ಮಾದಕ ದ್ರವ್ಯಗಳ ಸೇವನೆ ತಡೆಗಟ್ಟಲು ಕೈಜೋಡಿಸಿ:ಶಿಕ್ಷಕ ಜಗದೀಶ ಸಾಲಳ್ಳಿ
ಕೊಲ್ಹಾರ:ಜು.23:ಧೂಮಪಾನ, ಮದ್ಯಪಾನ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳ ಸೇವನೆ ಚಟದಿಂದ ದೂರಸರಿದು ಆರೋಗ್ಯಕರ ಜೀವನ ನಡೆಸಬೇಕು ಎಂದು ಸಹಶಿಕ್ಷಕ ಜಗದೀಶ್ವರ ಸಾಲಳ್ಳಿ ಹೇಳಿದರು.
ಮಸೂತಿ ಗ್ರಾಮದ ಶ್ರೀ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಂಭ್ರಮ ಶನಿವಾರದ ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ ವಿಷಯದನ್ವಯ ಮಕ್ಕಳಿಗೆ ಕಿರುನಾಟಕ,ಗುಂಪು ಚಟುವಟಿಕೆ ಮಾರ್ಗದರ್ಶನ ನೀಡಿ ಮಾತನಾಡಿದರು.
ಮದ್ಯ ಸೇವನೆಯಿಂದ ವ್ಯಕ್ತಿಯ ಆರೋಗ್ಯದ ಜೊತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿ ಮೇಲೆ ಅಗಾಧವಾದ ಪರಿಣಾಮ ಬೀರಿ, ಕುಟುಂಬಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ ಇದನ್ನು ತಡೆಗಟ್ಟಲು ಸಮಾಜದಲ್ಲಿ ಮಕ್ಕಳು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮಾದಕ ದ್ರವ್ಯ ದುಷ್ಪರಿಣಾಮ ತಡೆಗಟ್ಟುವಿಕೆ ಕುರಿತು ಬಿತ್ತಿ ಪತ್ರ ಪ್ರದರ್ಶಿಸಿ,ಕಿರು ನಾಟಕಗಳ ಮೂಲಕ ದುಷ್ಪರಿಣಾಮ ಮನವರಿಕೆ ಮಾಡಿದರು.
ಶಿಕ್ಷಕ ಜಗದೀಶ ಸಾಲಳ್ಳಿ ಪ್ರತಿಜ್ಞೆ ಬೋಧಿಸಿ ಮಾದಕ ದ್ರವ್ಯ ಸೇವನೆ ಮಾಡುವುದಿಲ್ಲಾ,ಮಾದಕ ದ್ರವ್ಯ ಸೇವನೆ ಮಾಡುವವರನ್ನು ತಡೆಗಟ್ಟಿ ಚಟದಿಂದ ಹೊರಬರಲು ಸಹಾಯ ಮಾಡುತ್ತೇವೆ ಎಂದು ಮಕ್ಕಳಿಗೆ ಪ್ರತಿಜ್ಞೆ ಮಾಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಸಿ ಎ ಗೂಗಿಹಾಳ ಸಹಶಿಕ್ಷಕರಾದ ಎಸ ಎಸ್ ಗಂಗಲ್, ಪ್ರವೀಣ ಪಾಟೀಲ,ಎಚ್ ಎಸ್ ತಳವಾರ ಉಪಸ್ಥಿತರಿದ್ದರು.