ಪಿಂಜಾರ ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಆಗ್ರಹ
ಕೊಲ್ಹಾರ: ಜು.23:ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಪಿಂಚಾರ ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘ ತಾಲೂಕು ಘಟಕದಿಂದ ಮುಖ್ಯ ಮಂತ್ರಿಗಳಿಗೆ ತಹಶೀಲ್ದಾರ್ ಎಸ್.ಎಸ್ ನಾಯಕಲಮಠ ರವರ ಮೂಲಕ ಮನವಿ ಸಲ್ಲಿಸಿದರು.
ಪಿಂಚಾರ ನದಾಫ್ ಸಂಘದ ತಾ.ಅಧ್ಯಕ್ಷ ಇಸ್ಮಾಯಿಲಸಾಬ್ ನದಾಫ ಮನವಿ ಸಲ್ಲಿಸಿ ಮಾತನಾಡಿ ಕರ್ನಾಟಕ ರಾಜ್ಯಾದ್ಯಂತ ಸುಮಾರು 25 ಲಕ್ಷಗಳ ಜನಸಂಖ್ಯೆ ಹೊಂದಿರುವ ನದಾಫ್ ಪಿಂಜಾರ ಜನಾಂಗವು ಸಾಮಾಜಿಕ, ಶೈಕ್ಷಣಿಕ,ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದಿ ರುವುದರಿಂದ ಸರಕಾರವು ಸಮುದಾಯದ ಅಭಿವೃದ್ಧಿಗಾಗಿ ನದಾಫ್ ಪಿಂಜಾರ ಸೇರಿದಂತೆ ಇತರ 13 ಜಾತಿ ಸಮುದಾಯ ಗಳ ಅಭಿವೃದ್ದಿಗಾಗಿ ಪ್ರತ್ಯಕವಾದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು.
ಕೂಡ ಸಾಕಷ್ಟು ಅನುದಾನ ನೀಡದೆ ಇರುವುದರಿಂದ ನಮ್ಮ ಸಮುದಾಯಕ್ಕೆ ನಿಗಮದಿಂದ ಯಾವುದೆ ಸೌಲಭ್ಯಗಳು ದೊರೆಯುತ್ತಿಲ್ಲ ಅದರಿಂದ ಸರಕಾರವು ನದಾಫ್ ಪಿಂಜಾರ ಅಭಿವೃದ್ದಿ ನಿಗಮಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಬೇಕು, ವಿಶೇಷ ಪ್ಯಾಕೆಜ್ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೈಬುಸಾಬ್ ಉಪ್ಪಲದಿನಿ ರಫೀಕ್ ನದಾಫ್ ರಾಜೇಸಾಬ್ ನದಾಫ್ ಗೈಬುಸಾಬ್ ನದಾಫ್ ರಜಾಕ ನದಾಫ್ ಮಮತಾಜ ನದಾಫ್ ಸಹಿತ ಅನೇಕರು ಉಪಸ್ಥಿತರಿದ್ದರು