ಕಬ್ಬಿನ ಬಾಕಿ ಹಣ ಬಿಡುಗಡೆಗಾಗಿ ಬೆಂಗಳೂರಿಗೆ ರೈತರ ನಿಯೋಗ
ಕಲಬುರಗಿ:ಜು.23: ಕಬ್ಬಿನ ಬಾಕಿ ಹಣ ಬಿಡುಗಡೆಗಾಗಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊAಡು ಕರ್ನಾಟಕ ಪ್ರಾಂತ ರೈತ ಸಂಘದ ನಿಯೋಗವು ಬೆಂಗಳೂರಿನಲ್ಲಿ ನಿಯೋಗ ತೆರಳಿ ಜುಲೈ ೨೪ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿದರು.
ಅಫಜಲಪುರ ತಾಲ್ಲೂಕಿನ ಭೀಮಾ ನದಿಯ ವ್ಯಾಪ್ತಿಯಲ್ಲಿ ಎರಡು ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿ ಮುಗಿದಿದೆ. ಆದರೆ ಗೇಟ್ ಹಾಕಿಲ್ಲ. ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ನೀಡಿ ಬೀಜ್ ಕಂ ಬ್ಯಾರೇಜ್‌ಗೆ ಗೇಟ್ ಕೂಡಿಸಿ ನೀರು ನಿಲ್ಲಿಸಬೇಕು. ರೈತರಿಗೆ ನೀರಾವರಿ ಮಾಡಲು ಒತ್ತು ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ೨೦೨೨ ಮತ್ತು ೨೦೨೩ರ ಸಾಲಿನ ಕಬ್ಬು ಕಟಾವು ಮಾಡಿದ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡದೆ ರೈತರಿಗೆ ದ್ರೋಹ ಬಗೆದಿದೆ. ರೇಣುಕಾ ಶುಗರ್ಸ್ ಹಾವಳಗಾ ಸಕ್ಕರೆ ಕಾರ್ಖಾನೆ ಪ್ರತಿ ರೈತರಿಂದ ಪ್ರತಿ ಟನ್ ಕಬ್ಬಿಗೆ ಪ್ರಕಾರ ೧೧೨ ರೂ.ಗಳ ಬಾಕಿ ಉಳಿಸಿಕೊಂಡು ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಿದೆ. ಚಿಮಣಗೇರಾ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರ ಕಳೆದ ವರ್ಷದ ೨೦೨೨ ಮತ್ತು ೨೦೨೩ನೇ ಸಾಲಿನ ಪ್ರತಿ ಟನ್ ಕಬ್ಬಿಗೆ ೧೬೨ ರೂ.ಗಳ ಬಾಕಿ ಹಣ ಉಳಿಸಿಕೊಂಡ ಕಬ್ಬು ಬೆಳೆಗಾರರ ಬೆನ್ನಿಗೆ ಚೂರಿ ಹಾಕಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ರೇಣುಕಾ ಶುಗರ್ಸ್ ಹಾವಳಗಾ ಒಟ್ಟು ೨೩೦೦೦ ಜನ ರೈತರ ಒಟ್ಟು ೧೦ ಲಕ್ಷ ಟನ್ ಕಬ್ಬು ಪೂರೈಸಿದ್ದು, ಪ್ರತಿ ಟನ್ ಕಬ್ಬಿಗೆ ೧೧೨ ರೂ.ಗಳಂತ ಒಟ್ಟು ಹಣ ೧೧೨೦೦೦೦೦೦ ರೂ.ಗಳ ಕಬ್ಬಿನ ಬಾಕಿ ಹಣ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಿದ್ಧೃಆಮ್ ಎಸ್. ದಣ್ಣೂರ್, ಅಶೋಕ್ ಹೂಗಾರ್ ಮುಂತಾದವರು ನಿಯೋಗದಲ್ಲಿದ್ದಾರೆ.