ಬಸವಕುಮಾರಗೆ ಸನ್ಮಾನ
ಬೀದರ್:ಜು.23: ನಗರದ ಅರುಣೋದಯ ಎಂಟರ್ ಪ್ರೈಸೆಸ್ ಪ್ರಾವೆಟ್ ಲಿಮಿಟೆಡ್ ಕಾರ್ಯಾಲಯದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ರವಿಂದ್ರ ಸ್ವಾಮಿ ಅವರು ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಶೇಕಡಾ 97 ಪ್ರತಿಶತದಷ್ಟು ಅಂಕ ಗಳಿಸ, ಕೆಸೆಟ್ ನಲ್ಲಿ ಸಹ ಉತ್ತಮ ಸಾಧನೆ ಮಾಡಿದಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಅವರ ಸುಪುತ್ರ ಬಸವಕುಮಾರ ಸ್ವಾಮಿ ಅವರಿಗೆ ಶಾಲು ಹೊದಿಸಿ ಬೆಲೆಬಾಳುವ ಲೇಖನಿ ನೀಡಿ ಸನ್ಮಾನಿಸಿ ಗೌರವಿಸಿದರು. ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕಾರ್ತಿಕ ಸ್ವಾಮಿ ಮಠಪತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.