ಜಾತೀಯತೆಗಿಂತ ರಾಷ್ಟ್ರೀಯತೆಗೆ ಮಹತ್ವ ನೀಡಿ: ಸಾಹಿತಿ ಚಂದ್ರಕಾಂತ ಪೋಸ್ತೆ
ಬೀದರ: ಜು.23:ಇಂದಿನ ದಿನಗಳಲ್ಲಿ, ರಾಷ್ಟ್ರದಲ್ಲಿ ತಾಂಡವವಾ ಡುತ್ತಿರುವ ಜಾತೀಯತೆಯ ಬದಲಾಗಿ ರಾಷ್ಟ್ರೀಯತೆ ಯನ್ನು ಮೈಗೂಡಿಸಿಕೊಂಡಾಗ ಮಾತ್ರ ದೇಶದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಚಿಂತಕರಾದ ಚಂದ್ರಕಾಂತ ಪೋಸ್ತೆಯವರು ಅಭಿಪ್ರಾಯ ಪಟ್ಟರು.
ಅವರು ಇಂದು ಬೀದರ್‍ನ ಜೈ ಹಿಂದ್ ಹಿರಿಯ ನಾಗರಿಕರ ಸಂಘದಲ್ಲಿ ಏರ್ಪಡಿಸಲಾದ “ಬುದ್ಧ, ಬಸವ ಹಾಗೂ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳ ಕುರಿತು” ವಿಶೇಷ ಉಪನ್ಯಾಸ ನೀಡುತ್ತಿದ್ದರು. ಬುದ್ಧ ಬಸವ ಅಂಬೇಡ್ಕರ್ ರವರಂತಹ ಮಹಾನುಭಾವರನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದರಿಂದ ಅವರ ತತ್ವ ಸಿದ್ಧಾಂತಗಳನ್ನು ಜಗತ್ತಿನೆಲ್ಲೆಡೆ ಪ್ರಸಾರಗೊಳಿಸಲು ಸಾಧ್ಯವಾಗದೆ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಸರ್ವ ಜನಾಂಗದವರು ಕೈಜೋಡಿಸಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನರವರು ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆಯ ಉದ್ದೇಶವನ್ನಿಟ್ಟುಕೊಂಡು 2019 ರಲ್ಲಿ ಆರಂಭಿಸಲಾದ ಜೈ ಹಿಂದ್ ಸಂಘವು, ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಸಂದೇಶವನ್ನು ಜನತೆಗೆ ಮುಟ್ಟಿಸುವ ಉದ್ದೇಶದಿಂದ ಅನೇಕ ರಾಷ್ಟ್ರೀಯ ಭಾವೈಕ್ಯತೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ನುಡಿದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯ ಉದ್ಯಮಿ ರಾಮಕೃಷ್ಣ ಮುನಿಗ್ಯಾಲರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷರಾದ ಪೆÇ್ರಫೆಸರ ವಿಜಯಕುಮಾರ ಸೂರ್ಯಾನ್ ರವರು ಸ್ವಾಗತಿಸಿದರು. ಕೊನೆಯಲ್ಲಿ ಕೋಶಾಧ್ಯಕ್ಷರಾದ ಗಂಗಪ್ಪ ಸಾವಳೇಯವರು ವಂದಿಸಿದರು. ರಾಮಕೃಷ್ಣನ್ ಸಾಳೆ, ಅರವಿಂದ ಕುಲಕರ್ಣಿ, ಶಂಕರ್ ಚಿದ್ರಿ, ಸಿಮ್ರಾನ, ವಿಶ್ವನಾಥ ಸುನಾರ್ ಮುಂತಾದವರು ಹಾಜರಿದ್ದರು