ದತ್ತಪ್ಪ ಸಾಗನೂರ ವರ್ಗಾವಣೆಗೆ ಆಗ್ರಹ
ಕಲಬುರಗಿ:ಜು.23: ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ದತ್ತಪ್ಪ ಸಾಗನೂರ ಅವರನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕಾವಲು ಪಡೆ) ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದ್ದಾರೆ.
ಅವರು ಡಾ. ಎಸ್. ಎಮ್ ಪಂಡಿತ್ ರಂಗ ಮಂದಿರ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪ ಮಾಡಿರುವ ನಾಲವಾರಕರ್, ರಂಗ ಮಂದಿರದಲ್ಲಿ ಆಸನಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಮಳೆ ಬಂದರೆ ಛಾವಣಿಯಿಂದ ನೀರು ಸೋರುತ್ತದೆ. ಹವಾ ನಿಯಂತ್ರಣ ಕೆಟ್ಟು ಹೋಗಿವೆ. ನಗರದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ನಿಂತು ಹೋಗಿವೆ ಎಂದು ಅಪಾದಿಸಿದ್ದಾರೆ.
ಕೂಡಲೇ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರನ್ನು ವರ್ಗಾವಣೆ ಮಾಡಿ, ಆ ಹುದ್ದೆಗೆ ಪ್ರಾಮಾಣಿಕ, ದಕ್ಷ, ಅಭಿವೃದ್ಧಿ ಶೀಲ ಅಧಿಕಾರಿಯನ್ನು ನಿಯುಕ್ತಿ ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.