ಹೊಸ ಕ್ರಿಮಿನಲ್ ಕಾಯ್ದೆಗಳ ಜಾರಿಗೆ ದ ಸಂ ಸ ವಿರೋಧ: ಭದ್ರೆ
ಕಲಬುರಗಿ:ಜು.23:ತುರ್ತು ಪರಿಸ್ಥಿತಿಯ ಸರ್ವಾಧಿಕಾರದ ೪೯ನೇ ವರ್ಷವನ್ನು ತಾವು ಬಹುದೊಡ್ಡ ಪ್ರಜಾತಂತ್ರವಾದಿಗಳೆAದು ಬಣ್ಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರವು ಕಳೆದ ಜುಲೈ ೧ರಿಂದ ಹೊಸ ಕ್ರಿಮಿನಲ್ ಕಾಯ್ದೆಗಳನ್ನು, ಜಾರಿ ಮಾಡುವ ಮೂಲಕ ದೇಶದ ಮೇಲೆ ಶಾಶ್ವತ ತುರ್ತು ಪರಿಸ್ಥಿತಿಯನ್ನು ಮತ್ತು ಪೋಲಿಸ್ ರಾಜ್ಯವನ್ನು ಹೇರಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಕಾಯ್ದೆಗಳಿಂದಾಗಿಉ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಧಕ್ಕೆಯಾಗುತ್ತಲಿದೆ. ಒಂದು ವ್ಯವಸ್ಥೆ ಕೊಳೆತಾಗ ಅದನ್ನು ಕಿತ್ತೆಸೆದು ಅದರ ಸ್ಥಾನದಲ್ಲಿ ಇನ್ನೊಂದು ಜನಪರ ಮತ್ತು ಪ್ರಗತಿಪರ ವ್ಯವಸ್ಥೆಯನ್ನು ಸ್ಥಾಪಿಸುವುದು ಅಲ್ಲಿನ ನಾಗರಿಕರ ಕರ್ತವ್ಯವಾಗುತ್ತದೆ ಎಂದರು.
ಜನತೆಯ ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ಮನಸ್ಸುಗಳಿಂದ ರೂಪಗೊಂಡಿದ್ದ ಸಂವಿಧಾನವನ್ನು ಸರ್ವಾಧಿಕಾರಿ ಒಬ್ಬ ಅಥವಾ ಆತನ ಪಕ್ಷದ ಸದಸ್ಯರು, ಸಂಘ ಪರಿವಾರದವರು ಬದಲಿಸುತ್ತೇವೆ ಎನ್ನುವುದು ಮೂರ್ಖತನ ಎಂದು ಹೇಳಿದ ಅವರು, ಸಂವಿಧಾನದ ಅಡಿಯಲ್ಲಿ ಕಳೆದ ೭೫ ವರ್ಷಗಳಿಂದ ಸಂವಿಧಾನಾತ್ಮಕವಾಗಿ ಜನ ಬದುಕಿದ್ದಾರೆ. ಆದಾಗ್ಯೂ, ಜನ ಸಾಮಾನ್ಯರ ಇಂತಹ ಕನಸು ಜೀವನ ವಿಧಾನವನ್ನು ಬದಲಿಸುವ ಗುರಿ ಹೊಂದಿದ್ದ ಸರ್ವಾಧಿಕಾರಿಯನ್ನು ಮತ್ತು ಅವರ ಪಕ್ಷವನ್ನು ಬಹುಮತ ಸಿಗದಂತೆ ಜನತೆ ದೂರ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿ ಇದ್ದ ಮೋದಿಯವರು ಸುಮ್ಮನಿದ್ದು ಈಗ ೧೯೭೫ರಲ್ಲಿ ಜೂನ್ ೨೫ರಂದು ಇಂದಿರಾಗಾAಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದ ದಿನವನ್ನು ಸಂವಿಧಾನದ ಹತ್ಯಾ ದಿನವನ್ನಾಗಿ ಆಚರಿಸುತ್ತಿದೆ. ಇದಕ್ಕೆ ಕೇಂಧ್ರ ಸರ್ಕಾರ ಹೊಸ ಗೆಜೆಟ್ ನೋಟಿಫಿಕೇಶನ್ ಮಾಡಿ ಪ್ರತಿ ವರ್ಷ ಜೂನ್ ೨೫ರಂದು ಸಂವಿಧಾನದ ಹತ್ಯಾ ದಿನವೆಂದು ಮೋದಿ ಸರ್ಕಾರ ಘೋಷಿಸಿದೆ ಎಂದು ಅವರು ಟೀಕಿಸಿದರು.
