ಸ್ವಚ್ಛತೆಯೇ ಆರೋಗ್ಯದ ಮೂಲ ಮಂತ್ರ: ಡಾ. ಅಂಬಿಕಾ ಪಾಟೀಲ್
ಕಲಬುರಗಿ:ಸೆ.28: ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ ಎಂದು ಶಾಂತಾ ಆಸ್ಪತ್ರೆಯ ವೈದ್ಯೆ ಡಾ. ಅಂಬಿಕಾ ಪಾಟೀಲ್ ಅವರು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಶಾಂತಾ ಆಸ್ಪತ್ರೆಯ ಸಹಯೋಗದಲ್ಲಿ ಸ್ವಚ್ಚತಾ ಸಿಬ್ಬಂದಿಗಾಗಿ ಶನಿವಾರ ಆಯೋಜಿಸಿದ್ದ ಸಫಾಯಿ ಮಿತ್ರ ಸುರಕ್ಷಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಬಹುತೇಕ ರೋಗಗಳು ಸ್ವಚ್ಚತೆಯ ಕೊರತೆಯಿದಿಂದ ಬರುತ್ತವೆ. ನಾವೆಲ್ಲರೂ ನಮ್ಮ ಮನೆ ಮತ್ತು ದೇಹವನ್ನು ಸ್ವಚ್ಚವಾಗಿ ಇಟ್ಟು ಕೊಳ್ಳುವುದರಿಂದ ರೋಗಗಳನ್ನು ಬರದಂತೆ ತಡೆಯಬಹುದಾಗಿದೆ ಎಂದರು.
ಅದರಲ್ಲೂ ವಿಶ್ವವಿದ್ಯಾಲಯದಲ್ಲಿ ಸ್ವಚ್ಚತೆಯನ್ನು ಕಾಪಾಡುವ ತಾವು ತಮ್ಮ ಸ್ವಚ್ಚತೆಯನ್ನೂ ಕಾಪಾಡಿಕೊಳ್ಳಬೇಕು. ಉಟದ ಮೊದಲು, ಬಹಿರ್ದೆಶೆಗೆ ಹೊದ ಮೇಲೆ, ಯಾವುದೆ ಕೆಲಸ ಮಾಡಿದ ನಂತರ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಿ. ದಿನಾಲು ಸಾಬುನಿಂದ ಮೈತೊಳೆದುಕೊಳ್ಳಿ, ಹೊಲಸು ಕೈಗಳಿಂದ ಕಣ್ಣು, ಕಿವಿ, ಮೂಗುಗಳನ್ನು ಮುಟ್ಟಬೇಡಿ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬರದಂತೆ ನೋಡಿಕೊಳ್ಳಿ ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರು ಮಾತನಾಡಿ, ಸ್ವಚ್ಚತೆಯ ಕೊರತೆಯಿಂದ 100ರಲ್ಲಿ 7 ಜನ ಅನಾರೋಗ್ಯದ ಮೇಲಿನ ವೆಚ್ಚದಿಂದ ಬಡತನಕ್ಕೆ ದೂಡಲ್ಪಡುತ್ತಿದ್ದಾರೆ. ಸ್ವಚ್ಚತೆಯನ್ನು ಕಾಪಾಡುವ ಮೂಲಕ ಪ್ರತಿ ಕುಟುಂಬ ಒಂದು ವರ್ಷದಲ್ಲಿ ಆರೋಗ್ಯದ ಮೇಲೆ ಖರ್ಚು ಮಾಡುವ ಸುಮಾರು 50 ಸಾವಿರ ರೂ.ಗಳ ಉಳಿತಾಯ ಮಾಡಬಹುದೆಂದು ಸರವೇಕ್ಷಣೆಗಳು ಹೇಳುತ್ತವೆ. ಅನಾರೋಗ್ಯವು ನಿಮ್ಮ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ ಅಲ್ಲದೆ ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳುತ್ತದೆ. ಹಾಗಾಗಿ ತಾವು ಸ್ವಚ್ಚತೆಯನ್ನು ಕಾಪಾಡಿಕೊಂಡು ಆರೋಗ್ಯವಾಗಿರಿ. ಕೆಲಸ ಮಾಡುವಾಗ ಕೊಟ್ಟಂತ ಸುರಕ್ಷತಾ ಕಿಟ್‍ಗಳನ್ನು ಬಳಸಿ ಮತ್ತು ಸುರಕ್ಷಿತವಾಗಿರಿ ಎಂದು ಸಲಹೆ ಮಾಡಿದರು.
ಇದಕ್ಕೂ ಮೊದಲು ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಕಾರ್ಯಕ್ರಮ ಉದ್ಘಾಟಿಸಿ ಸ್ವಚ್ಚತಾ ಸಿಬ್ಬಂದಿಗಳಿಗೆ ಉಚಿತ ಸುರಕ್ಷತಾ ಕಿಟ್‍ಗಳನ್ನು ವಿತರಿಸಿದರು. ನಂತರ ಶಾಂತಾ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರು ಸ್ವಚ್ಚತಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಮಾಡಿದರು. ಔಷಧ ಸಹಿತ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಂತಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜೀವ್ ಪಾಟಿಲ್, ಕ್ಯಾಂಪಸ್ ಅಭಿವೃದ್ದಿ ವಿಭಾಗದ ಡೀನ್ ಪೆÇ್ರ. ಚನ್ನವೀರ್ ಆರ್ ಎಂ., ಸ್ವಚ್ಚತಾಹಿ ಸೇವಾ ಯೋಜನೆಯ ನೋಡಲ್ ಅಧಿಕಾರಿ ಡಾ. ಗಣಪತಿ ಬಿ. ಸಿನ್ನೂರ್ ಮತ್ತು ಸ್ವಚ್ಚತಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ಶೈಲಜಾ ಕೊನೆಕ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೈದ್ಯಾಧಿಕಾರಿ ಡಾ. ಜ್ಯೋತಿ ತೆಗನೂರ್ ಅವರು ವಂದಿಸಿದರು.