ಹಿಂದು ಮುಸ್ಲಿಂ ಭಾವೈಕ್ಯತೆಯ ಹಲಕರ್ಟಿ ದರ್ಗಾ ಜಾತ್ರಾ ಮಹೋತ್ಸವ
ವಾಡಿ,ಜು.23-ಸುಪ್ರಸಿದ್ಧ ಸೂಫಿ ಸಂತ ಹಲಕರ್ಟಿ ದರ್ಗಾದ ಹಜರತ್ ಖ್ವಾಜಾ ಸೈಯದ್ ಮಹ್ಮದ ಬಾದಶಹಾ ಖಾದ್ರಿ ಚಿಸ್ತಿ ಯಮನಿ ಖದೀರ್ ಅವರ 47ನೇ ಜಾತ್ರಾ ಪ್ರಯುಕ್ತ ಹೈದ್ರಬಾದದಿಂದ ವಿಶೇಷ ರೈಲಿನ ಮೂಲಕ ಹೊತ್ತು ತಂದ ಸಂದಲ್ ದರ್ಗಾದವರೆಗೆ ಮೆರವಣಿಗೆ ನಡೆಸಲಾಯಿತು.
ದರ್ಗಾದ ಸಜ್ಜಾದ್ ಏ ನಶೀನ್ (ಪೀಠಾಧಿಪತಿ) ಹಜರತ್ ಖ್ವಾಜಾ ಸೈಯದ್ ಅಬುತುತಾಬ್ ಶಹಾ ಖಾದ್ರಿ ಸಂದಲ್ ಹೊತ್ತರು. ಸಂದಲ್ ಮೆರವಣಿಗೆ ಜಿಟಿಜಿಟಿ ಮಳೆಯಲ್ಲಿ ಪ್ರಮುಖ ರಸ್ತೆಗಳ ಮೂಲಕ ದರ್ಗಾಕ್ಕೆ ತಲುಪಿತು. ಸಂದಲ್ ಮೆರವಣಿಗೆಯಲ್ಲಿ ಖವಾಲಿ ಗಾಯನ ನಡೆದವು. ಹಲವು ಮಠಾಧೀಶರು, ಮೌಲಿಗಳು ಪಾಲ್ಗೋಂಡಿದ್ದರು. ಕಾರ್ಯಕ್ರಮದಲ್ಲಿ ಹಿಂದು ಮುಸ್ಲಿಂಮರು ಪಾಲ್ಗೊಂಡು ಭಾವೈಕ್ಯತೆ ಮೆರೆದರು.