ಅನುದಾನ ನೀಡಲು ಮನವಿ
ಹುಬ್ಬಳ್ಳಿ,ಜು.23: ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘ (ರಿ) ಹುಬ್ಬಳ್ಳಿ ತಾಲೂಕಾ ಶಹರ ಹಾಗೂ ಗ್ರಾಮೀಣ ಘಟಕದ ವತಿಯಿಂದ, ನೂತನವಾಗಿ ಘೂಷೀರುವ, ಪಿಂಜಾರ ನದಾಫ್ ನಿಗಮಕ್ಕೆ ಅನುದಾನ ನೀಡುವ ಕುರಿತು ಮುಖ್ಯಮಂತ್ರಿಗಳಿಗೆ ಹುಬ್ಬಳ್ಳಿ ತಾಲೂಕಾ ತಹಸಿಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹುಧಾಮಪಾ ಮಾಜಿ ಸದಸ್ಯರಾದ ಹಜರತ್ ಅಲಿ ಎಮ್ ದೂಡ್ಡಮನಿ, ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷರಾದ ಎಮ್ ಎಚ್ ಬೆಂಡಿಗೇರಿ ರಾಜ್ಯ ಸಮಿತಿ ಸದಸ್ಯರಾದ ರಫೀಕ್ ಅಹ್ಮದ್ ದೂಡ್ಡಮನಿ ಹಾಗೂ ಎಚ್ ಎಲ್ ನದಾಫ್ ದಾವಲಸಾಬ ನದಾಫ್ ಹುಬ್ಬಳ್ಳಿ ತಾಲೂಕಾ ಶಹರ ಘಟಕದ ಅಧ್ಯಕ್ಷರಾದ ಖುದಾನಸಾಬಗೂಗಲ್ ಉಪಾಧ್ಯಕ್ಷರಾದ ಎಮ್ ಎ ನದಾಫ್ ದಿವಾನ್ ಸಾಬ್ ನದಾಫ್ ಕಾರ್ಯದರ್ಶಿ ಅಬ್ದುಲ್ ನಬಿ ನದಾಫ್ ಹುಬ್ಬಳ್ಳಿ ತಾಲೂಕಾ ಗ್ರಾಮೀಣ ಘಟಕದ ಉಪಾಧ್ಯಕ್ಷರಾದ ಹಜರತ್ ಅಲಿ ಎಮ್ ನದಾಫ್ ಕಾರ್ಯದರ್ಶಿ ರಿಯಾಜ್ ಅಹ್ಮದ್ ದೂಡ್ಡಮನಿ ಸಹ ಕಾರ್ಯದರ್ಶಿಗಳಾದ ಖಾದರ್ ಬಾಷಾ ಶಿಬಾರಗಟ್ಟಿ ಮೆಹಬೂಬ್ ಸಾಬ್ ನದಾಫ್ ಮೌಲಾಸಾಬ್ ನದಾಫ್ ಬಾಲೆ ಸಾಬ್ ಪಿಂಜಾರ್, ಮಹಮ್ಮದ್ ಹನಿಪ್ ಕರ್ಜಗಿ ಹುಸೇನ್ ಸಾಬ್ ಬೆಟಗೇರಿ ಪಟೆಲಸಾಬ ನದಾಫ್ ಶಹಾಬುದ್ದೀನ್ ದಾಸನೂರ ನಜೀರ್ ಅಹಮದ್ ನದಾಫ್ ಮೌಲಾ ಸಾಬ್ ನದಾಫ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.