ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್
ಕೋಲಾರ,ಜು,೨೩- ಶಾಲಾ ಶಿಕ್ಷಣ ಇಲಾಖೆಯ ೨೦೨೩-೨೪ ನೇ ಸಾಲಿನ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವೃಂದದ ಕೋರಿಕೆ, ಕನಿಷ್ಠ ೦೩ ರಿಂದ ೦೫ ವರ್ಷದೊಳಗಡೆ ಅವಧಿ ಮುಗಿದ ಶಿಕ್ಷಕರ ನಿರ್ಧಿಷ್ಠಪಡಿಸಿದ ಶಿಕ್ಷಕರ ಮತ್ತು ಪರಸ್ಪರ ಘಟಕದೊಳಗಿನ ವರ್ಗಾವಣೆ ಕೌನ್ಸಿಲಿಂಗ್‌ಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಿದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ನ್ನು ಜು.೨೪ ರಿಂದ ಜು.೩೦ ರವರೆಗೂ ನಡೆಸಲಿದ್ದು ವೃಂದವಾರು ಆದ್ಯತೆಯಂತೆ ಸೂಚಿಸಿರುವ ವೇಳಾಪಟ್ಟಿಯಂತೆ ಕೌನ್ಸಿಲಿಂಗ್‌ನ್ನು ಉಪನಿರ್ದೇಶಕರ ಕಛೇರಿ ಕೋಲಾರ ಇಲ್ಲಿ ಆಯೋಜಿಸಿದೆ ಅರ್ಹ ಶಿಕ್ಷಕರು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಡಿಡಿಪಿಐ ಕೃಷ್ಣಮೂರ್ತಿ ಸೂಚಿಸಿದ್ದಾರೆ.
ಜು.೨೪ ರಂದು ಘಟಕದೊಳಗಿನ ಕೋರಿಕೆ ವರ್ಗಾವಣೆಗಳಲ್ಲಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ೧ ಆಧ್ಯತಾ ಪಟ್ಟಿಯಲ್ಲಿನ ಅಂತ್ಯದವರೆಗಿನ ೧೫ ಮಂದಿ ಹಾಗೂ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪಟ್ಟಿಯಲ್ಲಿನ ಕ್ರ.ಸಂಖ್ಯೆ ೧ ರಿಂದ ಆದ್ಯತಾ ಪಟ್ಟಿಯ ಅಂತ್ಯದವರೆಗಿನ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಸಹಶಿಕ್ಷಕರ ಪಟ್ಟಿಯಲ್ಲಿನ ಕ್ರಮಸಂಖ್ಯೆ ೧ರಿಂದ ೫೦೦ ವರೆಗಿನವರು ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಪಾಲ್ಗೊಳ್ಳಲು ಡಿಡಿಪಿಐ ಸೂಚಿಸಿದ್ದಾರೆ.
ಜು.೨೫ ರಂದು ಪ್ರಾಥಮಿಕ ಶಾಲಾ ಸಹಶಿಕ್ಷಕರ ಪಟ್ಟಿಯಲ್ಲಿನ ೫೦೧ರಿಂದ ಅಂತ್ಯದವರೆಗೂ ಇರುವ ಶಿಕ್ಷಕರು ಕೌನ್ಸಿಲಿಂಗ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ. ಜು.೨೯ ರಂದು ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ನಡೆಯಲಿದ್ದು, ಅಂತಿಮ ಪಟ್ಟಿಯಂತೆ ಪೂರ್ಣಗೊಳ್ಳುವವರೆಗಿನ ಕ್ರಮಸಂಖ್ಯೆಯ ಶಿಕ್ಷಕರು ಪಾಲ್ಗೊಳ್ಳಬಹುದು.
ಜು.೩೦ ರಂದು ಕನಿಷ್ಟ ೩ ರಿಂದ ೫ ವರ್ಷದೊಳಗಿನ ಅವಧಿ ಮುಗಿದ ಪ್ರಾಥಮಿಕ ಶಾಲಾ ಶಿಕ್ಷಕರ ನಿರ್ಧಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತ ಪ್ರಕ್ರಿಯೆಗೆ ಅಂತಿಮ ಪಟ್ಟಿಯಂತೆ ಪೂರ್ಣಗೊಳ್ಳುವವರೆಗಿನ ಕ್ರಮ ಸಂಖ್ಯೆಗಳಲ್ಲಿ ಇರುವವರೂ ಪಾಲ್ಗೊಳ್ಳಬಹುದು.
