ಆರಂಭವಾಯಿತು ನೀರು ಹರಿಸುವ ಕಾರ್ಯಕಾಲುವೆ ನದಿಗೆ 11 ಸಾವಿರಕ್ಕೂ ಅಧಿಕ ಕ್ಯುಸೆಕ್ ಹೊರಹರಿವು.
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ -ಜು23: ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆ (ಎಚ್‌ಎಲ್‌ಸಿ) ಸೇರಿದಂತೆ ನದಿಗೆ ಕ್ರಸ್ ಗೇಟ್‍ಗಳ ಮೂಲಕ ಸೋಮವಾರ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓಆರ್ ಕೆ ರೆಡ್ಡಿ ನೀರು ಹರಿಬಿಟ್ಟರು.
ತುಂಗಭದ್ರಾ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಲುವೆಗೆ ನೀರು ಹರಿಬಿಡಲಾಯಿತು. ತುಂಗಭದ್ರಾ ಜಲಾಶಯದಲ್ಲಿ 90.940 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ 92636  ಕ್ಯುಸೆಕ್‌ ಒಳ ಹರಿವು ಇರುವ ಹಿನ್ನೆಲೆಯಲ್ಲಿ ಕಾಲುವೆಗೆ ಹಾಗೂ ಕ್ರಸ್ ಗೇಟ್‍ಗಳ ಮೂಲಕ 11657 ಕ್ಯುಸೆಕ್ ನೀರು ಬಿಡಲಾಗಿದೆ.
 ತುಂಗಭದ್ರ ಬಲದಂಡೆಯ ಕೆಳಮಟ್ಟದ ಕಾಲುವೆ ಮತ್ತು ಎಡದಂಡೆಯ ಮುಖ್ಯ ಕಾಲುವೆಗೆ ಈಗಾಗಲೇ ನೀರು ಬಿಡಲಾಗಿದೆ. ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಜಂಟಿ ಕಾಲುವೆ ಆಗಿದೆ.
ತುಂಗಭದ್ರ ಮಂಡಳಿಯ ಅಧೀಕ್ಷಕ ಎಂಜನಿಯರ್‌ ಶ್ರೀಕಾಂತ್‌ ರೆಡ್ಡಿ, ಕಾರ್ಯಕಾರಿ ಎಂಜನಿಯರ್‌ ರವಿಚಂದ್ರ, ಅಧಿಕಾರಿಗಳಾದ ಗೋಪಿ ಹಾಗೂ ಗಣೇಶ್ ಮತ್ತು ಕೃಷ್ಣಮೂರ್ತಿ ಮತ್ತು ರಾಘವೇಂದ್ರ, ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಶೋತ್ತಮ ಗೌಡ ಮತ್ತಿತರರಿದ್ದರು.
23ಎಚ್‌ಪಿಟಿ1- ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಕ್ರಸ್ ಗೇಟ್‍ಗಳ ಕ್ಯುಸೆಕ್‌ ನೀರು ಹರಿಬಿಟ್ಟರು.