ಲಾರಿ ಪಲ್ಟಿ ತಪ್ಪಿದ ಭಾರಿ ಅನಾಹುತ
ಔರಾದ :ಜು.23: ತಾಲೂಕಿನ ಸಂತಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತಿರ ಬೀದರ್-ಔರಾದ್ ರಾಜ್ಯ ಹೆದ್ದಾರಿಯಲ್ಲಿ ರವಿವಾರ ನಡುರಾತ್ರಿಯಲ್ಲಿ ಬೃಹತ್‍ಕಾರದ ಲಾರಿಯ ಮುಂದಿನ ಟೈರ್ ಬ್ಲಾಸ್ಟ್ ಆಗಿ ನಡು ರಸ್ತೆ ಮೇಲೆ ಪಲ್ಟಿಯಾದ ಘಟನೆ ಜರುಗಿದೆ.
ಲಾರಿ ಗುಜರಾತನಿಂದ ಟೈಲ್ಸ್ ತುಂಬಿಕೊಂಡು ಹೈದ್ರಾಬಾದ್ ಕಡೆಗೆ ಹೋಗುತ್ತಿದ್ದೆಂದು ತಿಳಿದು ಬಂದಿದೆ. ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಸೋಮವಾರ ಮೂರು ಗಂಟೆಯ ಸುಮಾರಿಗೆ ಸಂತಪುರ ಪೆÇಲೀಸರು ಕ್ರೇನ್ ಮೂಲಕ ಲಾರಿಯನ್ನೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.