ಪ್ರತಿಭಾ ಪುರಸ್ಕಾರ
ಬೈಲಹೊಂಗಲ,ಜು.23: ಹಾಲುಮತ ಸಮಾಜದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪೆÇ್ರೀತ್ಸಾಹಿಸುತ್ತಿರುವ ಪ. ಪೂ. ಯಲ್ಲಪ್ಪಜ್ಜ ದಳವಾಯಿ ಫೌಂಡೇಶನ್ ಕಾರ್ಯ ಶ್ಲಾಘನೀಯ ವೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಶ್ರೀ ಶಿವಬಸವ ಕಾಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ(ರಿ) ಬೆಂಗಳೂರು, ಹಾಗೂ ಪ.ಪೂ. ಶ್ರೀ ಯಲ್ಲಪ್ಪಜ್ಜ ದಳವಾಯಿ ಪೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕಶ್ರೀ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ದೇಶಕ್ಕೆ ಆದ್ಯಾತ್ಮಿಕ ,ಸಾಂಸ್ಕೃತಿಕ ,ರಾಜಕೀಯ, ಹಾಗೂ ಸಾಮಾಜಿಕವಾಗಿ ಅನೇಕ ರೀತಿಯ ಕೊಡುಗೆ ನೀಡಿದ ಗೌರವ ಹಾಲುಮತಕ್ಕೆ ಸಲ್ಲುತ್ತದೆ.
ಅದೇ ರೀತಿ ಪರಮ ಪೂಜ್ಯ ಶ್ರೀ ಯಲ್ಲಪ್ಪಜ್ಜ ದಳವಾಯಿಯವರು ಅಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಅಂಧಕಾರ ಅಳೆದು ಜ್ಞಾನದ ಬೆಳಕಿನೆಡೆಗೆ ಸಮಾಜವನ್ನು ಕರೆದೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಪೌಂಡೇಶನ್ ಮೂಲಕ ಈ ದಿನ ಅನೇಕ ಕ್ಷೇತ್ರದಲ್ಲಿ ಸೇವೆ ಸಲ್ಲಿರುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಕೆಲಸಗಳಿಗೆ ಇನ್ನಸ್ಟು ಹುರುಪು ತುಂಬಿ ಪೆÇ್ರೀತ್ಸಾಹಿಸುತ್ತಿರುವದು ಶ್ಲ್ಯಾಘನೀಯ ಎಂದರು.
ಹಾಲುಮತದ ಏಳಿಗೆಗಾಗಿಯೇ ನಮ್ಮ ಸರಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಡಾ| ಶ್ರೀ ಸಿದ್ದೇಶ್ವರ ದೇವರು ಯಲ್ಲಪಜ್ಜನವರು ಇಲ್ಲಿಯ ವರೆಗೆ ತಮ್ಮ 77 ವರ್ಷದ ಸ್ವಾರ್ಥಕ ಜೀವನವನ್ನು ಸತ್ಸಂಗದಲ್ಲಿ ಕಳೆದಿದ್ದಾರೆ ಎಂದರು.
ಸೋಮೇಶ್ವರ ಸ. ಸ. ಕಾ. ನಿ. ವ್ಯವಸ್ಥಾಪಕ ನಿರ್ದೇಶಕ ಬೀರೇಂದ್ರ ಮಾತನಾಡಿದರು. ಪತಂಜಲಿ ಯೋಗ ಪೀಠ ಹರಿದ್ವಾರ ಶಾಖೆ ಗೋಕಾಕ ನ ಪೂಜ್ಯ ಬ್ರಹ್ಮಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಯಲ್ಲಪ್ಪಜ್ಜ ದಳವಾಯಿ ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪ ನೊಂದನಾಧಿಕಾರಿ. ವಿದ್ಯಾ ಹಂಡಿಬಾಗ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷ. ಶಂಕರ ಮಾಡಲಗಿ, ಬಸವರಾಜ ಬಿಲ್ಲಶಿವಣ್ಣವರ, ದೇವೇಂದ್ರ ಗರಗದ, ಸಂಗಪ್ಪ ಬೆಳಗಾವಿ, ಸೋಮಪ್ಪ ಮರಗಾಲ, ಲಕ್ಷ್ಮಣ ಸೋಮನಟ್ಟಿ, ಬಸಪ್ಪ ಹಳಿವೂರ, ಮಲ್ಲವ್ವ ಬುಡರಕಟ್ಟಿ ಆಗಮಿಸಿದ್ದರು.
ವಿಶೇಷ ಸನ್ಮಾನಿತರಾಗಿ ಪತ್ರಕರ್ತರ ಸಂಘದ ಅಧ್ಯಕ್ಷ. ಮಹಾಂತೇಶ ತುರುಮರಿ, ಕನ್ನಡ ಪರ ಸಂಘಟನೆಗಳ ಮುಖಂಡರಾದ ಸಿ. ಕೆ. ಮೆಕ್ಕೆದ, ವಿಠ್ಠಲ ಕಡಕೋಳ, ಅನಿಲ ಬೋಳನ್ನವರ,
ಶಿವಾನಂದ ಕೋಲಕಾರ,ಸುಭಾಷ್ ತುರಮರಿ, ರವಿ ತುರಮರಿ, ರಾಯಣ್ಣ ಸ್ಮರನೊತ್ಸವ ಸಮಿತಿ ಅಧ್ಯಕ್ಷ, ರಾಜು ಸೊಗಲ, ರೈತ ಸಂಘದ ಮುಖಂಡರಾದ ಈರಪ್ಪ ಎತ್ತಿನಮನಿ ಮಡಿವಾಳಪ್ಪ ಹಿರೇಹೊಳಿ ಸೇರಿದಂತೆ ವಿವಿಧ ಸಂಘಟನೆ ಮುಖಂಡರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ, ವಿಜಯಕುಮಾರ ದಳವಾಯಿ ಸನ್ಮಾನಿಸಿ ಗೌರವಿಸಿದರು.
ಸುನಿಲ ಪಟಾತ್, ಸಂಗಮೇಶ ಹುಲಗನ್ನವರ, ಬಸವರಾಜ ಕುರಿ, ಕುಮಾರ ಪಟ್ಟೀಹಾಳ,ಸಂತೋಷ ಜ್ಯೋತಿ, ಈಶ್ವರ ಶಿಲ್ಲೇದಾರ, ಚಂದ್ರಶೇಖರ ಹೊಸೂರ, ಸಿದ್ದಪ್ಪ ಬಂಡಗಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಬಸವರಾಜ ಬೆಳ್ಳಿಕಟ್ಟಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕುರಿ ನಿರೂಪಿಸಿದರು. ಮಾರುತಿ ಶೆರೆಗಾರ ವಂದಿಸಿದರು.