ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡಲು ಐಜಿ ಹಿಲೋರಿ ಕರೆ
ಬೀದರ್:ಜು.23:ಸಮಾಜದಲ್ಲಿ ನ ದಿನಿತ್ಯದ ಘಟನೆಗಳ ಬಗ್ಗೆ ಪೊಲೀಸರು ಮಾಹಿತಿಗಳನ್ನು ಕಲೆಹಾಕಿ , ಮಾಹಿತಿ ಗಳನ್ನು ಸಂಗ್ರಹಿಸಿ , ಸಮಾಜದಲ್ಲಿ ಶಾಂತಿ ನೆಲೆಸುವಂತೆಶಿಸ್ತಿನ ಸಿಪಾಯಿಗಳಾಗಿ ದಕ್ಷ ಅಧಿಕಾರಿಗಳಾಗಿ ತಮ್ಮಕರ್ತವ್ಯವನ್ನು ಮಾಡಬೇಕುಎಂದುಕಲಬುರ್ಗಿಈಶಾನ್ಯ ವಲಯ ಪೊಲೀಸ್‍ಉಪಮಹಾನಿರೀಕ್ಷಕಅಜಯ ಹಿಲೋರಿ ತಿಳಿಸಿದರು. ಸಮಾದಲ್ಲಿಜರುಗುವಅಘಾತಕಾರಿ ಸಂಗತಿಗಳನ್ನು ನಿಯಂತ್ರಿಸಿ ,ತಮ್ಮಠಾಣಾ ವ್ಯಾಪ್ತಿಯಎಲ್ಲ ಹಳ್ಳಿಗಳ ಸಾರ್ವಜನಿಕರಕುಂದು ಕೊರತೆಗಳನ್ನು ಆಲಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸವೇ ಪೊಲೀಸ್‍ಇಲಾಖೆಯದಾಗಿದೆಎಂದರು.
ನಂತರಠಾಣೆಆವರಣದಲ್ಲಿಆಲದ ಸಸಿಯನ್ನು ನೆಟ್ಟು ಪ್ರತಿಯೊಬ್ಬರು ಹಸಿರುಕರಣ ಮತ್ತು ಪ್ರಕೃತಿಯ ಉಳಿವಿಗಾಗಿ ಪಣತೊಡುವ ಕೆಲಸ ಮಾಡಬೇಕುಎಂದು ಸಲಹೆ ನೀಡಿದರು.
ಠಾಣಾಆವರಣದಲ್ಲಿನ ಸ್ವಚ್ಚತೆ, ಆಡಳಿತ, ಅಲ್ಲಿನ ಪೊಲೀಸರಕರ್ತವ್ಯದ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು.
ಇದೇ ವೇಳೆ ಠಾಣಾಆವರಣದಲ್ಲಿ ನೂತನವಾಗಿ ನಿರ್ಮಿಸಿದ ಬ್ಯಾಡ್ಮಿಂಟನ್‍ಕ್ರೀಡಾಂಗಣವನ್ನುಉದ್ಘಾಟಿಸಿದರು. .ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಜಿ.ಎಸ್ ಬಿರಾದರ್, ಪಿ ಎಸ್ ಐ ವಿಶ್ವರಾಧ್ಯ, ವೀರಶೆಟ್ಟಿ ಸೇರಿದಂತೆಇತರರಿದ್ದರು.