ಉಚಿತ ಆರೋಗ್ಯ ಶಿಬಿರ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ:ಸಿದ್ದಲಿಂಗ ಶ್ರೀ
ಯಡ್ರಾಮಿ:ಜು.23:ಪಟ್ಟಣದಲ್ಲಿ ಬುಧವಾರ ಉಚಿತ ಆರೋಗ್ಯ ಶಿಬಿರ ಹಾಗೂ ನೂತನ ಕಟ್ಟಡ ಉದ್ಧಾಟನಾ ಸಮಾರಂಭ ಮಾಡಲಾಗುವುದು ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಸೋಮವಾರ ಪತ್ರಿಕೆಗೋಷ್ಟು ಮೂಲಕ ಮಾತನಾಡಿ ಬುಧವಾರ ಪರಮಪೂಜ್ಯ ಲಿಂ ಸಿದ್ದರಾಮ ಮಹಾಸ್ವಾಮಿಗಳವರ ತೃತೀಯ ಪುಣ್ಯಾರಾಧನೆ ನಿಮಿತ್ಯವಾಗಿ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆ ಮತ್ತು ಕಣ್ಣಿನ ಪೆÇರೆ ಶಸ್ತ್ರ ಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣ ಮಾಡಿರು ಶಾಲಾ ಕಟ್ಟಡ ಉದ್ಧಾಟನೆ ಕೂಡ ಮಾಡಲಾಗುವುದು ಈ ಕಾರ್ಯಕ್ರಮದಲ್ಲಿ ನಮ್ಮ ಭಾಗದ ಶಾಸಕರಾದ ಡಾ.ಅಜಯಸಿಂಗ್ ಹಾಗೂ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ಹಾಗೂ ನಾಡಿನ ಪ್ರಮುಖರು ಭಾಗವಹಿಸುವರು.
ಪರಮಪೂಜ್ಯ ಲಿಂ ಸಿದ್ದರಾಮ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ನಾಡಿನ ಸಕಲ ಭಕ್ತಾಧಿಗಳು ಬಂದು ಪುನೀತರಾಗಬೇಕು ಹಾಗೂ ಉಚಿತ ಆರೋಗ್ಯ ತಪಾಸಣೆ ಜೋತೆಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.