ನಿಜಸುಖಿ ಹಡಪದ ಅಪ್ಪಣ್ಣನವರು ಶರಣ ಚಳವಳಿ ಕೊಡುಗೆ: ಸುಬೇದಾರ
ಆಳಂದ:ಜು.23: ನಿಜಸುಖಿ ಹಡಪದ ಅಪ್ಪಣ್ಣನವರು ಬಸವಾದಿ ಶರಣರ ಸಾಮಾಜಿಕ ಚಳವಳಿಯ ಕ್ರಾಂತಿಗೆ ತಮ್ಮನ್ನೇ ಯಾವು ಕೈಜೋಡಿಸಿ ಸಮರ್ಪಿಸಿಕೊಂಡಿದ್ದ ಇಂಥ ಮಹಾನ್ ಶರಣರ ತತ್ವಾದರ್ಶಗಳು ಪ್ರತಿಯೊಬ್ಬರು ಮೈಗೂಡಿಸಬೇಕು ಎಂದು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧನಲ್ಲಿ ತಾಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದ ಅಂಗವಾಗಿ ನಡೆದ ಅವರ ಭಾವಚಿತ್ರದ ಪೂಜೆ ನೆರವೇರಿಸಿ ಮಾತನಾಡಿದರು.
ಮೌಢ್ಯತೆಯನ್ನು ದಿಕ್ಕರಿಸಿ ಬಸವಣ್ಣಪ್ಪನವರೇ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು, ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಆಪ್ತಕಾರ್ಯದರ್ಶಿ ಮಾತ್ರವಲ್ಲ, ತಮ್ಮ ಜೀವದ ಒಡನಾಡಿಯಾಗಿದ್ದರು, ಪ್ರತಿ ಕ್ಷಣದಲ್ಲೂ ಬಸವಣ್ಣನವರಿಗೆ ಪ್ರತಿಯೊಂದು ಮಾಹಿತಿಯನ್ನೂ ಮೊದಲು ತಿಳಿಸುತ್ತಿದ್ದರು, ಕಲ್ಯಾಣಕ್ಕೆ ಬರುವ ಶರಣ ಸಮೋಹಕ್ಕೆ ತಾಂಬೂಲ ಕೊಟ್ಟು ಸ್ವಾಗತಿಸುತ್ತಿದ್ದರು, ಕ್ಷಣವಾದರೂ ಬಸವಣ್ಣನವರನ್ನು ಬಿಟ್ಟಿರಲಾರದ ಜೀವ ಅಪ್ಪಣ್ಣನವರದ್ದು, ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲೂ ಇದು ಸಾಬೀತಾಗಿದೆ. ಬಸವ ಲಿಂಗೈಕ್ಯದ ನಂತರ ನೀಲಾಂಬಿಕೆಯವರು ತಂಗಡಗಿಯಲ್ಲಿ ಲಿಂಗೈಕ್ಯರಾದರು, ಮುಂದೆ ಹಡಪದ ಅಪ್ಪಣ್ಣನವರು ಕೂಡ ತಂಗಡಗಿಯಲ್ಲಿ ಲಿಂಗೈಕ್ಯರಾಗುವ ಅವರ ಜೀವನ ಮತ್ತು ಕೊಡುಗೆ ಅಪಾರವಿದೆ. ಅವರು ನೀಡಿದ ವಚನಗಳನ್ನು ಅನುಸರಿಸಬೇಕು, ಸರ್ಕಾರಿ ಸೌಲಭ್ಯ ಪಡೆದು ಸಮಾಜ ಬಾಂಧವರು ಅವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಹಡಪದ ಸಮಾಜ ಮುಖಂಡ ಮಳಸಿದ್ಧಪ್ಪ ನಾವಿ ಮಾತನಾಡಿ, ಹಡಪದ ಅಪ್ಪಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದು ಸಮಾಜ ಬಾಂಧವರು ಸರ್ವರಂಗದಲೂ ಅಭಿವೃದ್ಧಿ ಸಾಧಿಸಬೇಕು. ಇದಕ್ಕಾಗಿ ಜಾಗೃತರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಹಡಪದ ಸಮಾಜ ಅಧ್ಯಕ್ಷ ಶಂಕರ ಹಡಪದ, ಪ್ರಕಾಶ ಹಡಪದ, ಷಣ್ಮೂಖಪ್ಪ ಹಡಪದ, ರುದ್ರಪ್ಪ ಹಡಪದ, ಆಕಾಶ ಸಜ್ಜನ್ ಮತ್ತಿರರು ಉಪಸ್ಥಿತರಿದ್ದರು.