ಅಂಬೇಡ್ಕರ್ ತತ್ವಸಿದ್ಧಾಂತ ಮೈಗೂಡಿಸಿಕೊಳ್ಳಿ: ಶರಣಬಸವ ಶ್ರೀ
ಮಾಲೂರು.ಜು.೨೩- ವಿರೋಧಿಗಳು ಹಣ ಆಸ್ತಿಗೆ ಎದುರುವುದಿಲ್ಲ ಜ್ಞಾನಕ್ಕೆ ಮಾತ್ರ ಹೆದರ ಬಲ್ಲರು ಎಂದು ಮಹಾನ್ ಮಾನವತಾವಾದಿ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಹೇಳಿದ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ಚಿರಮೂರ್ತಿ ಚರಂತೇಶ್ವರ ವಿರಕ್ತಮಠ ಪರಮ ಪೂಜ್ಯ ಶ್ರೀ ಶರಣಬಸವ ಸ್ವಾಮಿಗಳು ಹೇಳಿದರು .
ತಾಲೂಕಿನ ರಾಜೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಅಧಿಕಾರಹಟ್ಟಿ ಗ್ರಾಮದ ಬೈರಪ್ಪ ಕುಟುಂಬದವರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಯಾವ ದೇಶದಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚು ಇರುತ್ತದೆಯೋ ಅಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿರುತ್ತಾರೆ ಹಾಗೆಯೇ ಯಾವ ದೇಶದಲ್ಲಿ ಗ್ರಾಂಥಾಲಯಗಳ ಸಂಖ್ಯೆ ಹೆಚ್ಚಾಗಿ ಇರುತ್ತದೆಯೋ ಅಲ್ಲಿ ಜ್ಞಾನಿಗಳ ಸಂಖ್ಯೆ ಹೆಚ್ಚಾಗಿ ಇರುತ್ತಾರೆ ಎಂದು ಬಾಬಾ ಸಾಹೇಬರು ಹೇಳಿದ್ದಾರೆ ಅಂತಹ ಮಹಾನ್ ವ್ಯಕ್ತಿಗಳ ಭಾವಚಿತ್ರಕ್ಕೆ ಕೇವಲ ಹೂ ಮಾಲೆ ಹಾಕುವುದಲ್ಲ ಅವರ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡು ಸಂವಿಧಾನ ಉಳಿವಿಗಾಗಿ ನಾವು ಮುಂದಾಗಬೇಕು ಸಂವಿಧಾನ ನಮಗೆ ಬದುಕು ಭವಿಷ್ಯ ಕೊಟ್ಟಿದೆ ಎಂದರು.
ದೇಶದ ಇತಿಹಾಸನದಲ್ಲಿ ರಾಜನ ಹೊಟ್ಟೆಯಲ್ಲಿ ರಾಜನು ಹುಟ್ಟುತ್ತಿದ್ದ ಮತ್ತೆ ಅವನ ಹೊಟೆಯಲ್ಲಿ ಮರಿ ರಾಜನು ಹುಟ್ಟುತ್ತಿದ್ದ ಅದರೆ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಾಯಕನಾಗುವ ವ್ಯಕ್ತಿ ಮನೆಮನೆಗೂ ತೆರಳಿ ಸಾಮಾನ್ಯ ಬಡವನಿಗೂ ಎರಡು ಕೈ ಮುಗಿದು ನಿಮ್ಮ ಕೈಯಲ್ಲಿ ನನ್ನ ಭವಿಷ್ಯ ಇದೆ ಎಂದು ಕೇಳಿ ಜನರ ಆಯ್ಕೆ ಮೂಲಕ ನಾಯಕನು ಹುಟ್ಟುತ್ತಿದ್ದಾನೆ ಎಂದರೆ ಅ ಕೀರ್ತಿ ಅಂಬೇಡ್ಕರ್ ರವರಿಗೆ ಸಲ್ಲಬೇಕಾದ ಗೌರವ ಎಂದರು.
ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಮಾಡಿ ಮಾತನಾಡಿದ ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ
ಸಮಾಜದಲ್ಲಿ ಎಲ್ಲಾ ಜಾತಿ ಧರ್ಮಗಳು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಮುಂದೆ ಬರಬೇಕೆಂದರೆ ಭಾರತ ಸಂವಿಧಾನ ಒಂದು ಶಕ್ತಿ ಎಂದು
ಅಂತಹ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಮುಂದಾಗಿದ್ದು ಜನರು ಸಂವಿಧಾನ ಉಳಿವಿಗಾಗಿ ಕೈಜೋಡಿಸಿ ಬೆಂಬಲ ನೀಡುತ್ತಿದ್ದಾರೆ ಎಂಬುವುದಕ್ಕೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಚುನಾವಣೆಯ ಫಲಿತಾಂಶವೆ ಸಾಕ್ಷಿ ಎಂದರು.
.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ ವೈ ನಂಜೇಗೌಡ ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲಾ ಜಾತಿ ಧರ್ಮಗಳು ಸಮಾನತೆಗಾಗಿ ಡಾ.ಬಿಆರ್ ಅಂಬೇಡ್ಕರ್ ನೀಡಿದ ಭಾರತ ಸಂವಿಧಾನದ ಬಗ್ಗೆ ಇಷ್ಟು ವರ್ಷಗಳಾದರೂ ತಿಳಿದು ಕೊಂಡಿಲ್ಲ ಎಂದರೆ ಅವರು ಮನುಷ್ಯರೆ ಅಲ್ಲ ಎಂದು ಬಾಬಾ ಸಾಹೇಬ್ ರವರು ನೀಡಿದ ಸಂವಿಧಾನದ ನೆರಳಲ್ಲಿ ನಾವು ನೆಮ್ಮದಿ ಜೀವನ ಸಾಗಿಸುತ್ತಿದ್ದು ಇಂದು ಅಂಬೇಡ್ಕರ್ ಇಲ್ಲದಿದ್ದರೂ ಅವರು ನೀಡಿರುವ ಸಂವಿಧಾನ ಭಾವ ಚಿತ್ರ ಎಲ್ಲಾ ಜಾತಿ ಧರ್ಮಗಳ ಮನೆಯಲ್ಲೂ ದೇವರ ಫೋಟೋ ಜೊತೆ ಜೊತೆಗೆ ಇಟ್ಟು ಪ್ರತಿ ದಿನ ಪೂಜಿಸುವ ಮೂಲಕ ಪ್ರತಿ ಯಾರೊಬ್ಬರ ಮನಸಲ್ಲಿ ಅಂಬೇಡ್ಕರ್ ರವರು ಜೀವಂತವಾಗಿ ಪ್ರತಿ ಯೊಬ್ಬ ಭಾರತೀಯರಲ್ಲಿ ಉಳಿದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ರಾಹು ಜಾರಕಿಹೊಳಿ, ಆಪ್ತ ಕಾರ್ಯದರ್ಶಿ ಅನಂತ್ ನಾಯಕ್,ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ನರಸಿಂಹ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂದನ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಯಿಂಉಲ್ಲ,ಖಾನ್ ಸದಸ್ಯ ನಲ್ಲಂಡಹಳ್ಳಿ ನಾಗರಾಜ್, ಸತೀಶ್, ದರಖಾಸ್ತು ಸಮಿತಿ ಅಧ್ಯಕ್ಷ ಅನೇಪುರ ಹನುಮಂತಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎನ್ ವೆಂಕಟರಾಮ್,ರಾಜೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ, ಕೆಜಿ ಹಳ್ಳಿ ಗ್ರಾಂ.ಪಂ.ಮಾಜಿ ಅಧ್ಯಕ್ಷ ಸತೀಶ್ ರಾಜಣ್ಣ, ವಕೀಲ ನಾರಾಯಣಸ್ವಾಮಿ ಹಾಜರಿದ್ದರು