ಸಮಾಜೋಪಯೋಗಿ ಕಾರ್ಯದೊಂದಿಗೆ ಅನಿಷ್ಠ ಪದ್ದತಿ ಹೋಗಲಾಡಿಸಿ
ಭಾಲ್ಕಿ:ಜು.23:ರೋಟರಿ ಕ್ಲಬ್ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು,ಅದರ ಪದಾಧಿಕಾರಿಗಳು ಸಮಾಜೋಪಯೋಗಿ ಕಾರ್ಯ ಮಾಡುವುದರೊಂದಿಗೆ ಬಹು ದಿವಸಗಳಿಂದ ಬೇರೂರಿದ ಅನಿಷ್ಠ ಪದ್ದತಿ ಹೋಗಲಾಡಿಸಬೇಕು ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ( ಎಜಿ) ಸೂರ್ಯಕಾಂತ ರಾಮಶೆಟ್ಟಿ ಹೇಳಿದರು.
ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್‍ನವರು ಹಮ್ಮಿಕೊಂಡ 2024-25ನೇ ಸಾಲಿನ ನೂತನ ರೋಟರಿ ಪದಾಧಿಕಾರಿಗಳ ಪದಗೃಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮೌಢ್ಯತೆ ,ಕಂದಾಚಾರ ಅಳಿಸಿ ವೈಜ್ಞಾನಿಕ ಮನೋಭಾವನೆ ಬೆಳೆಸಿ,ಅನಕ್ಷರತೆ ಹೋಗಲಾಡಿಸಿ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕಾಗಿದೆ.ಆ ದಿಶೆಯಲ್ಲಿ ರೋಟರಿ ಕ್ಲಬ್‍ನವರು ವಿಶ್ವದಾದ್ಯಂತ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದಾರೆ. ಸಮಾಜದಲ್ಲಿನ ದುರ್ಬಲ,ಅಸಹಾಯಕ ವ್ಯಕ್ತಿಗಳಿಗೆ ಗುರುತಿಸಿ ನಿಸ್ವಾರ್ಥ ಭಾವನೆಯಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುವುದು ಹಾಗೂ ವಿಶ್ವದಲ್ಲಿ ಶಾಂತಿ ಕಾಪಾಡಿ ಸಕರಾತ್ಮಕ ವಾತಾವರಣ ಸೃಷ್ಠಿ ಮಾಡುವುದು ರೋಟರಿಯ ಮೂಲಧ್ಯೇಯವಾಗಿದೆ.ಭಾಲ್ಕಿ ರೋಟರಿ ಕ್ಲಬ್‍ನವರು ಈ ಹಿಂದೆ ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯಗಳ ಮೂಲಕ ರಾಜ್ಯ ,ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ನೃಪತುಂಗ ಝೋನ ಮಾಜಿ ಎಜಿ ಝಹೀರ ಅನ್ವರ ಮುಲ್ತಾನಿ ಮಾತನಾಡಿ,ಸಹಿಷ್ಣುತೆ,ತ್ಯಾಗ ಬೆಳೆಸಿಕೊಂಡಾಗ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿ ,ಅರ್ಥಪೂರ್ಣ ಶಹರಿ ಮೂಲಕ ಎಲ್ಲರನ್ನ ಮನರಂಜಿಸಿದರು.
ಸಹಾಯಕ ಕೃಷಿ ನಿರ್ದೇಶಕ ಪಿ.ಎಮ್.ಮಲ್ಲಿಕಾರ್ಜುನ ಮಾತನಾಡಿ,ಮುಂಗಾರು ಹಂಗಾಮಿನಲ್ಲಿ ಕಾಲ ಕಾಲಕ್ಕೆ ಬೆಳೆಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಮಳೆ ಬೀಳುತ್ತಿರುವುದರಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳೆದಿವೆ.ಕೃಷಿ ಇಳುವರಿ ಹೆಚ್ಚಿಸಬೇಕಾದರೆ ರೈತರಿಗೆ ಯಾವ ಮಣ್ಣಿನಲ್ಲಿ ಯಾವ ಬೆಳೆ,ಯಾವ ಕ್ರೀಮಿನಾಶಕ ಔಷಧ ಮತ್ತು ರಸಗೊಬ್ಬರ ಬಳಸುವಿಕೆ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಬಹು ಮಾರ್ಮಿಕವಾಗಿ ನುಡಿದರು.
