ಚಿತ್ರಕಲಾ ಶಿಕ್ಷಣ ಬೆಳೆಯಬೇಕು: ಬಸವರಾಜ ಉಪ್ಪಿನ್
ಕಲಬುರಗಿ,ಜು.23-ಎಂ.ಬಿ.ನಗರದ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢಶಾಲಾ ವಿಭಾಗ)ಯಲ್ಲಿ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಚಿತ್ರಕಲಾ ಶಿಕ್ಷಕರ ಒಂದು ದಿನದ ಕಾರ್ಯಾಗಾರ, ಚಿತ್ರಕಲಾ ಸಮಗ್ರ ಶಿಕ್ಷಣ ಅಭಿವೃದ್ದಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಕುರಿತು ಕಾರ್ಯಾಗಾರ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಯೋನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಸವರಾಜ ಉಪ್ಪಿನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಚಿತ್ರಕಲಾ ಶಿಕ್ಷಣ ಬೆಳೆಯಬೇಕು ಚಿತ್ರಗಳ ಶಿಕ್ಷಣ ಮಕ್ಕಳಿಗೆ ನೀಡುವುದರ ಜೊತೆಗೆ ಪ್ರತಿಯೊಬ್ಬ ಶಿಕ್ಷಕರು ಚಿತ್ರ ರಚನೆಯಲ್ಲಿ
ತೊಡಗಿಸಿಕೊಳ್ಳಬೇಕು, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ್ದು ಮಕ್ಕಳನ್ನು ಪ್ರೇರೆಪಿಸುವ ಹಾಗೂ ಪಾಲಕರನ್ನು ಪ್ರೋತ್ಸಾಹಿಸಿಸುವ ಕಾರ್ಯಕ್ರಮ ಎಂದು ನುಡಿದರು.
ಉಪ ಪ್ರಾಂಶುಪಾಲ ಪ್ರತಿಮಾ ದೇವೂರ, ಚಿತ್ರಕಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿವಾನಂದ ಕೊಪ್ಪದ, ಘತ್ತರಗಾ ಸರಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಬಾಬುರಾವ್ ಮನಗೊಂಡ ಅವರು ವೇದಿಕೆ ಮೇಲೆ ಇದ್ದರು.
ಕಲಬುರಗಿ ಅಶೋಕ ನಗರ ಸಿದ್ದಾರ್ಥ ಪ್ರೌಢ ಶಾಲೆ ರಮೇಶ ಪತ್ತಾರ, ಘತ್ತರಗಾ ಸರಕಾರಿ ಪ್ರೌಢ ಶಾಲೆ ಬಸವರಾಜ ಎಸ್. ಕಲ್ಲೂರ, ಮಡಿಯಾಳ್, ಅನುದಾನಿತ ಪ್ರೌಢ ಶಾಲೆ ಗುರುನಾಥ ಶಿವಪೂರೆ, ಚಿತ್ರಕಲಾ ಶಿಕ್ಷಕ ಸೇವಾ ವಯೋನಿವೃತ್ತಿ ಹೊಂದಿದ ಸನ್ಮಾನಿಸಲಾಯಿತು. ಚಿತ್ರಕಲಾ ಶಿಕ್ಷಕ ಸಂಪನ್ಮೂಲ ಜಗದೀಶ ಪಾಟೀಲ ಚಿತ್ರಕಲಾ ಸಮಗ್ರ ಶಿಕ್ಷಣ ಅಭಿವೃದ್ದಿ ಕುರಿತು ಹಾಗೂ ಚಿತ್ರಕಲಾ ಶಿಕ್ಷಕರ ಪಾತ್ರ ಕುರಿತು
ಮಾಹಿತಿ ನೀಡಿದರು.
2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರಿಯಾಂಕ ಮಾನಪ್ಪ ದೊರೆ, ಶರಣ ಚಿದಾನಂದ ಕಲ್ಲೂರ, ಸನ್ನಿಧಿ ಎಸ್.
ಕುಲಕರ್ಣಿ, ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶ್ರೇಯಾ ಆರ್ ಮುಡಬಿ, ಚಿನ್ಮಯಿ ಎಸ್. ಕುಂಬಾರ, ಸುಹಾನಿ ಪಾಟೀಲ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿಲಾಯಿತು.
ಕಲಬುರಗಿ ಚಿತ್ರಕಲಾ ಶಿಕ್ಷಕರ ಸಂಘ ಅಧ್ಯಕ್ಷ ಶಾಂತಮಲ್ಲ ಶಿವಬೊ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಚಿತ್ರಕಲಾ ಶಿಕ್ಷಣ ಪ್ರಾಥಮಿಕ ಹಂತದಲ್ಲೇ ಪ್ರಾರಂಭವಾಗಬೇಕು ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಚಿತ್ರಕಲಾ ಶಿಕ್ಷಣ ಪಾತ್ರ ಬಹುದೊಡ್ಡದು ಹಾಗೂ ಚಿತ್ರಕಲಾ ಶಿಕ್ಷಣ ಅಧ್ಯಯನದಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಹಸ್ತಾಕ್ಷರಗಳು ಕೂಡ ಸುಂದರವಾಗಿ ಪರೀಕೆಯಲ್ಲಿ ಹಿಚ್ಚಿನ ಅಂಕಗಳು ಪಡೆಯಲು ಪೂರಕವಾಗುತ್ತದೆ ಎಂದು ನುಡಿದರು ಮತ್ತು ಪ್ರತಿಭಾವಂತ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿದ್ದು, ವಯೋ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಗೌರವ ಸನ್ಮಾನ ಒಂದು ವಿಶಿಷ್ಟ ಕಾರ್ಯಕ್ರಮ ಎಂದು ಬಣ್ಣಿಸಿದರು.
ಚಿತ್ರಕಲಾ ಪ್ರಾರ್ಥನೆ ಗೀತೆ ಹಾಡಿದರು, ಹಣಮಂತ ಸನಾದಿ ಸ್ವಾಗತಿಸಿದರು, ಮಲ್ಲಿಕಾರ್ಜುನ ವಿ. ಕೊರಳ್ಳಿ ಪ್ರಾಸ್ತಾವಿಕ ಮಾತನಾಡಿದರು, ಪ್ರಭು ಜಾಣ ಕಾರ್ಯಕ್ರಮ ನಿರೂಪಿಸಿದರು, ಮಾಹಾಂತೇಶ ಗೋಪರೆಡ್ಡಿ ವಂದಿಸಿದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಚಿತ್ರಕಲಾ ಶಿಕ್ಷಕರು ಭಾಗವಹಿಸಿದ್ದರು.