ಅರೋಪಿ ಬಂಧನ -೯೩ ಗ್ರಾಮ್ ಗಾಂಜಾ ವಶ
ಕೋಲಾರ,ಜು,೨೩- ಮುಳಬಾಗಿಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊರ್ವ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಅತನನ್ನು ಬಂಧಿಸಿ ಪರಿಶೀಲಿಸಿದಾಗ ಅಂದಾಜು ಮೌಲ್ಯ ೫೦ ಸಾವಿರ ಮೌಲ್ಯದ ೯೩೦ ಗ್ರಾಮ್ ಗಾಂಜಾವು ಪತ್ತೆಯಾಗಿದೆ.
ಬಂಧಿತ ಅರೋಪಿಯನ್ನು ಸೈಯದ್ ಸುಲ್ತಾನ ಬಿನ್ ಸೈಯದ್ ಸರ್ದಾರ್ (೨೫) ಎಂದು ಗುರುತಿಸಲಾಗಿದೆ. ಮುಳಬಾಗಿಲು ಪಟ್ಟಣದ ಮಂಜುನಾಥ್ ಕಾಲೂನಿಯ ಕಾಲೇಜ್ ಹಿಂಭಾಗದಲ್ಲಿ ಬಂಧಿತನಾಗಿದ್ದಾನೆ. ಅರೋಪಿಯ ಬ್ಯಾಗ್‌ನ್ನು ಅನುಮಾನಸ್ಪದವಾಗಿ ಪರಿಶೀಲಿಸಿದಾಗ ಸುಮಾರು ೯೩೦ ಗ್ರಾಮ್ ( ೫೦ ಸಾವಿರ ರೂ ಮೌಲ್ಯದ) ಗಾಂಜಾ ಪತ್ತೆ ಯಾಗಿದೆ. ಈತನಿಗೆ ನೆರೆಯ ರಾಜ್ಯದ ಪುಂಗನೂರು ಭಗತ್ ಸಿಂಗ್ ಕಾಲೂನಿಯ ಬಾಲಕೃಷ್ಣ ಎಂಬಾತ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದನೆಂದು ತಿಳಿಸಿದ್ದಾನೆ. ಅವನು ತಂದು ಕೊಡುತ್ತಿದ್ದ ಗಾಂಜಾವನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪ್ಯಾಕ್ ಮಾಡಿ ಅದನ್ನು ಕಾಲೇಜಿನ ಬಳಿ ಮಾರಾಟ ಮಾಡುವ ಮೂಲಕ ಸುಲಭವಾಗಿ ಹಣವನ್ನು ಗಳಿಸುತ್ತಿದ್ದನೆಂದು ವಿಚಾರಣೆಯಲ್ಲಿ ವಿವರಿಸಿದ್ದಾನೆ.
ಜಾಮೀರಿಯ ಮಸೀದಿ ಬಳಿಯ ಶಾಮೀರ್ ಮೊಹಲ್ಲಾ ನಿವಾಸಿಯಾಗಿದ್ದು ಈತನ ಸ್ವಂತ ಸ್ಥಳ ಶ್ರೀನಿವಾಸಪುರದ ಇಂದಿರಾನಗರ ನಿವಾಸಿಯಾಗಿದ್ದು, ಗಾರೆ ಕೆಲಸದ ವೃತ್ತಿಯನ್ನು ಮಾಡುತ್ತಿದ್ದನೆಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಅರೋಪಿಯ ವಿರುದ್ದ ಪ್ರಕರಣವನ್ನು ದಾಖಲಿಸಿ ಕೊಂಡಿದ್ದು, ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡೆಸಿದಾಗ ನ್ಯಾಯಾಂಗ ಬಂಧನಕ್ಕೆ ಒಳಪಡೆಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿಖಿಲ್ ಹಾಗೂ ಎ.ಎಸ್.ಪಿ. ರವಿಶಂಕರ್ ಮತ್ತು ಜಗದೀಶ್ ಅವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ನಂದಿಕುಮಾರ್ ನೇತ್ರತ್ವದಲ್ಲಿ ನಗರಠಾಣೆಯ ಅರಕ್ಷಕ ನಿರೀಕ್ಷಕರಾದ ಶಿವಕುಮಾರ್ ಹೆಚ್.ಎಂ. ಮತ್ತು ಸಿಬ್ಬಂದಿವರ್ಗವು ಕಾರ್ಯಚರಣೆ ನಡೆಸಿದೆ.