ಶಾಲಾ ಹಸಿರುಕರಣಕ್ಕೆ ವನಮಾರಪಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳ ಪಣ
ಔರಾದ್ :ಜು.23: ಸುಂದರ ಪರಿಸರ, ಸ್ವಚ್ಚಂಧ ಗಾಳಿ ಸಿಗಬೇಕಾದರೇ ಎಲ್ಲರು ಸಸಿಗಳನ್ನು ನೆಟ್ಟು ಅವುಗಳ ಪೆÇೀಷಣೆ ಮಾಡುವುದು ಅಗತ್ಯವಾಗಿದೆ ಎಂದು ವನಮಾರಪಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಶಿವಾಜಿ ಪವಾರ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸೋಮವಾರ ರಿಲಯನ್ಸ್ ಫೌಂಡೆಷನ್ ಮತ್ತು ಔಟ್ ರೀಚ್ ಸಂಸ್ಥೆ ಸಹಯೋಗದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಔಟ್ ರೀಚ್ ಸಂಸ್ಥೆ ಸಾಮಾನ್ಯ ಬರಡು ಭೂಮಿಯಲ್ಲಿ ಉತ್ತಮ ಸಸಿಗಳನ್ನು ನೆಟ್ಟು ಶುಧ್ಧ ಪರಿಸರ ಮತ್ತು ಹಸಿರುಕರಣಕ್ಕೆ ಶ್ರಮಿಸುತ್ತಿದೆ. ಆದಕಾರಣ ನಾವುಗಳು ಮುಂದಿನ ದಿನಗಳಲ್ಲಿ ಉತ್ತಮ ರೀತಿಯಿಂದ ಗಾಳಿ ಪಡೆದು ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೇ ಪ್ರತಿಯೊಬ್ಬರು ಸಸಿಗಳನ್ನು ನೆಡುವುದು ಅಗತ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಗೌಡಾ ಮಾತನಾಡಿ, ಪ್ರಕೃತಿ ನಮಗಾಗಿ ಎಲ್ಲವನ್ನು ಉಚಿತವಾಗಿ ನೀಡುತ್ತದೆ. ಆದರೇ ನಾವುಗಳು ಪ್ರಕ್ರತಿಗಾಗಿ ಎನು ಧಾರೆಯೆರುತ್ತಿದ್ದೆವೆ ಅನ್ನುವುದು ಎಲ್ಲರು ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕೆ ಪೂರಕವೆಂಬಂತೆ ಪರಿಸರ ಉತ್ತಮವಾಗಿರಬೇಕಾದರೇ ಸಸಿಗಳನ್ನು ನೆಡುವುದು ಅಗತ್ಯವಾಗಿದೆ ಎಂದರು.
ಶಾಲೆಯ ಆವರಣದಲ್ಲಿ ವಿವಿಧ ತಳಿಯ ಸುಮಾರು 300ಕ್ಕೂ ಹೆಚ್ಚು ಗಿಡಗಳನ್ನು ಮಕ್ಕಳು ಖುಷಿಯಿಂದ ನೆಟ್ಟು ಅವುಗಳನ್ನು ಪೆÇೀಷಿಸುವ ಪ್ರತಿಜ್ಞೆ ಮಾಡಿದರು. ಈ ಸಂದರ್ಭದಲ್ಲಿ ರಾಜೇಂದ್ರ , ಪದ್ಮಾವತಿ, ದೀಪಾ, ಶಶಿಕಲಾ, ಸಂಗೀತಾ, ಇತರರಿದ್ದರು.