ರೈತ ಹುತಾತ್ಮ ದಿನಾಚರಣೆ
ಮುನವಳ್ಳಿ,ಜು23: ಪಟ್ಟಣದ ಸೋಮಶೇಖರ ಮಠದ ಸಭಾಭವನದಲ್ಲಿ ಕಳಸಾ ಬಂಡರಿ ನಾಲಾ ಜೋಡಣೆ ಹೋರಾಟ ಸಮಿತಿ ಹಾಗೂ ರೈತರಿಂದ ರವಿವಾರ 44 ನೇ ರೈತ ಹುತಾತ್ಮ ದಿನವನ್ನು ಆಚರಿಸಿದರು.
ಸಾನಿದ್ಯ ವಹಿಸಿ ಶ್ರೀ ಮುರುಘೇಂದ್ರ ಶ್ರೀಗಳು ಮಾತನಾಡಿ ರೈತರು ಒಗ್ಗಟ್ಟಿನಿಂದ ಹೋರಾಡಬೇಕು ಅಂದಾಗ ಬೇಡಿಕೆಗಳು ಈಡೇರಿಸಿಕೊಳ್ಳಲು ಸಾಧ್ಯ ಸರಕಾರ ರೈತರ ಬೇಡಿಕೆಗಳಿಗೆ
ಸ್ಪಂದಿಸಿದಾಗ ರೈತರು ಸಮಗ್ರವಾಗಿ ಅಭಿವೃದ್ದಿ ಹೊಂದಲು ಸಾಧ್ಯ ಎಂದರು
ಉಮೇಶ ಬಾಳಿ ಮಾತನಾಡಿ ರೈತರು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಆಧಾರಸ್ತಂಭವಾಗಿದ್ದಾರೆ ರೈತರಿಗೆ ಸಿಗಬೇಕಾದ ಸವಲತ್ತುಗಳು ಪೂರ್ಣಪ್ರಮಾಣದಲ್ಲಿ ದೊರಕುತ್ತಿಲ್ಲ ರೈತರ ಹಿತಾಸಕ್ತಿ ಕಾಪಾಡಿದಾಗ ಮಾತ್ರ ದೇಶ ಪ್ರಗತಿ ಹೊಂದುತ್ತದೆ ಎಂದರು.
ಪಂಚನಗೌಡ ದ್ಯಾಮನಗೌಡರ ಮಾತನಾಡಿ ರೈತರು ಅನೇಕ ಉಗ್ರಹೋರಾಟ ಮಾಡಿದರು ಸರಕಾರ ಕಣ್ಣೇತ್ತಿ ನೋಡದೆ ತನ್ನ ಮಂಡತನವನ್ನು ತೋರಿಸುತ್ತಿದೆ ರೈತರ ಹೆಸರಿನ ಮೇಲೆ ಸರಕಾರ ನಡೆಸುತ್ತಾರೆ ಇದು ನಿಲ್ಲಬೇಕು ರೈತರಿಗಾಗಿ ಹೊಸ ಯೋಜನೆಗಳನ್ನು ತಂದು ರೈತರಿಗೆ ಅನೂಕುಲ ಮಾಡಿಕೊಡಬೇಕೆಂದರು.
ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ ರೈತರ ಹೋರಾಟಗಳನ್ನು ಮೆಲುಕು ಹಾಕಿದರು.
ರೈತ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೈತ ಮಹಿಳೆ ಬಸವ್ವ ಮುಚ್ಚಂಡಿ, ಜಗದೀಶ ಹಿರೇಮಠ, ಬಸಪ್ಪ ಮೇಟಿ ಯವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.