ನಿಯಮಗಳನ್ನು ಉಲ್ಲಂಘಿಸಿರುವ ವಿದ್ಯುತ್ ಘಟಕದ ವಿರುದ್ದ ಕ್ರಮ ಕೈಗೊಳ್ಳಲು ಡಿಸಿ ಗೆ ಮನವಿ
ಚಿಂಚೋಳಿ,ಸೆ.28- ತಾಲ್ಲೂಕಿನ ಚಂದಾಪುರ ಪಟ್ಟಣದ ಹೊರವಲಯದಲ್ಲಿರುವ ಪೆÇೀಲಕಪಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಆಗ್ರೋ ಪವರ್ ಲಿಮಿಟೆಡ್ ಕಂಪನಿಯ ವಿದ್ಯುತ್ ಘಟಕವು ಸ್ಥಾಪನೆಗೊಂಡು ಸುಮಾರು ವರ್ಷಗಳಾಗಿವೆ. ಕಂಪನಿಯು ಭಾರತ ಸಂವಿಧಾನದ ಕಂಪನಿ ಕಾಯ್ದೆಗಳ ಮತ್ತು ಪರಿಸರ ಮಾಲಿನ್ಯ ಕಾಯ್ದೆಯ ನಿಯಮಗಳನ್ನು ಮತ್ತು ಮಾರ್ಗಸೂಚಿಗಳನ್ನು ಪಾಲಿಸದೆ ಕಂಪನಿಯಿಂದ ಅತ್ಯಾಧಿಕ ಕಪ್ಪು ಹೊಗೆ ಹೊರ ಸೋಸುತ್ತಿರುವುದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ಗರ್ಭಿಣಿ ಸ್ತ್ರೀಯರ ಮತ್ತು ಮಕ್ಕಳ ಮೇಲೆ ಮತ್ತು ಕಂಪನಿಯ ಸಮೀಪದ ಅಂತರದಲ್ಲಿರುವ ಶಾಲಾ- ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬಿಳುತ್ತಿರುವುದರಿಂದ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಿಂಚೋಳಿಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಅಧ್ಯಕ್ಷ ರಾಜೇಂದ್ರ ಪ್ರಸಾದ್, ತಾಲ್ಲೂಕಾಧ್ಯಕ್ಷ ಅನೀಲ ಬಿರಾದಾರ ಸೇರಿದಂತೆ ಇನ್ನಿತರ ಸಂಘದ ಪದಾಧಿಕಾರಿಗಳು ಹಾಜರಿದ್ದರು.