ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ವರದಿಗಾರರ ಕೂಟದ ಅಧ್ಯಕ್ಷರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೩; ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷರಾದ  ನಾಗರಾಜ್ ಬಡದಾಳ್ ಅವರನ್ನು ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಬೆಳಗ್ಗೆ ಪತ್ರಿಕೆ ವಿತರಣೆಯನ್ನು ಮಾಡುವ ಸಂದರ್ಭದಲ್ಲಿ  ಸನ್ಮಾನಿಸಲಾಯಿತು   ಈ ಸಂದರ್ಭದಲ್ಲಿ ವಿತರಕರ ಸಂಘದ ಅಧ್ಯಕ್ಷರಾದಂತ ಚಂದ್ರು. ಹೆಚ್. ಅರುಣ್ ಕುಮಾರ್,ಖಜಾಂಚಿ T. P ನಾಗರಾಜ, ಬಸವರಾಜ ಕನ್ನಡಪ್ರಭ ಪತ್ರಿಕೆಯ ಪ್ರತಿನಿಧಿ ,,ಮಂಜುನಾಥ್, ನಿಂಗಪ್ಪ, ರಘುರಾಮ್, ಗಂಗಾಧರ್, ಗಣೇಶ್ ಪ್ಪ,ಆನಂದ,, ಶಿವಯೋಗಿ ಹಿರೇಮಠ್, ಪ್ರಕಾಶ್, ಮಂಜು,ಹಾಗೂ ಇನ್ನು ಇತರ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.