ಹನೂರು ತಾಲೂಕು ಕಂದಾಯ ಇಲಾಖೆಯಿಂದ ಮಾದೇಶ್ ಆತ್ಮೀಯ ಬೀಳ್ಕೊಡುಗೆ ಸನ್ಮಾನ
ಸಂಜೆವಾಣಿ ವಾರ್ತೆ
ಹನೂರು ಜು ೨೪ :- ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕ ಬಿ.ಪಿ ಮಾದೇಶ್ ಅವರನ್ನು ಯಳಂದೂರು ತಾಲೂಕು ಅಗರ ನಾಡಕಚೇರಿ ಉಪ ತಹಶೀಲ್ದಾರ್ ಆಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಯಳಂದೂರು ತಾಲೂಕು ಅಗರ ನಾಡಕಚೇರಿಗೆ ಉಪ ತಹಶೀಲ್ದಾರ್ ಆಗಿ ವರ್ಗಾವಣೆಯಾದ ರಾಜಸ್ವ ನಿರೀಕ್ಷಕ ಮಾದೇಶ್ ಅವರನ್ನು ಹನೂರು ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ಮಾಡಿದರು.
ಇದೇ ವೇಳೆ ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರು ಮಾತನಾಡಿ ಮಾದೇಶ್ ಅವರು ಅರ್.ಐ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು. ಹಲವು ವರ್ಷಗಳ ಕಾಲ ಆ ಭಾಗದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಇಂದು ಸರ್ಕಾರ ಇವರ ಸೇವಾ ಕಾರ್ಯವನ್ನು ಮೆಚ್ಚಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ಮುಂದೆಯೂ ಸಹ ಇವರು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ಸನ್ಮಾನವನ್ನು ಸ್ವೀಕರಿಸಿದ ಮಾದೇಶ್ ಅವರು ಮಾತನಾಡಿ ಸರ್ಕಾರ ನನಗೆ ನೀಡಿರುವಂತಹ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿರುವ ನನಗೆ ತೃಪ್ತಿ ತಂದಿದೆ. ನನ್ನ ಕರ್ತವ್ಯ ಅವಧಿಯಲ್ಲಿ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರ ವಿಶ್ವಾಸ ಸಹಕಾರದಿಂದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ.
ಇದೇ ರೀತಿ ಮುಂದೆ ಸಹ ಇಲಾಖೆಯ ಅಧಿಕಾರಿಯ ಸಿಬ್ಬಂದಿಗಳ ಸಹಕಾರದಿಂದ ನನಗೆ ನೀಡಿರುವ ಜವಾಬ್ದಾರಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ -೨ ತಹಶೀಲ್ದಾರ್ ಡಾII ಕೆ.ಧನಂಜಯ್, ಉಪ ತಹಶೀಲ್ದಾರ್ ನಾಗೇಂದ್ರ, ಉಪ ತಹಶೀಲ್ದಾರ್ ಮೆಕಟೇಶ್, ಉಪ ತಹಶೀಲ್ದಾರ್ ಸುರೇಖಾ , ಮಹದೇವನಾಯಕ ,ವೀರೂಪಾಕ್ಷ , ಆರ್ ಐ.ಶಿವಕುಮಾರ್ , ಗ್ರಾಮ ಲೆಕ್ಕಧಿಕಾರಿಗಳು, ಗ್ರಾಮ ಸಹಾಯಕರುಗಳು ಕಛೇರಿ ಸಿಬಂಧಿಗಳು ಮತ್ತು ಸಾರ್ವಜನಿಕ ವಲಯದ ಪ್ರಮುಖರು ಹಾಜಾರಿದ್ದರು.