ಬಾಲಗಂಗಾಧರ ತಿಲಕ್, ಚಂದ್ರಶೇಖರ ಆಜಾದ್‌ರ ಜನ್ಮದಿನಾಚರಣೆ
ಕಲಬುರಗಿ:ಜು.23: ನಗರದ ಜೆ.ಆರ್ ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸ್ವಾತಂತ್ರ ಹೋರಾಟಗಾರರಾದ ‘ಬಾಲ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಉಭಯ ಸ್ವಾತಂತ್ರö ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಮಾತನಾಡಿ ಉಪನ್ಯಾಸಕ ಹಾಗೂ ಚಿಂತಕ ಎಚ್.ಬಿ.ಪಾಟೀಲ, “ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು” ಎಂದು ಸಾರಿ ಬ್ರಿಟಿಷರ ವಿರುದ್ಧ ಹೋರಾಡಿದ ಬಾಲ ಗಂಗಾಧರ ತಿಲಕರು ಪ್ರಖರ ರಾಷ್ಟçವಾದಿ, ಅಧ್ಯಾತ್ಮವಾದಿ, ಜನನಾಯಕ, ಆಧುನಿಕ ಭಾರತದ ರೂಪುರೇಷೆಯ ತಯಾರಕ, ಲೇಖಕರು. ‘ಕೇಸರಿ’, ‘ಮರಾಠಾ’ ಪತ್ರಿಕೆಗಳ ಮೂಲಕ ಭಾರತೀಯರಲ್ಲಿ ಸ್ವಾತಂತ್ರö್ಯದ ಕಿಚ್ಚು ಹೆಚ್ಚಿಸಿದರು. ಜನತೆಯಲ್ಲಿ ಒಗ್ಗಟ್ಟು ಉಂಟುಮಾಡಲು ಸಾರ್ವಜನಿಕವಾಗಿ ಗಣೇಶ, ಶಿವಾಜಿ ಜಯಂತಿಗಳನ್ನು ಆಚರಿಸಲು ಪ್ರಾರಂಭಿಸಿದರು ಎಂದರು.
ದೇಶದ ಆಜಾದವೇ ನನ್ನು ಗುರಿಯೆಂದು ಬಾಲ್ಯದಲ್ಲಿಯೇ ಬ್ರಿಟಿಷರ ವಿರುದ್ಧ ಗರ್ಜಿಸಿದ ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರö್ಯಕ್ಕೆ ನೀಡಿರುವ ಕೊಡುಗೆ ತುಂಬಾ ಅನನ್ಯವಾಗಿದೆ. ಕ್ರಾಂತಿಕಾರಿಯಾಗಿ ನಿರಂತರವಾಗಿ ಹೋರಾಟ ಮಾಡಿದ ಆಜಾದರು ಸ್ವಾತಂತ್ರö್ಯಕಾಗಿ ವೀರಮರಣ ಹೊಂದಿದ್ದಾರೆ.ಆಜಾದ್‌ರಲ್ಲಿರುವ ಅಪ್ಪಟವಾದ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ಅಕಾಡೆಮಿಯ ನಿರ್ದೇಶಕ ದತ್ತು ಹಡಪದ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಉಪನ್ಯಾಸಕ ಸಿದ್ದಲಿಂಗ ಪೂಜಾರಿ, ಪ್ರಮುಖರಾದ ಶಿವರಾಜ ಸಣಮನಿ, ಮಲ್ಲಿನಾಥ ಕಳಸ್ಕರ್, ಯಲ್ಲಪ್ಪ ಪೂಜಾರಿ, ಇಸ್ಮೆöÊಲ್ ಅತ್ತರ್, ವೀಣಾ ಬಿರಾದಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.