ರೋಟರಿ ಮಾಜಿ ಎಜಿ ಡಾ.ಅಮೀತ ಅಷ್ಟೂರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇನಸ್ಟಾಲೇಷನ ಅಧಿಕಾರಿ ಡಾ.ವಸಂತ ಪವಾರ ಈ ಹಿಂದಿನ ರೋಟರಿ ಅಧ್ಯಕ್ಷ ಡಾ.ವಿಲಾಸ ಕನಸೆ,ಕಾರ್ಯದರ್ಶಿ ನ್ಯಾಯವಾದಿ ಸಾಗರ ನಾಯಕ,ಖಜಾಂಚಿ ಡಾ.ಶಶಿಕಾಂತ ಭೂರೆ ಅವರಿಂದ ನೂತನ ರೋಟರಿ ಅಧ್ಯಕ್ಷ
ರೋ.ಸಂಜೀಯಕುಮಾರ ಪಂಡರಗೆರೆ ,ಕಾರ್ಯದರ್ಶಿ ರೋ.ದತ್ತುಕುಮಾರ ಮೆಹಕ್ರೆ ಮತ್ತು ಖಜಾಂಚಿ ಡಾ.ಸಜ್ಜಲ ಬಳತೆ ಅವರಿಗೆ ಗೌಪ್ಯತೆ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.
ಕು.ಸ್ಪೂರ್ವ ಶಾಂತನು ,ಕು.ಅನ್ವಿತಾ ಸಾಗರ ಪ್ರಾರ್ಥನೆ ಗೀತೆ ನುಡಿದರೆ,ಕು.ಸನ್ನಿಧಿ ಅಷ್ಟೂರೆ ಮತ್ತು ಕು.ಸಾನವಿ ದೇವಪ್ಪ ವಚನ ಗಾಯನ ಮಾಡಿ ಎಲ್ಲರನ್ನು ಖುಷ್ ಮಾಡಿದರು.
ರೋಟರಿ ಸದಸ್ಯರಾದ ಡಾ.ಯುವರಾಜ ಜಾಧವ,ಅಶ್ವೀನ ಭೋಸ್ಲೆ,ಡಾ.ನಿತೀನ ಪಾಟೀಲ್,ಡಾ.ಶರದ ತುಕದೆ, ನ್ಯಾಯವಾದಿ ಬಸವಾ ಪಾಟೀಲ, ನ್ಯಾಯವಾದಿ ಸೌರಭ ನಾಯಕ,ರೋ. ಅಮರ ಜಲ್ದೆ,ಡಾ.ವಿಕ್ರಮ ದೇವಪ್ಪ,ನ್ಯಾಯವಾದಿ ಶಾಂತನು ಕುಲಕರ್ಣಿ,ರೋ.ಶಾಂತವೀರ ಸಿರ್ಗಾಪೂರೆ,ಡಾ.ಧನರಾಜ ಹುಲಸೂರೆ, ರೋ.ಪ್ರಭು ಕೋಟೆ,ನ್ಯಾಯವಾದಿ ಸಂಜಯ ನಾಯಕ,ಡಾ.ಶ್ರೀರಂಗ ಬಿರಾದಾರ,ರೋ.ಮಾನಸಿ ಯಶವಂತರಾವ ಪವಾರ,ಡಾ.ಗುಂಡೆರಾವ ಶೆಡೋಳೆ, ಡಾ.ಪ್ರಶಾಂತ ಬಿರಾದಾರ,ರೋ.ಅವಿನಾಶ ಮಾಳಗೆ ,ಮಾಂಜ್ರಾ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಎಮ್ಮೆ,ಕಾರ್ಯದರ್ಶಿ ಜಗದೀಶ ಖಂಡ್ರೆ ಹಾಗೂ ಪ್ರಮುಖರಾದ ಕಲ್ಲಪ್ಪ ಪಂಡರಗೆರೆ,ಶಿವುಕುಮಾರ ಯಲಾಲ್,ಸೋಮನಾಥ ಪಾಟೀಲ,ಗೋಧೆ,ಫರದಿನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
“ರೋಟರಿ ಸರ್ವ ಸದಸ್ಯರ ಸಹಕಾರ,ಪ್ರೋತ್ಸಾಹದಿಂದ ಕೈಲಾದಷ್ಟು ಮಟ್ಟಿಗೆ ನೂತನ ಕಾರ್ಯಯೋಜನೆ ಮೂಲಕ ಪೋಲಿಯೋ ನಿರ್ಮೂಲನೆ,ಸಾಕ್ಷರತೆ ಹೆಚ್ಚಳ,ಪರಿಸರ ಜಾಗೃತಿ ಮೂಡಿಸುವುದರೊಂದಿಗೆ ಉಚಿತ ನೇತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗುವುದು.”-ಸಂಜಯಕುಮಾರ ಪಂಡರಗೆರೆ ನೂತನ ಅಧ್ಯಕ್ಷ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್.