ಪರಿಶಿಷ್ಟ ಸಮುದಾಯಕ್ಕೆ ದೌರ್ಜನ್ಯ ನಡೆದರೆ ಕ್ರಮ
ಚನ್ನಪಟ್ಟಣ.ಜು.೨೩-ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ಹಾಗೂ ಶೋಷಣೆಗಳು ನಡೆದರೆ, ನಿರ್ದಕ್ಷಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಉಪವಿಭಾಗಾಧಿಕಾರಿ ಗಿರಿ ತಿಳಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ಇಲಾಖೆ,ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ನಗರದಲ್ಲಿಯಾಗಲಿ ಇಲ್ಲಾ ತಾಲ್ಲೂಕಿನಲ್ಲಾಗಲಿ, ಈ ರೀತಿಯ ಘಟನೆಗಳು ನಡೆದರೆ ತಕ್ಷಣ ಸ್ತಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮುದಾಯದ ಅಭಿವೃದ್ದಿ ವಿಶೇಷವಾದ ಯೋಜೆನಗಳನ್ನು ಜಾರಿಗೆ ತಂದಿದೆ, ಅದರ ಸದ್ಬಳಕೆಯನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು, ಸಂಬಂಧಿಸಿದ ಇಲಾಖೆಯಿಂದ ಯೋಜನೆಗಳು ಸಮರ್ಪಕವಾಗಿ ದೊರೆಯದೆ ಇರುವುದರ ಬಗ್ಗೆಯೂ ಮಾಹಿತಿ ನೀಡದರೆ, ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕಟಿ. ಟಿ.ಕೃಷ್ಣ ಮಾತನಾಡಿ, ತಮ್ಮ ಠಾಣೆಯ ವ್ಯಾಪ್ತಿಗಳಲ್ಲಿ ಸಮುದಾಯಗಳ ಶೋಷಣೆಯ ಬಗ್ಗೆ ಮಾಹಿತಿ ಪಡೆದು, ಶೋಷಣೆ ಮಾಡಿರುವುವರ ಬಗ್ಗೆ ನಿಧಕ್ಷಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ನಗರವೃತ್ತ ನಿರೀಕ್ಷಕ ರವಿಕಿರಣ್ ಮಾತನಾಡಿ, ತಮ್ಮ ಶೋಷಣೆಗಳು ನಡೆಯುತ್ತಿದ್ದರೂ ಯಾವುದೋ ರೀತಿಯ ಭಯದಿಂದ, ಶೋಷಣೆಯನ್ನು ಮರೆಮಾಚಬಾರದು ಇದು ಕೂಡ ಅಪರಾಧವಾಗುತ್ತದೆ, ಶೋಷಣೆಗಳನ್ನು ತಡೆಯುವ ಕೆಲಸ ಮಾಡದಿದ್ದರೆ, ಅದು ಮುಂದುವರಿಯುತ್ತಲೇ ಇರುತ್ತದೆ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್‌ಠಾಣೆಯ ಪಿ.ಎಸ್.ಐ.ಹರೀಶ್, ಅಕ್ಕೂರು ಪೊಲೀಸ್ ಠಾಣೆಯ ಪಿ.ಎಸ್.ಐ. ಬಸವರಾಜು, ಪೂರ್ವ ಪೊಲೀಸ್‌ಠಾಣೆಯ ಪಿ.ಎಸ್.ಐ. ಆಕಾಶ್‌ಪತ್ತಾರ್ ಹಾಜರಿದ್ದರು.
ಹಲವಾರು ಮಂದಿ ಸಮುದಾಯದ ಮುಖಂಡರು ಹಲವಾರು ವಿಚಾರಗಳ ಬಗ್ಗೆ ಪೊಲೀಸ್ ಅಧಿಕಾರಿಗಳ ಗಮನ ಸೆಳೆದರು.