಶ ವಿದೇಶಗಳಲ್ಲಿ ವಿಶ್ವಗುರು ಬಸವೇಶ್ವರರ ಪ್ರತಿಮೆ ಸ್ಥಾಪಿಸಲಾಗಿದೆ, ಬ್ರಿಟನ್ ಸಂಸತ್ತಿನ ಎದುರು ಥೇಮ್ಸ ನದಿಯ ದಡದಲ್ಲಿ ಸ್ಥಾಪಿಸಲಾಗಿದೆ ವಿಶ್ವಗುರುವಿನ ಮಾನವೀಯ ಸೇವೆ ವಿಶ್ವಕ್ಕೆ ಮಾದರಿಯಾಗಿದೆ. ಕನ್ನಡಿಗರ ಸಾಂಸ್ಕೃತಿಕ ನಾಯಕನ ಹೆಸರನ್ನು ಬೆಂಗಳೂರು ಮೇಟ್ರೋ ರೈಲ್ವೆ ಸೇವೆಗೆ ಇಡುವಂತೆ ನಿಯೋಗದ ಮೂಲಕ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಸಮಾಜದ ಹಿರಿಯ ಮುಖಂಡರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಶಶಿಕಾಂತ ಪಾಟೀಲ, ಎಸ್.ವಿ.ಮಠಪತಿ, ಸುಭಾಷ ಬಿಜಾಪುರ ಸೇರಿದಂತೆ ಹಲವರಿದ್ದರು.
ಸಮಾಜದ ಗುರುಗಳ ಮತ್ತು ಹಿರಿಯರ ಮಾತಿಗೆ ತಲೆಬಾಗಿ ಸಮಾಜದಲ್ಲಿನ ಐಕ್ಯತೆಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಅವಿರೋಧ ಆಯ್ಕೆಯನ್ನು ಮಾಡಲಾಗಯಿತು ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕಾಗಿತ್ತು ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.