ಆಟೋ ಚಾಲಕನ ಮಗ ಗುಪ್ತಲಿಂಗ ಸಿ.ಎ.ಉತ್ತೀರ್ಣರಾಗಿದ್ದಕ್ಕೆ ಸನ್ಮಾನ
ಬೀದರ: ಜು.23:ಬೀದರ ತಾಲೂಕಿನ ಅತಿವಾಳ ಗ್ರಾಮದ ಬಡ ಕುಟುಂಬದಿಂದ ಬಂದ ವೀರಯ್ಯ ಸ್ವಾಮಿಯವರು ತಮ್ಮ ಉಪಜೀವನಕ್ಕೆ ಆಟೋ ಚಾಲನೆ ಮಾಡಿ ಕಾಯಕವೇ ಕೈಲಾಸವೆಂದು ನಂಬಿದವರು. ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿಸಿರುವುದು ಹೆಮ್ಮೆಯ ಸಂಗತಿ ಎಂದು ಇವರ ಮೊದಲ ಮಗ ಗುಪ್ತಲಿಂಗ ಮೇ-24 ಸಿ.ಎ. ಉತ್ತೀರ್ಣರಾಗಿ ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಶ್ರೀಮತಿ ಲಲಿತಾ ಶೇರಿಕಾರ ರವರು ಬಸವೇಶ್ವರ ವೃತ್ತದ ಹತ್ತಿರ ಇರುವ ಉಳವಿ ಚನ್ನಬಸವ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಸನ್ಮಾನಿಸಿ ಮಾತನಾಡಿದರು.
ಸಾಹಿತಿಗಳಾದ ರಮೇಶ ಬಿರಾದಾರ ರವರು ಮಾತನಾಡುತ್ತಾ, ಪ್ರತಿಭೆಗಳು ಬಡತನದ ಕುಲುಮೆಯಲ್ಲಿ ಉರಿದುರಿದು ಅರಳುತ್ತಿವೆ ಎಂಬುವುದಕ್ಕೆ ಗುಪ್ತಲಿಂಗ ನಿದರ್ಶನ ಎಂದು ನುಡಿದರು. ಐ.ಎ.ಎಸ್. ಗಿಂತಲೂ ಕಠಿಣವಾದ ಅhಚಿಡಿಚಿಡಿಣeಡಿeಜ ಂಛಿಛಿouಟಿಣಚಿಟಿಣ ಪರೀಕ್ಷೆ ಗುಪ್ತಲಿಂಗ ಪಾಸಾಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು. ಗುಪ್ತಲಿಂಗ ತಾಯಿಯು ಗೃಹಿಣಿಯಾಗಿದ್ದಾರೆ. ವೀರಯ್ಯ ಸ್ವಾಮಿಯವರು ಉಳವಿ ಚನ್ನಬಸವ ಪತ್ತಿನ ಸಹಕಾರ ಬ್ಯಾಂಕಿನ ಸದಸ್ಯರಾಗಿದ್ದರಿಂದ ಅವರ ಮಗನಾದ ಗುಪ್ತಲಿಂಗ ಅವರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಪದ್ಮಜಾ ಪೆÇೀದ್ದಾರ್, ಅನೀತಾ ಪಾಟೀಲ್ ಮತ್ತು ನಾಗಶೆಟ್ಟಿ ಪಾಟೀಲ್ ಸಂಕನಾಳ, ವೀರಯ್ಯಾ ಸ್ವಾಮಿ ಹಾಗೂ ಪ್ರವೀಣ ಕುಲಕರ್ಣಿ ರವರು ಸದರಿ ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.