ರಾಮಾಂಜಿನೇಯ ನಗರದ ಅನಧಿಕೃತ ನಿವೇಶದಾರಿಗೆ 94 ಸಿಸಿ ನಗರ ಅಡಿಯಲ್ಲಿ ಪಟ್ಟಾ  ವಿತರಿಸಲು ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು,23- ನಗರದ ವಾರ್ಡ್ ನಂ 31 ರಾಮಾಂಜಿನೇಯ ನಗರದ ನಿವಾಸಿಗಳು ಜನಸ್ಪಂದನ ಐಪಿಜಿಆರ್ ಎಸ್  ಕುಂದು ಕೊರೆತೆ ಮೂಲಕ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಸಂಖ್ಯೆ 480 ಅನ್ವಯ ಅಕ್ರಮ ಸಕ್ರಮ 94 ಸಿಸಿ ನಗರ ಅಡಿಯಲ್ಲಿ ನಿವೇಶನ ಪಟ್ಟಾ ವಿತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಬಹುಜನ ಕಟ್ಟಡ ಕಾರ್ಮಿಕರ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದಾರೆ. ಹಲವು ಬಾರಿ  ಐಪಿಜಿಆರ್ ಎಸ್ ಮೂಲಕ ಕಚೇರಿಯಲ್ಲಿ ಖುದ್ದು ಹಾಜರಾಗಿ ಮನವಿಯನ್ನು ಸಲ್ಲಿಸಿರುತ್ತೇವೆ.  ತಾವುಗಳು ವಾರ್ಡ್ ನಂ 31 ರಾಮಾಂಜಿನೇಯ ನಗರ ಅನಧಿಕೃತ ನಿವೇಶನದಾರರಿಗೆ ಮಹಾನಗರ ಪಾಲಿಕೆಯಿಂದ ನೀಡಿದ ಸೂಚನಾ ಪತ್ರವನ್ನು ಹಿಂಬರಹವಾಗಿ ಸಲ್ಲಿಸುತ್ತಿದ್ದೀರಿ. ನಾವುಗಳು ಕಳೆದ 50 ವರ್ಷದಿಂದ ರಾಮಾಂಜಿನೇಯ ನಗರದಲ್ಲಿ ವಾಸವಾಗಿದ್ದು ಆಸ್ತಿ ತೆರಿಗೆ,ನೀರಿನ ಬಿಲ್,ವಿದ್ಯುತ್ ಬಿಲ್, ಒಳಚರಂಡಿ ಬಿಲ್ ಪಾವತಿ ಮಾಡುತ್ತಿದ್ದೇವೆ
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ರಾಠವು ಸಂಖ್ಯೆ 192 ರ ಹಾಗೂ 2005 ಸರ್ಕಾರದ ಆದೇಶದಲ್ಲಿ ವಿವರಿಸಿದಂತೆ ನಿಗದಿಪಡಿಸಿದ 90 20� ಹೆಚ್ಚಿಸಿದ ಶುಲ್ಕವನ್ನು ಪಾವತಿಸಲು ರಾಮಾಂಜಿನೇಯ ನಗರದ ಎಸ್ ಎಂ ಪಿ ಎಸ್ ವಿ ಎಚ್ ಶಾಲೆಯ ಹಿಂಬಾಗದಿಂದ ಸಣ್ಣ ದುರುಗಮ್ಮ ಗುಡಿಯವರೆಗಿನ ಕೂಲಿ ಕಾರ್ಮಿಕರಿಗೆ ಸಾಧ್ಯವಾಗವು ದಿಲ್ಲ ಕಾರಣ ಇವರಿಗೆ ದಿನಕ್ಕೆ 600 ರೂಪಾಯಿ ಕೂಲಿ ಇದ್ದು ವಾರಕ್ಕೆ 6 ದಿನ ಕೆಲಸ ಮಾಡಿದರೆ 3600 ಬರುವುದು ಇದರಲ್ಲಿ ವಾರದ ಮನೆ ರೇಷನ್ ಗೆ 2000₹ ತರಕಾರಿ ಹಾಗೂ ದಿನ ಬಳಿಕೆ ಖರ್ಚು ತೆಗೆದರೆ ಉಳಿತಾಯ ಮಾಡಲು ಸಾಧ್ಯವಿಲ್ಲ ತಿಂಗಳ ಪೂರ್ತಿ ಕೆಲಸ ಇರುವುದಿಲ್ಲ ಆದ್ದರಿಂದ ಕೂಲಿಕಾರ್ಮಿಕ ಜೀವನ ಬಗ್ಗೆ ಸ್ವಲ್ಪ ಆಲೋಚಿಸಿ ತಾವುಗಳು 2005 ಅಂದರೆ 19 ವರ್ಷಗಳ ಹಿಂದೆ ಸರ್ಕಾರದ ನೀಡಿದ ಸರ್ಕಾರದ ಆದೇಶವನ್ನು ಕೈ ಬಿಟ್ಟು ಬಡವರಿಗೆ ಸ್ವಂತ ನಿವೇಶನ ಕಲ್ಪಿಸುವ ಕಾರ್ಯ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಇದರ ಮೇಲೆ ಜವಾಬ್ದಾರಿ ಇರುತ್ತದೆ ಆದ್ದರಿಂದ  ತಾವುಗಳು ದಿನಾಂಕ :28:02:2017 ಅಂದರೆ 7 ವರ್ಷಗಳ ಹಿಂದೆ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನ ಸಂಖ್ಯೆ 480 ನಿಜಪತ್ರದ ವಿವರಗಳ ಕುರಿತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವಾರ್ಡ್ ನಂ 31 ರಾಮಾಂ ಜಿನೇಯ ನಗರ ವ್ಯಾಪ್ತಿಯೊಳಗಿನ ಅನಧಿಕೃತ ನಿವೇಶನದಾ ರಿಗೆ 2021/22 ನೇ ಸಾ ಲಿನ ಅಕ್ರಮ-ಸಕ್ರಮ 94 ಸಿಸಿ ನಗರ ಅಡಿಯಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಪಟ್ಟಾ ಕೊಡಿಸುವ ಪ್ರಯತ್ನ ಮಾಡಬೇಕೆಂದು ಅಥವಾ ವಾರ್ಡ್ ನಂ 31 ರಾಮಾಂಜಿನೇಯ ನಗರದ  ಪ್ರದೇಶವನ್ನು ಕೊಳಗೇರ ಪ್ರದೇಶವನಾಗಿ ಘೋಷಿಸಿ  ಹಕ್ಕು ಪತ್ರ ವಿತರಿಸಬೇಕೆಂದು  ಕಳಕಳಿಯಿಂದ ಮನವಿಯನ್ನು ಮಾಡಿಕೊಂಡಿದ್ದಾರೆ.