ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ಜಿಲ್ಲಾಡಳಿತಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೩;: ವೆಲ್ಫೇರ್ ಪಾರ್ಟಿ ದಾವಣಗೆರೆ ಘಟಕದ ವತಿಯಿಂದ ಜಿಲ್ಲೆಯ ಅನೇಕ ಗ್ರಾಮ ಮತ್ತು ಪಟ್ಟಣಗಳಲ್ಲಿ ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಪಕ್ಷದ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್ ಮಾತನಾಡಿ,ಚನ್ನಗಿರಿ ತಾಲ್ಲೂಕಿನ ಚನ್ನಗಿರಿ ಟೌನ್, ಕೆರೆಬಿಳಚಿ, ಹೊಸೂರು, ಸಂತೇಬೆನ್ನೂರು, ಆಲುರು, ಚನ್ನಾಪುರ, ಜಕ್ಕಲಿ, ಕಾರಿಗನೂರು, ತ್ಯಾವಣಿಗೆ, ಬಸವಾಪಟ್ಟಣ ಸೋಮಲಾಪುರ ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಇವುಗಳ ಉಪಟಳಕ್ಕೆ ಜನಸಮಾನ್ಯರು ಹಾಗೂ ವಾಹನ ಸವಾರರು ರೋಸಿ ಹೋಗಿದ್ದಾರೆ. ಮಕ್ಕಳು, ಮಹಿಳೆಯರು. ವಯಸ್ಸಾದವರು, ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡಲು ಭಯ ಪಡುವಂತಾಗಿದೆ ಎಂದು ಹೇಳಿದರು.ನಾಯಿಗಳು ರಸ್ತೆಯಲ್ಲಿ ಹೋಗುವ ಬೈಕು ಮತ್ತು ಕಾರುಗಳ ಮೇಲೆ ಎರಗುತ್ತವೆ ಮತ್ತು ಬೆನ್ನಟ್ಟಿಸಿಕೊಂಡು ಹೋಗುತ್ತವೆ, ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಹಲವಾರು ಬೈಕುಗಳಿಂದ ಮತ್ತು ಸೈಕಲ್ ಮೇಲಿಂದ ಬಿದ್ದು ಹಲವರಿಗೆ  ಗಾಯಗಳಾಗಿವೆ. ಆದ್ದರಿಂದ ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕೆರಬಿಳಚಿ ಯುನಿಟ್ ಕಾರ್ಯದರ್ಶಿ ಮಹಮದ್ ಅಸ್ಲಾಂ, ಪರ್ವಿಜ್ ಮತ್ತು ಸಿನಿಯರ್ ಮೆಂಬರ್ ಏಜಾಜ್ ಬೇಗ್ ಮತ್ತು ಎಲ್ಲಾ ಸದಸ್ಯರು ಹಾಜರಿದ್ದರು.