ಅನುದಾನಕ್ಕೆ ಆಗ್ರಹಿಸಿ ಪ್ರತಿಭಟನೆ
ಲಕ್ಷ್ಮೇಶ್ವರ,ಜು.23: ಪಟ್ಟಣದಲ್ಲಿ ನಿನ್ನೆ ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ಕರೆಯ ಮೇರೆಗೆ ಲಕ್ಷ್ಮೇಶ್ವರ ತಾಲೂಕ ಪಿಂಜಾರ ನದಾಫ್ ಸಂಘದವರು ಅನುದಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೆಹಬೂಬ್ ಅಲಿ ಗಾಡ್ಗೋಳಿ ಅವರು ಈ ಸಮಾಜವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಸಮಾಜದ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಅದಕ್ಕೆ ಸೂಕ್ತ ಅನುದಾನ ನೀಡಿ ಸಮಾಜದ ಅಭಿವೃದ್ಧಿಗೆ ಸರ್ಕಾರ ತತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಐ ಎಂ ಹುಬ್ಬಳ್ಳಿ ತಾಲೂಕ ಘಟಕದ ಅಧ್ಯಕ್ಷ ರಂಜಾನ್ ಸಾಬ್ ನದಾಫ್ ಅಬ್ದುಲ್ ರಜಾಕ್ ಗಾಡ್ಗೋಳಿ ಶರೀಫ್ ನದಾಫ ಕಲಂದರ್ ನದಾಫ್ ಹುಸೇನ್ ಸಾಬ ನದಾಫಖಾಜರಬಿ ನದಾಫ್ ಅಲ್ಲಿ ಸಾಬ್ ನದಾಫ ನಜೀರ್ ಸಾಬ್ ನದಾಫ ಅಜರುದ್ದೀನ್ ಅತ್ತಿಗೆರೆ ದಾದಾ ಖಲಂದರ್ ಭಾಷಾ ನದಾಫ್ ಹಸನ್ ಸಾಬ್ ನದಾಫ ಕೌಸರ್ ಭಾನು ನದಾಫ ಸೇರಿದಂತೆ ಸಮಾಜದ ಮುಖಂಡರು ಹಿರಿಯರು ಪದಾಧಿಕಾರಿಗಳು ಭಾಗವಹಿಸಿದ್ದರು.