ನಿವೃತ ಸೈನಿಕರು ಸಂಘಟಿತರಾಗಬೇಕು: ಪುರಾಣಿಕಮಠ
ಗುಳೇದಗುಡ್ಡ: ನಿವೃತ್ತಿ ಹೊಂದಿದ ಸೈನಿಕರು ಸಂಘದಲ್ಲಿ ಸದಸ್ಯತ್ವ ಹೊಂದುವ ಮೂಲಕ ಸಂಘದ ಬೆಳವಣಿಗೆಗೆ ಕೈ ಜೋಡಿಸಬೇಕು. ನಿವೃತ್ತ ಸೈನಿಕರ ಸಮಸ್ಯೆ ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಂಘಕ್ಕೆ ಸಂಪರ್ಕಿಸಬೇಕು. ಸಂಘವು ನಿವೃತ್ತ ಸೈನಿಕರಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲೂಕು ಘಟಕದ ಕಾಯಾಧ್ಯಕ್ಷ ಸಿದ್ರಾಮಯ್ಯ ಪುರಾಣಿಕಮಠ ಹೇಳಿದರು.
ಅವರು ರವಿವಾರ ಸಮೀಪದ ಕೋಟೆಕಲ್ಲ ಗ್ರಾಮದ ಶ್ರೀ ಹೊಳೆಹುಚ್ಚೇಶ್ವರ ಮಠದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗುಳೇದಗುಡ್ಡ ತಾಲೂಕು ಘಟಕದ ಒಂದನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘವು ಈಗ ಎಪ್ಪತೈದು ಸದಸ್ಯರನ್ನು ಹೊಂದಿದ್ದು, ಇನ್ನೂ ಹೆಚ್ಚು ನಿವೃತ್ತ ಸೈನಿಕರು ಸಂಘದ ಸದಸ್ಯತ್ವ ಹೊಂದಬೇಕು. ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಸಂಘದ ಗೌರವಾಧ್ಯಕ್ಷ ಶಂಕ್ರಯ್ಯ ವಿಭೂತಿ ಮಾತನಾಡಿ, ಪಟ್ಟಣದಲ್ಲಿ ನಿವೃತ್ತ ಸೈನಿಕರ ಭವನ ನಿರ್ಮಿಸಲು ಯೋಜನೆ ಮಾಡುತ್ತಿದೆ. ನಿವೃತ್ತಗೊಂಡ ಸೈನಿಕರನ್ನು ಅದ್ದೂರಿಯಿಂದ ತವರಿಗೆ ಸ್ವಾಗತಿಸುವ ಕಾರ್ಯವನ್ನು ಸಂಘ ಮಾಡುತ್ತಿದ್ದು, ಎಲ್ಲ ಸದಸ್ಯರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆ ನೀಡಬೇಕು ಎಂದರು.
ಸಂಘದ ಅಧ್ಯಕ್ಷ ಸುಭಾಷ ಕೋಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಮೀರ ಮೌಲ್ವಿ, ಪ್ರಧಾನಕಾರ್ಯದರ್ಶಿ ಶಿವನಗೌಡ ಪರ್ವತಗೌಡ, ಪ್ರಕಾಶ ಗೌಡರ, ಸುಭಾಷ ಬಡಿಗೇರ, ಈಶ್ವರಪ್ಪ ದಾಸರ, ಷಣ್ಮುಖಪ್ಪ ಹಳೆಹೊಳೆ, ಶರಣಬಸಪ್ಪ ಅಳ್ಳಗಿ, ಜಗನ್ನಾಥ ಬಡಿಗೇರ, ಹರೀಶ ಅಳ್ಳಗಿ, ಅಶೋಕ ತಿಮ್ಮಣ್ಣವರ, ರಾಘವೇಂದ್ರ ನಾಗರಶೆಟ್ಟಿ, ಪಡಿಯಪ್ಪ ಮನ್ನಿಕಟ್ಟಿ, ಪುಂಡಲೀಕ ಮೂಲಿಮನಿ, ಅಂಬರೀಷ ಕಾಮಾ, ಮಾಗುಂಡಪ್ಪ ತಂಗಳದ, ರಂಗಪ್ಪ ಹಂಗರಗಿ ಅಶೋಕ ಕಡಪಟ್ಟಿ, ಪರಸಪ್ಪ ಉಪ್ಪಾರ, ಎಸ್.ಎಲ್. ಸಾಳಗುಂದಿ, ಐಬಿ. ಗೌಡರ, ರಂಗಪ್ಪ ಹಡಪದ, ಪಿ.ಬಿ. ಗೌಡರ, ಪರಶುರಾಮ ಜಾಧವ, ವೀರನಾರಿಯರಾದ ವಾಣಿಶ್ರೀ ಬಡಿಗೇರ, ಹನಮವ್ವ ಗೌಡ್ರ, ಯಲ್ಲವ್ವ ಗಾಣಿಗೇರ, ಶಿವಲೀಲಾ ಹಿರೇಮಠ, ಶಾರದಾ ಸಾಳಗುಂದಿ ಮತ್ತಿತರರು ಇದ್ದರು.
22ಜಿಎಲ್‍ಡಿ -1ಫೋಟೋ: ಗುಳೇದಗುಡ್ಡದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂರ್ಘದ ವಾರ್ಷಿಕ ಸಭೆ ನಡೆಯಿತು.