ತಾಯಿ ಹೆಸರಿನಲ್ಲಿ ಒಂದು ಸಸ್ಯ
ಕಲಬುರಗಿ:ಜು.23:ಶರಣಬಸವೇಶ್ವರ ವಸತಿ ಪಬ್ಲಿಕ ಶಾಲೆಯ 1ನೇ. 2ನೇ 3ನೇ ಮತ್ತು 4ನೇ ತರಗತಿಯ ಮಕ್ಕಳನ್ನು ಶಾಲೆಯಲ್ಲಿ ಸಸ್ಯ ನೆಡುವ ಕಾರ್ಯಕ್ರಮ ಇಂದು ಜರುಗಿತು. ಮಾನ್ಯ ಪ್ರಧಾನಮಂತ್ರಿಯವರ ಸಂದೇಶವನ್ನು ತಾಯಿ ಹೆಸರಲ್ಲಿ ಪ್ರತಿಯೊಂದು ಮಗುವು ಒಂದು ಸಸ್ಯವನ್ನು ನೆಡಬೇಕೆಂಬ ಕಾರ್ಯಕ್ರಮವು ಶಾಲೆಯ ಪ್ರಾಚಾರ್ಯರ ಮಾರ್ಗದರ್ಶನದಂತೆ ಎಲ್ಲಾ ಶಿಕ್ಷಕ ವೃಂದದವರಿಂದ ಹಾಗೂ ವಿದ್ಯಾರ್ಥಿಗಳಿಂದ ಸಸ್ಯ ನೆಡುವುದು ಕಾರ್ಯಕ್ರಮವನ್ನು ಅದ್ಧೂರಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳೆಲ್ಲರು ಮನೆಯಿಂದ ತಂದ ಸಸ್ಯಗಳನ್ನು ನೆಟ್ಟಿ ಅವುಗಳಿಗೆ ಮಣ್ಣು ತುಂಬು ನೀರು ಹರಿಸಿದರು ಮತ್ತು ಕೆಲವು ಮಕ್ಕಳು ಕಾಡು ಬೆಳಸಿ ನಾಡು ಉಳಿಸಿ, ಹಸಿರೆ ನಮ್ಮ ಉಸಿರು, ಮಗುವಿಗೊಂದು ಮರ, ಮರದಿಂದ ಮಳೆ ಮಳೆಯಿಂದ ಬೆಳೆ ಹೀಗೆ ಅನೇಕ ಘೋಷಣೆಗಳು ಕೂಗಿದರು.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಹಾಗೂ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಅವ್ವಾಜಿ ಹಾಗೂ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು, ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಅವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದರು.