ಚಿರತೆ ದಾಳಿ: ಕೋಳಿಗಳ ಬಲಿ
ಸಂಜೆವಾಣಿ ನ್ಯೂಸ್
ಬೆಟ್ಟದಪುರ: ಜು.೨೪:- ಸಮೀಪದ ವಡ್ಡರಹೊಸಹಳ್ಳಿ ಗ್ರಾಮದ ಹೊರಹೊಲಯದ ಅರಬ್ ಜಾನ್ ಎಂಬುವರಿಗೆ ನಾಟಿಕೋಳಿ ಫಾರಂ ಮೇಲೆ ಸೋಮವಾರ ರಾತ್ರಿ ಚಿರತೆ ದಾಳಿಗೆ ನೂರಾರು ಕೋಳಿಗಳು ಬಲಿಯಾಗಿವೆ.
ಚಿರತೆ ಹಾಗೂ ಚಿರತೆ ಮರಿಗಳು ರಾತ್ರಿ ವೇಳೆ ಆಗಮಿಸಿ ಕೋಳಿಗಳ ಮೇಲೆ ಏಕಾಏಕಿ ದಾಳಿ ಮಾಡಿವೆ, ಅಲ್ಲದೆ ಹಲವು ಕೋಳಿಗಳ ಕುತ್ತಿಗೆ ಕಚ್ಚಿ, ಕೊಂದು ಹಾಕಿದ್ದು, ಇನ್ನೂ ಹಲವು ಕೋಳಿಗಳನ್ನು ಕೊಂದು ದಾರಿ ಉದ್ದಕ್ಕೂ ಅಕ್ಕ ಪಕ್ಕದ ಜಮೀನಿನಲ್ಲಿ ಎಳೋದ್ಯೋಗಿವೆ, ಸಾಲ ಮಾಡಿ, ಕಷ್ಟಪಟ್ಟು ಕೋಳಿ ಫರ?ಮ್ ಹೌಸ್ ನ್ನು ನಡೆಸುತ್ತಿದ್ದು, ಚಿರತೆ ದಾಳಿ ಮಾಡಿದ ಪರಿಣಾಮ ತುಂಬ ನಷ್ಟ ಉಂಟಾಗಿದೆ. ಸುಮಾರು ೫೦೦ ಕ್ಕೂ ಹೆಚ್ಚು ಕೋಳಿಗಳು ಬಲಿಯಾಗದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಅರಬ್ ಜಾನ್ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಚಿಕ್ಕನೇರಳೆ ಪಶು ವೈದ್ಯಾಧಿಕಾರಿ ಡಾ.ಚಾಮರಾಜ್ ಭೇಟಿ ನೀಡಿ ಪರಿಶೀಲನೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಿದರು.
ಬೆಟ್ಟದಪುರ ಸಮೀಪದ ವಡ್ಡರಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ನಾಟಿ ಕೋಳಿ ಫಾರಂ ಮೇಲೆ ಸೋಮವಾರ ರಾತ್ರಿ ಜೊತೆ ದಾಳಿ ನಡೆಸಿ ಕೋಳಿಗಳನ್ನು ಬಲಿಪಡದಿದೆ.
ಬೆಟ್ಟದಪುರ ಸಮೀಪದ ವಡ್ಡರಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ನಾಟಿ ಕೋಳಿ ಫಾರಂ ಬಳಿ ಚಿರತೆ ಹೆಜ್ಜೆ ಗುರುತು ಕಂಡುಬಂದಿರುವುದು.