ವಿದ್ಯಾರ್ಥಿಗಳಿಂದ ರಕ್ತದಾನ
ಬಾಗಲಕೋಟೆ,ಜು23: ಜೀವವೊಂದರ ಉಳಿವಿಗೆ ನಮ ಸಿಕ್ಕ ಸದಾವಕಾಶವೇ ರಕ್ತದಾನವಾಗಿದೆ ಎಂದು ಪ್ರಾಚಾರ್ಯ ಎಸ್.ಎಮ್.ಗಾಂವಕರ್ ಹೇಳಿದರು.
ಅವರು ಬಿ.ವಿ.ವಿ.ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟೆ ಹಾಗೂ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಹೆಚ್. ಎಸ್. ಕೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನವನಗರ, ಹಾಗೂ ಬಾಗಲಕೋಟ ರಕ್ತಭಂಡಾರ, ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರ ಆರೋಗ್ಯ ತರಬೇತಿ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದರಿ ಶಿಬಿರದಲ್ಲಿ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಭೋದಕೇತರ ಸಿಬ್ಬಂದಿಗಳು ಹಾಗೂ ಮಹಾವಿದ್ಯಾಲಯದ ಬಿ.ಎಸ್ಸಿ., ಬಿ.ಸಿ.ಎ., ಮತ್ತು ಎಮ್.ಎಸ್ಸಿ. ವಿಭಾಗಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೂಂಡರು, ರಕ್ತದಾ£ ಶಿಬಿರದಲ್ಲಿ 110 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಡಾ. ಎನ್. ಎಚ್. ಬೇವಿನಹಳ್ಳಿ, ಐಕ್ಯೂಎಸಿ ಸಂಯೋಜಕರಾದ ಡಾ. ದೇವಪ್ಪ ಎಸ್. ಲಮಾಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. .ಶ್ರೀಮತಿ ಎಸ್. ಜಿ. ಹುಣಸಿಕಾಯಿ, ಸಿಬ್ಬಂದಿ ಕಾರ್ಯದರ್ಶಿ ಪ್ರೊ. ವಿ. ಎನ್. ಒನಕುದರಿ, ಎನ್. ಎಸ್. ಎಸ್. (ಘಟಕ 1 & ಘಟಕ 2)ರ ಕಾರ್ಯಕ್ರಮ ಅಧಿಕಾರಿಗಳಾದ ಶಿವಾನಂದ ಶಿವನಗುತ್ತಿ, ಎಸ್. ಬಿ. ಬಸವನಾಳ, ಮತ್ತು ಐ. ವಾಯ್. ಆರ್. ಸಿ., ಆರ್. ಆರ್. ಸಿ. ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ. ಬಿ. ಎಮ್. ಕರಿದ್ಯಾವನ್ನವರ್, ಸ್ಕೇಟ್ಸ ಮತ್ತು ಗೈಡ್ ಕಾರ್ಯಕ್ರಮ ಅಧಿಕಾರಿಗಳಾದ ಕು. ಲಕ್ಷೀ ಮುತ್ತಪನವರÀ, ಎನ್. ಎಸ್. ಎಸ್ ಘಟಕದ ಸದ್ಯಸರು, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.