ಪರಿಸರ ಸ್ವಚ್ಛತೆ ಮೂಲಕ ಡೆಂಗ್ಯೂ ಜಾಗೃತಿ
ಬಾಗಲಕೋಟೆ,ಜು23: ನಗರದಲ್ಲಿ ವಿವಿಧಡೆ ಸ್ವಚ್ಛತೆ ಮಾಡುವ ಮೂಲಕ ಜನರಲ್ಲಿ ಡೆಂಗ್ಯೂವಿನ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿದರು.
ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ನಗರ ಮಂಡಲವತಿಯಿಂದ ನಗರದ ವಿವಿಧ ಬಡಾವಣೆಯಲ್ಲಿ ಪ್ರತಿ ರವಿವಾರಕ್ಕೊಮ್ಮೆ ಬಿಜೆಪಿ ಕಾರ್ಯಕರ್ತರು ಜೊತೆಗೂಡಿ ಸ್ವಚ್ಚ ಅಭಿಯಾನ ಹಾಗೂ ಡೆಂಗ್ಯೂ ಜಾಗೃತಿ ಹಮ್ಮಿಕೊಂಡಿದ್ದು ತದ ನಿಮಿತ್ಯ ವಿದ್ಯಾಗಿರಿಯ ಶಿವಗಿರಿ ಬಡಾವಣೆಯಲ್ಲಿ ಸಂಚರಿಸಿ ಅಲ್ಲಿ ರಸ್ತೆ, ಆವರಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಮಾಡಿ ಮನೆ ಮನೆಗೆ ತೆರಳಿ ಪರಿಸರ ಸ್ವಚ್ಚತೆ ಮತ್ತು ಡೆಂಗ್ಯೂವಿನ ಬಗ್ಗೆ ಜಾಗೃತಿ ಮೂಡಿಸಿದರು.
ಅಭಿಯಾನದಲ್ಲಿ ನಗರ ಮಂಡಲದ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ರಾಜು ನಾಯ್ಕರ, ಪರಮೇಶ್ವರ ಮಧುರ, ಚಂದ್ರು ರಾಮವಡಗಿ, ಚಂದ್ರು ಸರೂರ, ಮಲ್ಲೇಶ ಬಾಲಪ್ಪನ್ನವರ, ಹುಲ್ಲಪ್ಪ ಏಳಮ್ಮಿ, ರಾಜು ದಂಡಗಿ, ರವಿ ನಾಯಕ್, ದೂಳಪ್ಪ ಕೊಪ್ಪದ, ದಶರಥ ಪತಂಗಿ, ಎಸ್.ಸಿ.ಮೋರ್ಚಾದ ಅಧ್ಯಕ್ಷರಾದ ನಾಗರಾಜ ನಾರಾಯಣಕರ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಸೊನ್ನದ, ಉಪಾಧ್ಯಕ್ಷರಾದ ಶೆನಸಪ್ಪ ಬಂಡಿ, ಹುಲ್ಲಪ್ಪ ಮಾದರ, ಬಾಳು ಬಾರಸಕಳೆ, ಚೇತನ ನಾರಾಯಣಕರ, ಸಂಗಪ್ಪ ಮಾದರ ಮತ್ತು ಮೋರ್ಚಾದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.