ಕಬ್ಬಿನ ಇಳುವರಿಗೆ ಎನ್‍ಎಸ್‍ಎಲ್ ಕಾರ್ಖಾನೆ ಪ್ರೋತ್ಸಾಹಿಸಲಿ: ಧಂಗಾಪೂರ
ಆಳಂದ:ಜು.23: ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ರೈತರಿಗೆ ಸೌಲಭ್ಯ ಒದಗಿಸುವ ಜೊತೆಗೆ ಕಬ್ಬಿನ ಅಧಿಕ ಇಳುವರಿ ಪಡೆಯುವಂತಾಗಲು ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಅವರು ಸಲಹೆ ನೀಡಿದರು.
ತಾಲೂಕಿನ ಭೂಸನೂರ ಬಳಿಯಿರುವ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಅವರು, ಆಡಳಿತ ಮಂಡಳಿ ಉಪಾಧ್ಯಕ್ಷ ಭಾಸ್ಕರ ನಾಯ್ಡು ಅವರೊಂದಿಗೆ ಚರ್ಚಿಸಿ ಕಾರ್ಖಾನೆಯೊಂದಿಗೆ ಕಬ್ಬು ಬೆಳೆಗಾರರಿಗೂ ಹಿತಕಾಯುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರ ಇಳುವರಿ ಹೆಚ್ಚಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ, ಕಬ್ಬಿನ ಸಸಿ ಮತ್ತು ಗೊಬ್ಬರ ವಿತರಿಸುವ ಕುರಿತಾದ ಕ್ರಮ ಯಾವ ಯಾವ ಹೊಸ ಕಬ್ಬಿನ ತಳಿ ನೀಡಲಾಗುತ್ತಿದೆ. ಒಟ್ಟಾರೆ ಕಬ್ಬು ಅಭಿವೃದ್ಧಿ ಯೋಜನೆ ಯಾವ ವರ್ಷದಿಂದ ಪ್ರಾರಂಭಸಲಾಗುತ್ತಿದೆ ಎಂದು ಧಂಗಾಪೂರ ಅವರು ಉಪಾಧ್ಯಕ್ಷರೊಂದಿಗೆ ಕೇಳಿದರು. ಕಬ್ಬಿನ ಈಗಿನ ಇಳುವರಿಗಿಂತಲೂ ಎಕರೆಗೆ ಕನಿಷ್ಟ 5 ಟನ್ ಹೆಚ್ಚಿನ ಇಳುವರಿ ಬರುವಂತೆ ರೈತರಿಗೆ ಕಾರ್ಖಾನೆಯಿಂದ ಸಲಹೆ ನೀಡಿ ಉತ್ತೇಜಿಸಬೇಕು ಎಂದರು.
ಪ್ರತಿವರ್ಷ ಕಬ್ಬು ಕಟಾವು ಸಮಯದಲ್ಲಿ ಕಬ್ಬು ಸಾಗಾಣಿಕೆ ಮಾಡುವವರಿಂದ ರೈತರು ಸಾಕಷ್ಟು ರೀತಿಯಲ್ಲಿ ಶೋಷಣೆ ಎದುರಿಸುತ್ತಿದ್ದಾರೆ. ಕಬ್ಬು ಕಟಾವಿಗೆ ಕುರಿ, ಕೋಳಿ ಹೆಂಡ ಕೇಳುತ್ತಿದ್ದಾರೆ. ಇದನ್ನು ತಡೆದರೆ ರೈತ ಎಕರೆಗೆ 5 ಟನ್ ಕಬ್ಬು ಹೆಚ್ಚು ಬೆಳೆದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಖಾನೆಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕಬ್ಬು ಬೆಳೆದವರ ಕಬ್ಬು ಖಾರ್ಖಾನೆಗೆ ಪಡೆದುಕೊಳ್ಳಲು ತಾಂತ್ರಿಕತೆಯ ಮೂಲಕ ಸರಣಿಯಂತೆ ನಿಯಮ ರೂಪಿಸಿಕೊಳ್ಳಬೇಕು. ಪ್ರತಿ ವರ್ಷ ಕಬ್ಬು ಬೆಳೆಗಾರರಿಗೆ ತರಬೇತಿ ಮತ್ತು ವಿಚಾರ ಘೋಷ್ಠಿ ಆಯೋಜಿಸಿ ತಜ್ಞರಿಂದ ತಿಳಿವಳಿಕೆ ನೀಡುವುದು ಅತ್ಯವಶವಾಗಿದೆ. ಇದಕ್ಕೆ ಕೃಷಿಕ ಸಮಾಜವೂ ಸಹ ಸಹಕರಿಸಲಿದೆ ಎಂದು ಹೇಳಿದರು.
ಕಾರ್ಖಾನೆ ಉಪಾಧ್ಯಕ್ಷ ಭಾಸ್ಕರ ನಾಯ್ಡು ಮಾಹಿತಿ ಒದಗಿಸಿ ಕಬ್ಬಿನ ಸಸಿಗಳನ್ನು ರೈತರಿಗೆ ಪೂರೈಕೆ ಮಾಡಲಾಗುತ್ತಿದೆ. ಗೊಬ್ಬರವು ಸಹ ನೀಡಲಾಗುತ್ತಿದೆ. ಅಲ್ಲದೆ, ಕಬ್ಬಿನ ತಳಿ 15012 ಮತ್ತು 8005, 1000, 86032 ಈ ತಳಿಗಳನ್ನು ನೀಡಲಾಗುತ್ತಿದೆ. ರೈತರಿಗೆ ನೀಡುವ ಸಾಲದ ಮೇಲೆ ಗೊಬ್ಬರ ನೀಡುವುದು, ಔಷೋದಪಚಾರ ಕಬ್ಬಿನ ರವದಿ ಬ್ಲಿಚಿಂಗ್ ಮಾಡುವುದು. ಸಬ್ಸಿಡಿ ಮೂಲಕ ಹನಿ ನೀರಾವರಿ ಅಳವಡಿಸುವುದು ಸೇರಿ ಹಲವು ಯೋಜನೆ ರೂಪಿಸಲಾಗಿದೆ ಎಂದಾಗ ಧಂಗಾಪೂರ ಅವರು ಇದು ಒಳ್ಳೆಯ ಯೋಜನೆಯಾಗಿದೆ, ರೈತರ ಮತ್ತು ಕಾರ್ಖಾನೆ ಹಿತದೃಷ್ಟಿಯಿಂದ ಉತ್ತಮ ಕಾರ್ಯವಾಗಿದೆ ಇದು ರೈತಪರ ಸ್ವಾಗರ್ತಾಹವಾಗಿದೆ, ಇದು ಇನ್ನಷ್ಟು ಕಾರ್ಯರೂಪಕ್ಕೆ ತರಬೇಕು ಎಂದು ಧಂಗಾಪೂರ ಹೇಳಿದರು.
ಈ ಸಂದರ್ಭಲ್ಲಿ ರೈತ ಮಲ್ಲಣ್ಣ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ಮಾಳಪ್ಪ ಅಂಬಿ, ಶಿವಾನಂದ ನಂದಗಾಂವ ಇತರರು ಇದ್ದರು.