ಕಡ್ಡಾಯ ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ
ಕೊಲ್ಹಾರ:ಜು.23: ಪಟ್ಟಣದಲ್ಲಿ ಕನ್ನಡ ನಾಮ ಫಲಕಗಳನ್ನು ಕಡ್ಡಾಯಗೊಳಿಸುವಂತೆ ತಾಲೂಕು ದಂಡಾಧಿಕಾರಿ ಎಸ್ ಎಸ್ ನಾಯಕರಮಠ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಅಧಿಕಾರಿ ಉಮೇಶ್ ಚಲವಾದಿ ರವರಿಗೆ ಮನವಿ ಸಲ್ಲಿಸಿದರು
ಕರವೇ ಕೊಲ್ಹಾರ ತಾ.ಉಸ್ತುವಾರಿ ರವಿ ಗೊಳಸಂಗಿ ಕರವೇ ತಾ.ಅಧ್ಯಕ್ಷ ವಿಜಯಮಾಂತೇಶ ಗಿಡ್ಡಪ್ಪಗೋಳ ಮಾತನಾಡಿ ಕೊಲ್ಹಾರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಸರ್ಕಾರಿ ಕಛೇರಿಗಳು ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ಕಡ್ಡಾಯವಾಗಿ ಕನ್ನಡ ನಾಮ ಫಲಕವನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ.ಎ.ನಾರಯಣಗೌಡರ ಹೋರಾಟದ ಪ್ರತಿಫಲವಾಗಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಿ, ಶೇ 60% ರಂತೆ ಕನ್ನಡ ನಾಮ ಫಲಕಗಳನ್ನು ಅಳವಡಿಸಲು ಕರ್ನಾಟಕ ಘಣ ಸರ್ಕಾರದ ಆದೇಶದಂತೆ ಪಟ್ಟಣದ ಅಂಗಡಿ ಮುಂಗಟ್ಟುಗಳು ಸರ್ಕಾರಿ ಕಛೇರಿಗಳು ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ 15 ದಿನಗಳ ಒಳಗಾಗಿ ಸರಿಪಡಿಸಬೇಕು ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ವಿಜಯಪುರ ಮತ್ತು ಬಾಗಲಕೊಟ ಜಿಲ್ಲಾ ಉಸ್ತುವಾರಿಯಾಗಿರುವ ಶ್ರೀ ಅಶೋಕ ಮ ಹಾರಿವಾಳ ಇವರ ನೇತೃತ್ವದಲ್ಲಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕೊಲ್ಹಾರ ತಾಲೂಕಾ ಘಟಕದಿಂದ ಉಗ್ರ ಹೊರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾವತ ಬರಗಿ ಮಂಜುನಾಥ್ ಸೊನ್ನದ ಶ್ರೀಶೈಲ ಕುಂಬಾರ ಅಶೋಕ ಹೇಳವಾರ್ ಸಹಿತ ಅನೇಕರು ಉಪಸ್ಥಿತರಿದ್ದರು,