ಶಾಂತಿನಿಕೇತನ ಶಾಲೆಯಲ್ಲಿ ಗುರು ಪೂರ್ಣಿಮೆ
ವಿಜಯಪುರ,ಜು.23:ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ ಅವರು ವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಮಾತನಾಡುತ್ತ ಭಾರತಿಯ ಸಂಸ್ಕøತಿಯಲ್ಲಿ ಗುರುವಿಗೆ ಶ್ರೇಷ್ಠವಾದ ಸ್ಥಾನವಿದೆ. ಪುರಾಣ, ಪುಣ್ಯಕಥೆಗಳಲ್ಲಿ ಗುರುವಿಗೆ ಸಿಕ್ಕ ಸ್ಥಾನ ಎಂತಹದ್ದು ಎಂದು ತಿಳಿಯಬಹುದು. ರಾಮಾಯಣದಲ್ಲಿ ರಾಮ ಮರ್ಯಾದ ಪುರುಷೋತ್ತಮ ಎಂದು ಅನಿಸಿಕೊಳ್ಳಲು ಅವನಿಗೆ ಸಿಕ್ಕ ವಶಿಷ್ಠ ಗುರುವೆ ಕಾರಣ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಶರತ್ ಬಿರಾದಾರ ಅವರು ಮಾತನಾಡಿ, ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಗುರು ಆದವನು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗವನ್ನು ತೋರಿಸಿ ಸಮಾಜದ ಸತ್ ಪ್ರಜೆಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದ್ದಾನೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ದಿವ್ಯಾ ಬಿರಾದಾರ ಅವರು ಎಲ್ಲ ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆಯ ಶುಭಾಶಯವನ್ನು ಕೋರಿದರು.
ಪ್ರಾಚಾರ್ಯ ಶೀಧರ ಕುರಬೇಟ್, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ.ಎಚ್. ಸಗರ್, ಶಶಿಧರ್, ಅಶ್ವಿನ್, ಅನಿಲ್, ಕಿರಣ್, ಸರೋಜಾ, ಸೀಮಾ, ಶ್ರೀದೇವಿ, ದೀಪಾ, ಅಪ್ಸರಾ, ತಬಸುಮ್, ಹೀನಾ, ಸುರೇಖ, ತೇಜಸ್ವಿನಿ ಮುಂತಾದವರು ಉಪಸ್ಥಿತರಿದ್ದರು.