ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ಅವಶ್ಯ: ಬಾಪು ಪದ್ಮನಾಭ
ಕಲಬುರಗಿ:ಸೆ.28:ಬಿದಿರಿಗೆ ಸಂಸ್ಕಾರ ಕೊಟ್ಟಾಗ ಕೊಳಲಾಗುತ್ತದೆ. ಅದಕ್ಕೆ ಉತ್ತಮವಾಗಿ ನುಡಿಸಿದಾಗ ಸಂಗೀತ ಹೊರಹೊಮ್ಮುತ್ತದೆ. ಹಾಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ಅವಶ್ಯ ಎಂದು ಅಂತರ್ರಾಷ್ಟ್ರೀಯ ಕೊಳಲು ವಾದಕರು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಬಾಪು ಪದ್ಮನಾಭ್ ಅವರು ಹೇಳಿದರು.
ನಗರದ ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಬಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಯುವ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿಸಲು ಏರ್ಪಡಿಸಿದ ವಿಶೇಷ ಕಾರ್ಯಕ್ರಮ “ವಚನ-ನಾದ-ಧ್ಯಾನ” ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಳಲು ವಾದನ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದ ಅವರು, ಬರೀ ದೈವಿಕೃಪೆ ಇರಬೇಕೆಂದು ಅಪೇಕ್ಷಿಸುತ್ತೇವೆ. ಆದರೆ ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯಶೀಲತೆ ಇದ್ದಲ್ಲಿ ದೈವಿಕೃಪೆ ಇರುತ್ತದೆ ಎಂಬ ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಅವರ ನುಡಿಮುತ್ತನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಿಮ್ಮ ವ್ಯಕ್ತಿತ್ವ ವಿಕಾಸಗೊಳುತ್ತದೆ ಅದಕ್ಕೆ ಸಂಗೀತ ಕಲಿಯುವುದರಿಂದ, ಹಾಡುವುದರಿಂದ ಮನಸ್ಸಿಗೆ ಆನಂದ ಉಂಟಾಗುತ್ತದೆ. ಏಕಾಗ್ರತೆ ಹೆಚ್ಚಾಗುತ್ತದೆ. ಪಠ್ಯಪುಸ್ತಕಗಳಲ್ಲಿನ ಪದ್ಯಗಳನ್ನು ಸಂಗೀತಕ್ಕೆ ಅಳವಡಿಸಿದರೆ ಸದಾಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರೇರೇಪಿಸಿದರು.
ಶರಣರ ವಚನಗಳನ್ನು ಕೊಳಲು ವಾದನದಲ್ಲಿ ನುಡಿಸಿ ಸಂಗೀತದ ರಸಾನುಭವವನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಕಲೆ, ಸಾಹಿತ್ಯ, ಸಂಗೀತದಲ್ಲಿಯೂ ಆಸಕ್ತಿ ಹೆಚ್ಚಾದರೆ ಏಕಾಗ್ರತೆ ಹೆಚ್ಚಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಪೆÇ್ರೀತ್ಸಾಹಿಸಿದರು.
ಬಸವ ಸಮಿತಿಯ ಸಂಚಾಲಕ ಉದ್ದಂಡಯ್ಯ ಅವರು ಮಾತನಾಡಿ, ಅವರು ವಿದ್ಯಾರ್ಥಿಗಳು ಶರಣರ ವಚನಗಳನ್ನು ಓದಿ ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದರು. ಡಾ. ಆನಂದ್ ಸಿದ್ಧಾಮಣಿ ಅವರು ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಸಂಸ್ಥಾಪಕ ಪೆÇ್ರ. ಚನ್ನಾರಡ್ಡಿ ಪಾಟೀಲ್ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಏಕಾಗ್ರತೆ ಮತ್ತು ಧ್ಯಾನದ ಅವಶ್ಯಕತೆ ಇದೆ. ಶರಣರ ವಚನಗಳನ್ನು ಓದಿ ಅರ್ಥಿಸಿಕೊಂಡಾಗ ಅವು ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.
ಜೀವನದಲ್ಲಿ ಉತ್ತಮ ಮನುಷ್ಯನಾಗಲು, ಯಶಸ್ಸು ಸಾಧಿಸಲು ನಮ್ಮ ಗುರಿಯೇ ನಮ್ಮ ಧ್ಯಾನ, ಕತ್ತಲೇಯಲ್ಲಿ ಅದೇ ನಾದ ಮತ್ತು ಶ್ರೇಷ್ಠ ಸಾಧಕರಂತೆ ಸಾಧನೆ ಮಾಡಲು ಕಠಿಣ-ಪರಿಶ್ರಮ, ಪ್ರಾಮಾಣಿಕತೆ, ನಿರಂತರ ಅಧ್ಯಯನ, ಏಕಾಗ್ರತೆ, ಧ್ಯಾನ ನಿಮ್ಮದಾಗಬೇಕೆಂದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ಕಾಲೇಜಿನ ಮುಖ್ಯ ಶೈಕ್ಷಣಿಕ ನಿರ್ದೇಶಕ ಐಐಟಿಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ್, ಪ್ರಭುಗೌಡ ಸಿದ್ಧಾರೆಡ್ಡಿ, ಗುರುರಾಜ್ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿದ್ಯಾವತಿ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು.