ಇಂದಿನ ಆರೋಗ್ಯವಂತ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳು
ಬಾಗಲಕೋಟ, ಜು23: ಸಜ್ಜಲಶ್ರೀ ನರ್ಸಿಂಗ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯದ, ಸಮುದಾಯ ಆರೋಗ್ಯ ಶೂಶ್ರುಷಾ ವಿಭಾಗದ ವತಿಯಿಂದ, ಪ್ರಾಚಾರ್ಯರಾದ ಡಾ. ದಿಲೀಪ್ ಎಸ್. ನಾಟೇಕರ ಅವರ ಮಾರ್ಗದರ್ಶನದಲ್ಲಿ ಕೆಲವಡಿ ಹಾಗೂ ತಿಮ್ಮಸಾಗರ ಗ್ರಾಮಗಳ ಶ್ರೀ ಲಕ್ಷ್ಮೀರಂಗನಾಥ ಪ್ರೌಢಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಯಕ್ತಿಕ ಸ್ವಚ್ಚತೆ, ದುಷ್ಚಟಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಶೇಖರ ಹೀರೆಗೌಡರ ಅವರು, ಜೀವನದಲ್ಲಿ ಉತ್ತಮ ಆರೋಗ್ಯ ಹೊಂದಲು ಸ್ವಚ್ಛತೆ ಅತಿ ಮುಖ್ಯ ಹಾಗೂ ಇಂದಿನ ಮಕ್ಕಳು ಮೊಬೈಲ್‍ಗಳ ಅತಿಯಾದ ಬಳಕೆಯಿಂದ ದಾರಿ ತಪ್ಪುತ್ತಿರುವುದು ದುರಾದೃಷ್ಟಕರ ಸಂಗತಿ ಆದ್ದರಿಂದ ಮಕ್ಕಳು ಸಮಯದ ಸರಿಯಾದ ಬಳಕೆಯಿಂದ ಜೀವನದ ಶಿಸ್ತನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶಿಲ್ಪಾ ಎನ್ ಕೂಗಲಿ ಹಾಗೂ ಪ್ರಾದ್ಯಾಪಕರಾದ, ರೇಣುಕರಾಜ. ನಾಗಮ್ಮನವರ, ಜಗದೀಶ ಹೀರೆಮಠ, ಕಿರಣ ಕಲಕಬಂಡಿ ಹಾಗೂ ಲಕ್ಷ್ಮೀರಂಗನಾಥ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ವಿ.ಪಾಟೀಲ ಮತ್ತು ಎಲ್ಲ ಸಹ ಶಿಕ್ಷಕರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಣಿ ಶ್ರೀಮತಿ ಎಸ್. ಎಸ್. ಬಾಗಲಕೋಟೆ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಎರಡೂ ಶಾಲೆಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.