ಮೂಲತ: ಬಿಜೆಪಿ ಪಕ್ಷ ಮತ್ತು ಸಂಘ ಪರಿವಾರ ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಇಂದಿಗೂ ಒಪ್ಪುವುದಿಲ್ಲ. ೧೯೪೯ರ ನವೆಂಬರ್ ೩೦ರಂದು ರಾಷ್ಟಿçÃಯ ಸ್ವಯಂ ಸೇವಕ ಸಂಘ ತನ್ನ ಆರ್ಗನೈಜರ್ ಪತ್ರಿಕೆಯಲ್ಲಿ ದೇಶದ ಸಂವಿಧಾನವನ್ನು ನಾವು ಒಪ್ಪುವುದಿಲ್ಲ. ನಮ್ಮ ಸಂವಿಧಾನ ಮನುಸ್ಮೃತಿ ಗ್ರಂಥ ಆಧಾರದ ಮೇಲೆ ರಚನೆಯಾಗಬೇಕೆಂದು ಬರೆಯಲಾಗಿದೆ ಎಂದು ಅವರು ಹೇಳಿದರು.
ಇಂದಿರಾಗಾAಧಿ ಅವರ ತುರ್ತು ಪರಿಸ್ಥಿತಿ ಮೀರಿಸುವಂತೆ ಮೋದಿ ನೇತೃತ್ವದ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಬಾಬರಿ ಮಜಿದ್ ಧ್ವಂಸ, ಗುಜರಾತ್ ಹತ್ಯಾಕಾಂಡ, ಆರ್ಟಿಕಲ್ ೩೭೧ ರದ್ದು, ಮಣಿಪುರದ ಅಂತರ್‌ಯುದ್ಧ, ಕೋರೆಗಾಂವ್ ಘಟನೆ, ಸತ್ಯ ಹೇಳಿದ ವಿಚಾರವಾದಿಗಳಿಗೆ ಜೈಲಿಗೆ ಹಾಕಿದ್ದು ಮುಂತಾದವರು ಸಂವಿಧಾನದ ಹತ್ಯೆಯಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್ ಬೈಠಕ್ ಕುರಿತು ಪ್ರಸ್ತಾಪಿಸಿದ ಅವರು, ನಾವು ಈಗಾಗಲೇ ಒಮ್ಮೆ ಬೃಹತ್ ಹೋರಾಟ ಮಾಡಿದ್ದೇವೆ. ಆದಾಗ್ಯೂ, ನಮ್ಮ ದಲಿತ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ವೈಫಲ್ಯವೂ ಇದೆ. ರಾಜ್ಯ ಸರ್ಕಾರವೂ ಸಹ ಸೂಕ್ತ ಕ್ರಮ ಕೈಗೊಳ್ಳಬೇಕು. ಆದಾಗ್ಯೂ, ಈಗ ನಾವು ರಾಷ್ಟçಪತಿಗಳ ಮಧ್ಯಸ್ಥಿಕೆಗೆ ಒತ್ತಾಯಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಸಭೆಯನ್ನು ಮಾಡಿ ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ನೇತೃತ್ವದಲ್ಲಿ ರಾಷ್ಟçಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸುತ್ತೇವೆ ಎಂದು ಅರ್ಜುನ್ ಭದ್ರೆ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಕ್ರಾಂತಿ, ಮಹಾಂತೇಶ್ ಬಡದಾಳ್, ಮಲ್ಲಿಕಾರ್ಜುನ್ ಖನ್ನಾ, ಸೂರ್ಯಕಾಂತ್ ಆಜಾದಪೂರ್, ಕಪಿಲ್ ಸಿಂಗೆ, ಮಹೇಶ್ ಎಂ. ಕೋಕಿಲೆ ಮುಂತಾದವರು ಉಪಸ್ಥಿತರಿದ್ದರು.