೧ ಟಿಪ್ಪರ್ ತಲಾ ೫೦ ಸಾವಿರ ಲಂಚ : ಪೊಲೀಸ್ ಅಧಿಕಾರಿ ಮೇಲೆ ಟಿಪ್ಪರ್ ಮಾಲೀಕರ ಗಂಭೀರ ಆರೋಪ
ಜೇವರ್ಗಿ,ಜು.೨೪-ಮರಳು ಸಾಗಣೆ ಮಾಡುವ ಟಿಪ್ಪರ ಮಾಲಿಕರು ಕಲಬುರಗಿ ಡಿವಾಯ್‌ಎಸ್‌ಪಿಯವರಿಗೆ ಒಂದು ಟಿಪ್ಪರನಿಂದ ತಲಾ ಐವತ್ತು ಸಾವಿರ ರೂಪಾಯಿ ಕೊಡ್ಬೇಕಂತೆ ಎಂದು ಟಿಪ್ಪರ ಮಾಲಿಕರು ಪೊಲೀಸ ಇಲಾಖೆಯ ವಿರುದ್ಧ ಗಂಭೀರ ಆರೋಪ ಮಾಡಿದರು.
ಮಂಗಳವಾರ ಸಾಯಂಕಾಲ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಟಿಪ್ಪರ ಮಾಲಿಕರು ಪ್ರತಿಭಟಿಸಿ, ಈ ಕೂಡಲೇ ಕಲಬುರಗಿ ಡಿವಾಯ್‌ಎಸ್‌ಪಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು, ಡಿವಾಯ್‌ಎಸ್‌ಪಿ ಗನ್ ಮ್ಯಾನ್ ಸೋಮವಾರ ಸಾಯಂಕಾಲ ೫:೩೦ ಸಮಯದಲ್ಲಿ ,ನಮ್ಮ ಟಿಪ್ಪರ ನಿಲ್ಲಿಸಿ ೫೦ ಸಾವಿರ ರೂಪಾಯಿ ಲಂಚ ಕೇಳಿದ್ದು,ನಾವುಗಳು ಕೊಡಲ್ಲ ಎಂದು ಹೇಳಿದಾಗ ನಮ್ಮ ಟಿಪ್ಪರಗಳನ್ನು ಜೇವರ್ಗಿ ಬಸ್ ಡಿಪೋ ಬಳಿ ವಾಹನಗಳನ್ನು ಹಿಡಿದು ಪೊಲೀಸ್ ಠಾಣೆಗೆ ಹಚ್ಚಿ ಆರ್‌ಟಿಓಗೆ ನೀಡಿರುತ್ತಾರೆ ಎಂದು ಆರೋಪಿಸಿದರು.
ನಾವುಗಳು ೨೫ ಮೇಟ್ರಿಕ್ ಟನ ಮರಳಿಗೆ ರಾಜಧನ ಪಾವತಿ ಮಾಡಿ ಮರಳು ಸಾಗಾಣಿಕೆ ಮಾಡುತ್ತಿದ್ದೇವೆ. ಡಿವೈಎಸ್‌ಪಿ ದುರುದ್ದೇಶದಿಂದ ನಮ್ಮ ಸುಮಾರು ಏಳೆಂಟು ಟಿಪ್ಪರಗಳನ್ನು ಕಾನೂನು ಬಾಹಿರವಾಗಿ ಪೊಲೀಸ್ ಠಾಣೆಗೆ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ಪಪಡಿಸಿದರು. ಟಿಪ್ಪರ ಮಾಲಿಕರಿಗೆ, ಪೊಲೀಸ್ ಅಧಿಕಾರಿ ಡ್ರೈವರ್ ಕಂ ಗನ್ ಮ್ಯಾನ್ ದೂರವಾಣಿ ಮೂಲಕ ಒಂದು ಟಿಪ್ಪರಗೆ ಐವತ್ತು ಸಾವಿರ ಕೊಡಬೇಕು ಎಂದು ಕೇಳುತ್ತಾರೆ. ಕೊಡದೆ ಇದ್ದಾಗ ಅನಾವಶ್ಯಕ ನಮಗೆ ಕಿರುಕುಳ ನೀಡುತ್ತಿದ್ದಾರೆ ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಸಂಧರ್ಭದಲ್ಲಿ ಹನುಮೇಗೌಡ,ಶಿವಮೂರ್ತಿ ಮಾಲಿಪಾಟೀಲ್,ಶ್ರೀನಿವಾಸ ನಾಯಕ,ಮಹ್ಮದ್ ಹನೀಪ್,ಬಸವರಾಜ, ಕಿರಣ ಪಾಟೀಲ್, ವಾಸುದೇವ ನಾಯಕ,ಮಹೇಶ್ ಫರೀಟ್,ಆನಂದ ರಾಧೆ,ಅಂಬ್ರೇಶ್ ನಾಯಕ್,ಬಸವನಾಯಕ,ಹಣಮಂತ ಕಲಬುರಗಿ, ಸೂಗುರೆಡ್ಡಿ,ಚಂದ್ರಶೇಖರ ಗುತ್ತೆದಾರ,ಭೀಮರೆಡ್ಡಿ ಪೂಜಾರಿ,ದೇವಾನಂದ ಖಾನಗೌಡರ್,ಮಹಾಂತೇಶ್,ಅಶೋಕ ನಾಯಕ್,ಬಸು ಮಲ್ಲಾಬಾದಿ,ಸಿದ್ದು ಬಿರಾದಾರ,ಯುವರಾಜ ವಿಠ್ಠಲ್,ಅಂಬೇಶ್ ಭಗಿರಥಿ,ಶ್ರೀಕಾಂತ್ ರಾಠೋಡ ಸೇರಿದಂತೆ ಹಲವರು ಇದ್ದರು.
ಬಾಕ್ಸ್
ಪ್ರಕರಣ ದಾಖಲಿಸಿ
ಟಿಪ್ಪರ್ ಮಾಲಿಕರು ರಾಜಧನ ಪಾವತಿ ಮಾಡಿ, ಮರಳು ಸಾಗಾಣಿಕೆ ಮಾಡುತ್ತಿದ್ದೇವೆ. ಆದರೂ ಸಹ,ನಮ್ಮ ಬಳಿ ತಲಾ ಒಂದು ಟಿಪ್ಪರಗೆ ಐವತ್ತು ಸಾವಿರ ಹಣ ಲಂಚವನ್ನು ಅವರ ಗನ್ ಮ್ಯಾನ್ ಮೂಲಕ ಕೇಳುತ್ತಿದ್ದಾರೆ.ನಾವು ಕೊಡುವುದಿಲ್ಲ ಎಂದು ಹೇಳಿದಾಗ, ನಮ್ಮ ಟಿಪ್ಪರಗಳನ್ನು ಜೇವರ್ಗಿ ಪೊಲೀಸ್ ಠಾಣೆಗೆ ಹಚ್ಚಿರುತ್ತಾರೆ.ಇವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು.
-ಚಂದ್ರಶೇಖರ ಗುತ್ತೆದಾರ, ಟಿಪ್ಪರ್ ಮಾಲಿಕರು