ಜು.೨೬ ರಂದು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪಟ್ಟಿಯಲ್ಲಿನ ಕ್ರಮಸಂಖ್ಯೆ ೧ರಿಂದ ಆದ್ಯತಾ ಪಟ್ಟಿಯ ಅಂತ್ಯದವರೆಗೂ ಇರುವ ಶಿಕ್ಷಕರು ಕೌನ್ಸಿಲಿಂಗ್‌ನಲ್ಲಿ ಪಾಲ್ಗೊಂಡು ಸ್ಥಳ ನಿಯುಕ್ತಿ ಮಾಡಿಕೊಳ್ಳಲು ಅವಕಾಶವಿದೆ. ಜತೆಗೆ ಇದೇ ದಿನ ಪ್ರೌಢಶಾಲಾ ವಿಶೇಷ ಶಿಕ್ಷಕರು ಪಟ್ಟಿಯಲ್ಲಿನ ಕ್ರಮಸಂಖ್ಯೆ ೧ ರಿಂದ ಆದ್ಯತಾ ಪಟ್ಟಿಯ ಅಂತ್ಯದವರೆಗೂ ಇರುವವರು ಹಾಗೂ ಪ್ರೌಢಶಾಲಾ ಸಹಶಿಕ್ಷಕರು ಜೇಷ್ಟತಾ ಪಟ್ಟಿಯಲ್ಲಿನ ಕ್ರಮಸಂಖ್ಯೆ ೧ ರಿಂದ ೧೯೭ ರವರೆಗೂ ಪಾಲ್ಗೊಳ್ಳಲು ಸೂಚಿಸಲಾಗಿದೆ.
ಜು.೨೯ ರಂದು ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದ್ದು ಅಂತಿಮ ಪಟ್ಟಿಯಂತೆ ಎಲ್ಲರೂ ಕೌನ್ಸಿಲಿಂಗ್ ನಲ್ಲಿ ಪಾಲ್ಗೊಂಡು ಸ್ಥಳ ನಿಯುಕ್ತ ಪ್ರಕ್ರಿಯೆ ಮಾಡಿಕೊಳ್ಳಬಹುದು.
ಜು.೩೦ ರಂದು ಕನಿಷ್ಟ ೩ ರಿಂದ ೫ ವರ್ಷದೊಳಗಿನ ಅವಧಿಮುಗಿದ ಪ್ರೌಢಶಾಲಾ ಶಿಕ್ಷಕರು ನಿರ್ಧಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯಲ್ಲಿ ಶಿಕ್ಷಕರ ಅಂತಿಮ ಪಟ್ಟಿಯಂತೆ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಪಟ್ಟಿಯಲ್ಲಿರುವ ಶಿಕ್ಷಕರು ಆಯಾ ದಿನದಂದು ಬೆಳಗ್ಗೆ ೯-೩೦ ಗಂಟೆಗೆ ಹಾಜರಾಗುವುದು ಕಡ್ಡಾಯ, ತಡವಾಗಿ ಬಂದಲ್ಲಿ ನಿಮ್ಮ ಕ್ರಮಸಂಖ್ಯೆ ಮುಂದೆ ಹೋದಲ್ಲ ಆನ್‌ಲನ್ ಕೌನ್ಸಿಲಿಂಗ್ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ. ಕೌನ್ಸಿಲಿಂಗ್ ಗೆ ಹಾಜರಾಗುವ ಶಿಕ್ಷಕ ಶಿಕ್ಷಕರಿಗೆ ಸಾಂದರ್ಭಿಕ ರಜೆ ಪಡೆದು ಹಾಜರಾಗತಕ್ಕದ್ದು, ಯಾವುದೇ ಕಾರಣಕ್ಕೂ ಅನ್ಯಕಾರ್ಯ ನಿಮಿತ್ತ ಒಒಡಿ ಎಂದು ಪರಿಗಣಿಸುವುದಿಲ್ಲ ಮತ್ತು ಪಟ್ಟಿಯಲ್ಲಿರುವ ಶಿಕ್ಷಕರು ಮಾತ್ರ ಕೌನ್ಸಿಲಿಂಗ್‌ಗೆ ಹಾಜರಾಗುವುದು.
ಮೇಲೆ ತಿಳಿಸಿದ ದಿನಾಂಕಗಳಲ್ಲಿ ಹಾಜರಾಗಬೇಕಾಗಿರುವ ಕ್ರಮ ಸಂಖ್ಯೆಗಳು ಕೇವಲ ಸೂಚಿತವಾಗಿದ್ದು, ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ತಾಂತ್ರಿಕ ಸಮಸ್ಯೆಯಾದಲ್ಲಿ ಪ್ರತಿದಿನಕ್ಕೆ ನಿಲ್ಲಿಸಿದ ಕ್ರಮಸಂಖ್ಯೆಯಿಂದ ಮುಂದಿನ ದಿನಕ್ಕೆ ಮುಂದುವರೆಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.