ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೂಗಾರ ಸಮಾಜದ ಮನವಿ
ಸಂಜೆವಾಣಿ ವಾರ್ತೆ,
ವಿಜಯಪುರ: ಜು.೨೪:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ನಿಗಮಕ್ಕೆ ೧೦೦ ಕೋಟಿ ಮೀಸಲಿಡುವಂತೆ ಆಗ್ರಹಿಸಿ ಹೂಗಾರ ಸಮಾಜ ಬಾಂಧವರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಹೂಗಾರ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷÀ ಸಂಗಮೇಶ ಗುರುವ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಟಿ. ಭೂಬಾಲನ್ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಹೂಗಾರ, ಜೀರ, ಪೂಜಾರಿ, ಗುರವ, ಪೂಲಾರಿ, ಮಾಲಿ, ಮಾಲಿಗಾರ, ಹೂವಾಡಿಗ, ಪುಷ್ಪದತ್ತ, ತಾಂಬೋಳಿ ಎಂದು ವಿವಿಧ ಉಪನಾಮಗಳಿಂದ ಕರೆಯುವ ಹಿಂದುಳಿದ ಹೂಗಾರ ಸಮಾಜವು ೪೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಯಾವುದೇ ಸರ್ಕಾರಕ್ಕೆ ಸಮಾಜದ ಕೂಗು ಕೇಳಿರಲಿಲ್ಲ. ಆದರೆ ಜು. ೧೫, ೨೦೨೨ ರಂದು ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನವನದಲ್ಲಿ ಹೂಗಾರ ಸಮಾಜದವರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಬೃಹತ್ ಪ್ರತಿಭಟನೆ ಮಾಡಿದ್ದರಿಂದ ಫೆ.೨೧, ೨೦೨೩ ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕೃತವಾಗಿ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿತು. ಕಳೆದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲವೆಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ರಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಗುರವ ಅವರು ಮಾತನಾಡಿ, ಮುಂಬರುವ ಅಧಿವೇಶನದಲ್ಲಿ ಹೂಗಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ಅನುದಾನ ಮೀಸಲಿಡಬೇಕು. ಹೂಗಾರ ಸಮಾಜದ ವ್ಯಕ್ತಿಯನ್ನೆ ನಿಗಮದ ಅಧ್ಯಕ್ಷನನ್ನಾಗಿ ಮಾಡಬೇಕು. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ವತಿಯಿಂದ ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನವನದಲ್ಲಿ ಜು. ೨೫ ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪೂಜಾರಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾರತಿ ಭುಯ್ಯಾರ, ಜಿಲ್ಲಾ ಉಪಾಧ್ಯಕ್ಷರಾದ ಮಹೇಶ ಗುರವ, ಸಂಜಯ ಜಮನಾಳ, ಗೌರವಾಧ್ಯಕ್ಷರಾದ ಶ್ರೀಶೈಲ ಭಯ್ಯಾರ, ಡಾ.ಮಹಾದೇವ ಹೂಗಾರ, ಸಮಾಜದ ಹಿರಿಯರಾದ ನಾರಾಯಣ ಪೂಜಾರಿ, ರಾಜು ಸಾಲಿ, ಎಸ್.ಎಸ್. ಹೂಗಾರ, ಭಾರತಿ ಹೂಗಾರ, ಪ್ರವೀಣ ಪೂಜಾರಿ, ಸಿದ್ಧರಾಮಯ್ಯ ಮಠ, ಅಶೋಕ ಹೂಗಾರ ಹಲವರು ಉಪಸ್ಥಿತರಿದ್ದರು.