ಬಡವರ ಬಾಳಿಗೆ ಬೆಳಕಾಗುವ ಬರ್ಥ್ ಡೇ ಗಳಾಗಲಿ: ಬಸವಲಿಂಗ ಶ್ರೀ
ಕಾಳಗಿ.ಜು.23: ಪ್ರಸಕ್ತ ವಿದ್ಯಮಾನದಲ್ಲಿ ಜನತೆ ತಮ್ಮ ತಮ್ಮ ಜನ್ಮದಿನಗಳನ್ನು ಬಹು ವಿಚಿತ್ರವಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ನಾವುಗಳು ಆಚರಿಸಿಕೊಳ್ಳುತ್ತಿರುವ ಬರ್ಥ್ ಡೇ ಗಳು ಬಡವರ ಬಾಳಿಗೆ ಬೆಳಕಾಗುವಂತಾಗಬೇಕು ಎಂದು ಕೋಡ್ಲಿಯ ಬಸವಲಿಂಗ ಶ್ರೀಗಳು ತಮ್ಮ ಆಶಿರ್ವಾದದಿಂದ ತಿಳಿಸಿದರು.
ಖ್ಯಾತ ಉದ್ಯಮಿ ಹಾಗೂ ಕಾಳಗಿ ತಾಲೂಕು ವೀರಶೈವ ಲಿಂಗಾಯತ ಯುವ ಮುಖಂಡರೂ ಆಗಿರುವ ಮಲ್ಲೀನಾಥ ಕೋಲಕುಂದಿ ಕೋಡ್ಲಿ ಅವರ ಅಭಿಮಾನಿ ಬಳಗದವರು ಸೋಮವಾರ ಕೋಡ್ಲಿಯ ಕಂಠೇಪ್ಪ ಮಾಸ್ಟರ್ ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವ ಮಲ್ಲೀನಾಥ ಕೋಲಕುಂದಿ ಅವರ 49ನೇ ಜನ್ಮದಿನದ ನಿಮಿತ್ಯ ಅನ್ನದಾಸೋಹಕ್ಕೆ ಚಾಲನೆ ನೀಡಿ ಅವರು, ಆಶಿರ್ವಚನ ನೀಡುತ್ತಿದ್ದರು.
ಜನ್ಮದಿನವೆಂಬ ನೆಪದಲ್ಲಿ ಸಾರ್ವಜನಿಕ ಸೇವೆಗೈಯುತ್ತಿರುವ ಈ ಸಮಾರಂಭ ಸಾರ್ವಜನಿಕರಿಗೆ ಮಾದರಿಯಾಗಿದೆ ಎಂದರು.
ಬಟ್ಟೆ, ಆಹಾರ, ಆಸನ ವಿತರಣೆ:
ಕೋಡ್ಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ಬಡ-ಬಗ್ಗರಿಗೆ, ದೀನ-ದಲಲಿತರಿಗೆ, ನಿರಾಶ್ರಿತ ನೂರಾರು ಜನ ಬಡ ಕುಟುಂಬಗಳಿಗೆ ಕೋಲಕುಂದಿ ಅಭಿಮಾನಿಗಳು ಸೀರೆ, ಕುಪ್ಪಸ, ಪಂಜೆ ಮತ್ತು ಶರ್ಟ್ ಳನ್ನು ನೀಡಿ, ಪ್ರಸಾದ ವಿತರಿಸಿದರು.
ಕೋಡ್ಲಿ ಗ್ರಾಮದ ಸರಕಾರಿ ಶಾಲೆಯಗಳಲ್ಲಿ ಅಭ್ಯಾಸ ಮಾಡುತ್ತಿರುವ ಸಾವಿರಾರು ಮಕ್ಕಳಿಗೆ ಕುಳಿತು ಅಭ್ಯಾಸ ಮಾಡಲು ಪ್ರತಿ ಮಗುವಿಗೂ ಒಂದೊಂದು ಆಸನಗಳನ್ನು ನೀಡಿ ಗೌರವಿಸಲಾಯಿತು.
ಶರಣು ಸಾಲಿಮಠ ಮೋಘಾ, ಮಲ್ಲಿನಾಥ ಪಾಟೀಲ ಕಾಳಗಿ, ವಿಜಯಕುಮಾರ ಚೆಂಗಟಾ, ಚಂದಪ್ಪ ಮೋಘಾ ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಷ. ಬ್ರ. ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ ವಹಿಸಿದ್ದರು. ವೈಜನಾಥರೆಡ್ಡಿ ದೇಶಮುಖ, ಶ್ರೀ ಕಾಂತ ತಾಂಡೂರ, ವಿಜಯಕುಮಾರ ರಾಠೋಡ ಶಾದಿಪೂರ, ಅಮೃತ ರೆಡ್ಡಿ ದೇಶಮುಖ, ನಾಗರಾಜ ಚಿಕ್ಕಮಠ, ವಿಜಯಕುಮಾರ ತುಪ್ಪದ ತೆಂಗಳಿ, ಕಾಳಶೇಟ್ಟಿ ಪಡಶೇಟ್ಟಿ, ಬಾನುಬೇಗಂ ದೇವರ, ಮಾರುತಿ ಜಮಾದಾರ, ರಾಜು ಸಿಳ್ಳಿನ, ಗಂಗಾಧರ ಕುಂಬಾರ, ಸಂಜೀವ ರೆಡ್ಡಿ ದೇಶಮುಖ, ಸಾಗರ ಪಾಟೀಲ, ಸಿದ್ದು ಸೀಗಿ, ಜಗದೀಶ ಮಾಲಿಪಾಟೀಲ, ಸೂರ್ಯಕಾಂತ ಹಲಚೇರಿ, ಜಗನ್ನಾಥ ಮಗಿ, ಬಸವರಾಜ ತುಪ್ಪದ, ಉಮೇಶ್ ಯಲ್ಮಡಗಿ, ಬಸವರಾಜ ಕರಕಮುಕಲಿ, ಸಿದ್ದು ಬುಬಲಿ, ಶರಣಪ್ಪ ಪೆದ್ದಿ, ಶರಣು ಸಕ್ರಿ, ಅಮರ ತಾಂಡೂರ, ಉಮೇಶ ಗುತ್ತೇದಾರ, ಪ್ರದೀಪ ತಾಂಡೂರ, ರಾಜು ವಜ್ಜರಗಿ ಉಪಸ್ಥಿತರಿದ್ದರು. ಜೈ ಶಂಕರ ಕೋಲಕುಂದಿ ಉದ್ಘಾಟನೆ ಮಾಡಿದರು. ಗ್ರಾಪಂ.ಅಧ್ಯಕ್ಷೆ ಗೀತಾ ಪ್ರೇಮ ಕುಮಾರ ಸಭೆಯ ಅಧ್ಯಕ್ಷತೆ ವಹಿಸಿದರು. ಅಭಿಮಾನಿ ಬಳಗ ಅಧ್ಯಕ್ಷರಾದ ಸಂಗಮೇಶ ತಾಂಡೂರ ಸ್ವಾಗತಿಸಿದರು.