ಜಿಲ್ಲೆಯ ಪ್ರಥಮ ಪ್ರೊಬೊನೊ ನ್ಯಾಯವಾದಿ ಭೃಂಗಿಮಠರಿಗೆ ಹೃದಯ ಸ್ಪರ್ಶಿ ಸನ್ಮಾನ
ವಿಜಯಪುರ,ಜು.23 :ಮಹಿಳೆಯರ ಕಾರ್ಮಿಕರ, ಸಮಾಜದ ಕಟ್ಟ ಕಡೆಯ ಪ್ರಜೆಗಳ ಹಕ್ಕುಗಳು ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಯಾರಿಗೂ ಕನಸು ಕೊಡಾ ಬೀಳದ 12 ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲರ ಹಕ್ಕುಗಳು ಬಗ್ಗೆ ಮಾತಾಡಿದರು ಇತ್ತೀಚಿಗೆ ಭಾರತದ ನೂತನ ÀಪಾÀರ್ಲಿಮೆಂಟ ಕಟ್ಟಡದಲ್ಲಿ ಅವರ ವಚನ ಕಳಬೇಡ ಕೊಲಬೇಡ …..ವನ್ನು ಕೆತ್ತಿಸಿದ್ದು ವಿಶ್ವದ ಇತಿಹಾಸದಲ್ಲಿ ಸೇರಬೇಕಾದುದು, ಶರಣರ ವಚನಗಳು ಹಲವು ಸಂವಿಧಾನಗಳ ಪ್ರತಿಕವಾಗಿದೆ. ಅದಕ್ಕಾಗಿ ನಾವು ವಚನ ಸಾಹಿತ್ಯವನ್ನು ತಗೆದುಕೊಂಡು ಲೋಕದ ನ್ಯಾಯಾಂಗ ವ್ಯವಸ್ಥೆಗೆ ಹೋಗಬೇಕು ಎಂದು ಹಿರಿಯ ಸಾಹಿತಿ ಶಂಕರ ಬೈಚವಾಳ ಹೇಳಿದರು
ವಿಜಯಪುರದ ಕನ್ನಡ ಪ್ರಸ್ತಕ ಪರಿಷತ್ತು ಹಾಗೂ ಕಾನೂನು ಕ್ರಿಯಾತ್ಮಕ ವೇದಿಕೆ ಇವರÀ ಅಡಿಯಲ್ಲಿ ನಡೆದ ನ್ಯಾಯ ಶಾಸ್ತ್ರ ಹಾಗೊ ವಚನಗಳು ವಿಷಯ ಕುರಿತು ವಿಚಾರ ಸಂಕೀರ್ಣ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸ¨ssÀದ ಜಿಲ್ಲಾ ಘಟಕದ ನೂತನ ಆಡಳಿತ ಮಂಡಳಿಯ ಸದಸ್ಯರಾದ ಮತ್ತು ಜಿಲ್ಲೆಯ ಪ್ರಥಮ ಪ್ರೊಬೊನೊ [ಜನಸ್ನೇಹಿ] ವಕೀಲರಾಗಿ ಕಾನೂನು ಸೇವೆ ಪ್ರಾಧಿಕಾರದಿಂದ ನೇಮಕಗೊಡ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿÀಮಠ ಅವರಿಗೆ ಸನ್ಮಾನಿಸಲು ಜಲನಗರದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು,
ಮುಖ್ಯ ಅತಿಥಿ ಸ್ಥಾನವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸ¨ssÀದ ಜಿಲ್ಲಾ ಘಟಕದ ನೂತನ ಆಡಳಿತ ಮಂಡಳಿಯ ಸದಸ್ಯರಾದ ಮತ್ತು ಜಿಲ್ಲೆಯ ಪ್ರಥಮ ಪ್ರೊಬೊನೊ [ಜನಸ್ನೇಹಿ] ವಕೀಲರಾಗಿ ಕಾನೂನು ಸೇವೆ ಪ್ರಾಧಿಕಾರದಿಂದ ನೇಮಕಗೊಡ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿÀಮಠ ವಕೀಲರು ಮಾತನಾಡಿ, ಸರ್ವಧರ್ಮಗಳಲ್ಲಿನ ತಿರುಳು ವಚನಗಳಲ್ಲಿ ಕಾಣಬಹುದು. ವಿಶೇಷವಾಗಿ ವೀರಶೈವ ಲಿಂಗಾಯತ ಧರ್ಮದ ಸಿದ್ದಾಂತವೆಂದರೆ ಅದು ಸಮಾನತೆ, ಸಹಕಾರ , ಪರಸ್ಪರ ಗೌರವ, ಧ್ಯಾನ ಚಿಂತನ ಮಂಥನಗಳಾಗಿವೆ. ಇವುಗಳÀ ಒಳ ಅರ್ಥ ಅರಿತರೆ ಮಾನವ ಜನಾಂಗಕ್ಕೆ ಒಳಿತಾಗುತ್ತದೆ, ವೀರಶೈವ ಲಿಂಗಾಯತ ಧರ್ಮದಲ್ಲಿನ ಒಳ ತಿರುಳೆ ಸಕಲರ ಕಲ್ಯಾಣ ಆಗಿವೆ. ಇವು ಇಂದಿನ ಕಾನೂನುಗಳ ಮೂಲವು ಸಹ ಅನಿಸಿವೆ, ಕಾನೂನು ಹಾಗೂ ಧಾರ್ಮಿಕವಾಗಿರುವ ಮಾನವ ಕಲ್ಯಾಣದ ಜೊತೆಗೆ ಸರ್ವ ಜೀವಿಗಳಿಗೆ ಲೇಸು ಬಯಸುವದೇ ವೀರಶೈವ ಲಿಂಗಾಯತ ದರ್ಮದಮೂಲ ಉದ್ದೇಶವಾಗಿದೆ. ಇದನ್ನರಿತÀ ಸಕಲ ಜೀವಿಗಳಿಗೂ ಒಳಿತಾಗುತ್ತದೆ ಎಂದ ಅವರು, ಮನುಷ್ಯರು ಪರಸ್ಪರ ಸಹಬಾಳ್ವೆ ಸಹಕಾರದಿಂದ ಬಾಳು ಸಮಾಜ ಮುಖಿಯಾಗಿ ಕೆಲಸ ಮಾಡಲು ವೀರಶೈವ ಲಿಂಗಾಯತ ಧರ್ಮದ ವ್ಯಾಪ್ತಿಯಲ್ಲಿ ಬರುವ ಸಾಹಿತ್ಯ ಮತ್ತು ಅದರ ಪರಂಪರೆ ಸಮಾಜಕ್ಕೆ ಪೂರಕವಾಗಿದೆ ಎಂದರು,
ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತವಾಗಿ ಕಾನೂನು ಸೇವೆ ದೊರಕಲಿದ್ದು ಅದರ ಸದುಪಯೋಗವನ್ನು ಜನರು ಮಾಡಿಕೊಳ್ಳಬೇಕೆಂದು ತಿಳಿಸಿದರು, ಈ ಸಂಧರ್ಭದಲ್ಲಿ ನ್ಯಾಯವಾದಿ ಭೃಂಗಿಮಠ ಅವರು ವೀರಶೈವ ಮಹಾಸಭಕ್ಕೆ ನೂತನವಾಗಿ ಆಯ್ಕೆಯಾದಕ್ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು,
ಹಿರಿಯ ಸಾಹಿತಿ ಹಾಗೂ ಪುಸ್ತಕ ಪರಿಷತ್ತಿನ ಸಂಚಾಲಕ ಸಿದ್ದರಾಮ ಬಿರಾದಾರ ಮನಗೂಳಿ ಅವರು ಮಾತನಾಡಿ, ಪ್ರಾಚೀನ ಅವಧಿಯಲ್ಲೆ ನ್ಯಾಯಶಾಸ್ತ್ರ ಇದ್ದು 12ನೇ ಶತಮಾನದಲ್ಲಿ ಶರಣರ ವಚನಗಳಲ್ಲಿ ಅದನ್ನು ಕ್ರಿಯಾತ್ಮಕಗೊಳಿಸಿದರು. ಜೊತೆಗೆ ನಾವೆಲ್ಲಾ ಒಂದು ಎಂಬ ಭಾವನೆ ಶಿವ ಶರಣ ಪರಂಪರೆಯ ಜನರು ಶತ ಶತಮಾನಗಳಿಂದ ಬಿಂಬಿಸುತ್ತಾ ಬಂದಿದ್ದಾರೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಕರ್ನಾಟಕದ ಉಚ್ಚನ್ಯಾಯಾಲಯ ಬೆಂಗಳೂರಿನ ನ್ಯಾಯವಾದಿ ಅನುಸೂಯ ಹಿರೇಮಠ ಅವರು ವಹಿಸಿ ಮಾತನಾಡಿ, ನ್ಯಾಯಶಾಸ್ತ್ರ ಎಂಬುದು ಕಾನೂನಿನ ತತ್ವ, ಸಿದ್ದಾಂತ ವಾಗಿರುತ್ತದೆ, ಶರಣರು ಕಾನೂನು ಜಿಜ್ಞಾಸುಗಳು ಆಗಿದ್ದರು, ಭೃಂಗಿಮಠ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಬಿಪ್ರಾಯ ಪಟ್ಟರು.
ವೇದಿಕಿಯ ಮೇಲೆ ನಮ್ಮ ಕನ್ನಡಿಗರ ವಿಜಯಸೇನೆ ಜಿಲ್ಲಾಧ್ಯಕ್ಷ ಭೀಮಾಶಂಕರ ಪತ್ತಾರ, ಕೈಲಾಸ ಗಾಲಾ, ಸಂಗಮೇಶ ಮನ್ನಿಕೆರಿ, ಸಿದ್ದು ಮಡಸನಾಳ, ಹೊನ್ನುಂಗುರ, ಚಂದ್ರಕಾಂತ ಹಿರೇಮಠ ಇತರರು ಇದ್ದರು.